Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 3:17 - ಪರಿಶುದ್ದ ಬೈಬಲ್‌

17 ಏಲಿಯು, “ಯೆಹೋವನು ನಿನಗೆ ಹೇಳಿದ್ದೇನು? ನನ್ನೊಂದಿಗೆ ಅದನ್ನು ಮುಚ್ಚಿಡಬೇಡ. ಆತನು ನಿನ್ನೊಂದಿಗೆ ಆಡಿದ ಮಾತುಗಳಲ್ಲಿ ಏನನ್ನಾದರೂ ಮುಚ್ಚಿಟ್ಟರೆ ಆತನು ನಿನ್ನನ್ನು ಶಿಕ್ಷಿಸುತ್ತಾನೆ” ಎಂದು ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಆಗ ಏಲಿಯು ಅವನಿಗೆ, “ಯೆಹೋವನು ನಿನಗೆ ತಿಳಿಸಿದ್ದೇನು? ಆತನ ಮಾತುಗಳಲ್ಲಿ ಒಂದನ್ನಾದರೂ ಮುಚ್ಚಿಡಬೇಡ; ಮುಚ್ಚಿಟ್ಟರೆ ಆತನು ಬೇಕಾದ ಹಾಗೆ ನಿನ್ನನ್ನು ದಂಡಿಸಲಿ” ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಏಲಿ ಅವನಿಗೆ, “ಸರ್ವೇಶ್ವರ ನಿನಗೆ ತಿಳಿಸಿದ್ದೇನು? ಅವರ ಮಾತುಗಳಲ್ಲಿ ಒಂದನ್ನಾದರೂ ಮರೆಮಾಡಬೇಡ; ಮಾಡಿದೆಯಾದರೆ ಸರ್ವೇಶ್ವರ ಇಷ್ಟಬಂದ ಹಾಗೆ ನಿನ್ನನ್ನು ದಂಡಿಸಲಿ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಆಗ ಏಲಿಯು ಅವನಿಗೆ - ಯೆಹೋವನು ನಿನಗೆ ತಿಳಿಸಿದ್ದೇನು? ಆತನ ಮಾತುಗಳಲ್ಲಿ ಒಂದನ್ನಾದರೂ ಮುಚ್ಚಬೇಡ; ಮುಚ್ಚಿದರೆ ಆತನು ಬೇಕಾದ ಹಾಗೆ ನಿನ್ನನ್ನು ದಂಡಿಸಲಿ ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಏಲಿಯು ಅವನಿಗೆ, “ಅವರು ನಿನಗೆ ಹೇಳಿದ ಮಾತೇನು? ನನಗೆ ಅದನ್ನು ಮರೆಮಾಡಬೇಡ. ಅವರು ನಿನಗೆ ಹೇಳಿದ ಸಕಲ ವಾರ್ತೆಗಳಲ್ಲಿ ನೀನು ಯಾವುದನ್ನಾದರೂ ನನಗೆ ಮರೆಮಾಡಿದರೆ, ದೇವರು ನಿನ್ನನ್ನು ದಂಡಿಸಲಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 3:17
18 ತಿಳಿವುಗಳ ಹೋಲಿಕೆ  

ಅಂದು ಹೊತ್ತು ಇಳಿಯುವ ಮೊದಲೇ ಜನರು ದಾವೀದನಿಗೆ ಊಟ ಮಾಡುವಂತೆ ಒತ್ತಾಯಿಸಿದರು. ಆದರೆ ದಾವೀದನು, “ಸೂರ್ಯನು ಮುಳುಗುವುದಕ್ಕೆ ಮುಂಚಿತವಾಗಿ ನಾನು ರೊಟ್ಟಿಯನ್ನಾಗಲಿ ಇತರ ಆಹಾರವನ್ನಾಗಲಿ ತಿಂದರೆ, ದೇವರು ನನ್ನನ್ನು ದಂಡಿಸಲಿ ಅಥವಾ ನನಗೆ ಕೇಡು ಬರಮಾಡಲಿ” ಎಂದು ಪ್ರತಿಜ್ಞೆ ಮಾಡಿದನು.


ನೀನು ಸಾಯುವಲ್ಲೇ ನಾನೂ ಸಾಯುವೆನು; ಅಲ್ಲಿಯೇ ನನಗೆ ಸಮಾಧಿಯಾಗಬೇಕು. ಈ ಪ್ರತಿಜ್ಞೆಯನ್ನು ನಾನು ಪೂರ್ಣಗೊಳಿಸದಿದ್ದರೆ ನನ್ನನ್ನು ಶಿಕ್ಷಿಸು ಎಂದು ನಾನು ಯೆಹೋವನಲ್ಲಿ ಕೇಳಿಕೊಳ್ಳುತ್ತೇನೆ. ಮರಣವು ಮಾತ್ರ ನಮ್ಮಿಬ್ಬರನ್ನು ಅಗಲಿಸಬಲ್ಲದು” ಎಂದು ದೃಢವಾಗಿ ಹೇಳಿದಳು.


ಆದರೆ ಯೇಸು ಮೌನವಾಗಿದ್ದನು. ಪ್ರಧಾನಯಾಜಕನು ಮತ್ತೆ ಯೇಸುವಿಗೆ, “ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ಕೇಳುತ್ತಿದ್ದೇನೆ, ನೀನು ದೇವಕುಮಾರನಾದ ಕ್ರಿಸ್ತನೋ? ನಮಗೆ ತಿಳಿಸು” ಎಂದನು.


ಆದರೆ ಯಾಕೋಬಿನ ಜನರೇ, ನಾನು ನಿಮಗೆ ಹೇಳಲೇಬೇಕು. ನಿಮ್ಮ ದುಷ್ಟತನದ ನಿಮಿತ್ತ ಯೆಹೋವನು ತನ್ನ ತಾಳ್ಮೆಯನ್ನು ಕಳೆದುಕೊಂಡಿದ್ದಾನೆ. ನೀವು ನ್ಯಾಯವಾದ ರೀತಿಯಲ್ಲಿ ಜೀವಿಸುತ್ತಿದ್ದರೆ ನಾನು ನಿಮಗೆ ಒಳ್ಳೆಯ ಸಂಗತಿಗಳನ್ನು ತಿಳಿಸುತ್ತಿದ್ದೆ.


ಆಗ ದಾನಿಯೇಲನು (ಬೇಲ್ತೆಶಚ್ಚರನು) ಸುಮಾರು ಒಂದು ಗಂಟೆಯವರೆಗೆ ಮೌನವಾಗಿದ್ದನು. ಅವನ ಬುದ್ಧಿಗೆ ತೋರಿದ ವಿಷಯಗಳು ಅವನನ್ನು ಗಾಬರಿಪಡಿಸಿದವು. ಆಗ ರಾಜನು, “ಬೇಲ್ತೆಶಚ್ಚರನೇ, ಕನಸು ಅಥವಾ ಕನಸಿನ ಅರ್ಥವು ನಿನ್ನನ್ನು ಭಯಗೊಳಿಸದಿರಲಿ” ಎಂದು ಧೈರ್ಯ ಹೇಳಿದನು. ಆಗ ಬೇಲ್ತೆಶಚ್ಚರನು ಅರಸನಿಗೆ, “ನನ್ನ ಒಡೆಯನೇ, ಈ ಕನಸು ನಿನ್ನ ವಿರೋಧಿಗಳಿಗೆ ಫಲಿಸಲಿ. ಇದರ ಅರ್ಥವು ನಿನ್ನ ವಿರೋಧಿಗಳ ಅನುಭವಕ್ಕೆ ಬರಲಿ ಎಂದು ನಾನು ಹಾರೈಸುತ್ತೇನೆ.


ನೀತಿವಂತನು ನನ್ನನ್ನು ಸರಿಪಡಿಸಿದರೆ ಅದು ನನಗೇ ಒಳ್ಳೆಯದು. ನಿನ್ನ ಭಕ್ತರು ನನ್ನನ್ನು ಗದರಿಸಿದರೆ ಅದು ನನಗೇ ಒಳ್ಳೆಯದು. ಆದರೆ ಕೆಟ್ಟವರ ಕೆಟ್ಟಕೃತ್ಯಗಳ ವಿರೋಧವಾಗಿ ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ.


ಆದರೆ ಅಹಾಬನು, “ಯೆಹೋವನ ಶಕ್ತಿಯಿಂದ ನೀನು ಮಾತನಾಡುತ್ತಿಲ್ಲ. ನೀನು ನಿನ್ನ ಸ್ವಂತ ಮಾತುಗಳನ್ನು ಹೇಳುತ್ತಿರುವೆ. ನನಗೆ ನೀನು ನಿಜವನ್ನು ಹೇಳು! ನಾನು ನಿನಗೆ ಎಷ್ಟು ಸಲ ಹೇಳಬೇಕು? ಯೆಹೋವನು ತಿಳಿಸುವುದನ್ನೇ ನನಗೆ ಹೇಳು!” ಎಂದು ಕೇಳಿದನು.


ಅಲ್ಲದೆ ಅಮಾಸನಿಗೆ, ‘ನೀನು ನನ್ನ ಕುಟುಂಬದ ಒಂದು ಭಾಗವಾಗಿರುವೆ. ನಾನು ನಿನ್ನನ್ನು ಯೋವಾಬನ ಸ್ಥಾನದಲ್ಲಿ ಸೇನಾಪತಿಯನ್ನಾಗಿ ಮಾಡದೆ ಹೋದರೆ, ದೇವರು ನನ್ನನ್ನು ದಂಡಿಸಲಿ’ ಎಂದು ಹೇಳಿ” ಎಂದನು.


ನನ್ನ ತಂದೆಯು ನಿನಗೆ ಕೇಡುಮಾಡಬೇಕೆಂದಿದ್ದರೆ, ಅದನ್ನು ನಾನು ನಿನಗೆ ತಿಳಿಸಿ, ನೀನು ಸುರಕ್ಷಿತವಾಗಿರಲು ಅವಕಾಶ ಮಾಡಿಕೊಡುತ್ತೇನೆ. ಈ ಕಾರ್ಯವನ್ನು ನಾನು ಮಾಡದೆ ಹೋದರೆ ಯೆಹೋವನು ನನ್ನನ್ನು ದಂಡಿಸಲಿ. ಯೆಹೋವನು ನನ್ನ ತಂದೆಯ ಜೊತೆಯಲ್ಲಿದ್ದಂತೆ ನಿನ್ನ ಜೊತೆಯೂ ಇರಲಿ.


ಆದರೆ ಏಲಿಯು, “ಸಮುವೇಲನೇ, ನನ್ನ ಮಗನೇ” ಎಂದು ಕರೆದನು. ಸಮುವೇಲನು, “ಇಗೋ, ಇದ್ದೇನೆ” ಅಂದನು.


ನಾಳೆ ಬೆಳಗಾಗುವುದರೊಳಗಾಗಿ ನಾಬಾಲನ ಕುಟುಂಬದಲ್ಲಿ ಒಬ್ಬರಾದರೂ ಜೀವದಿಂದ ಉಳಿದುಕೊಳ್ಳಲು ನಾನು ಅವಕಾಶಕೊಟ್ಟರೆ ದೇವರು ನನ್ನನ್ನು ದಂಡಿಸಲಿ” ಎಂದು ಹೇಳಿದ್ದನು.


ರಾಜನಾದ ಚಿದ್ಕೀಯನು ಪ್ರವಾದಿಯಾದ ಯೆರೆಮೀಯನನ್ನು ಒಬ್ಬನ ಮೂಲಕ ಯೆಹೋವನ ಆಲಯದ ಮೂರನೇ ಪ್ರವೇಶದ್ವಾರಕ್ಕೆ ಕರೆಸಿದನು. ರಾಜನು ಅವನಿಗೆ, “ಯೆರೆಮೀಯನೇ, ನಾನು ನಿನಗೆ ಒಂದು ವಿಷಯವನ್ನು ಕೇಳಲಿದ್ದೇನೆ. ನನ್ನಿಂದ ಏನನ್ನೂ ಮುಚ್ಚಿಡಬೇಡ. ಎಲ್ಲವನ್ನು ಪ್ರಾಮಾಣಿಕವಾಗಿ ನನಗೆ ಹೇಳು” ಎಂದನು.


ಆಗ ಪ್ರವಾದಿಯಾದ ಯೆರೆಮೀಯನು, “ನಾನು ಏನು ಮಾಡಬೇಕೆಂದು ನೀವು ಬಯಸುವಿರೆಂಬುದು ನನಗೆ ಗೊತ್ತು. ನೀವು ಹೇಳಿದಂತೆಯೇ, ನಿಮ್ಮ ದೇವರಾದ ಯೆಹೋವನನ್ನು ಪ್ರಾರ್ಥಿಸುವೆನು. ಯೆಹೋವನು ಹೇಳಿದ್ದನ್ನೆಲ್ಲವನ್ನು ನಾನು ನಿಮಗೆ ಹೇಳುತ್ತೇನೆ. ನಾನು ನಿಮ್ಮಿಂದ ಏನನ್ನೂ ಮುಚ್ಚಿಡುವದಿಲ್ಲ” ಎಂದನು.


ಬಿಳಾಮನು ಬಾಲಾಕನ ಬಳಿಗೆ ಬಂದಾಗ ಅವನು ಇನ್ನೂ ಯಜ್ಞಪೀಠದ ಬಳಿಯಲ್ಲಿ ನಿಂತಿದ್ದನು. ಮೋವಾಬ್ಯರ ಪ್ರಧಾನರು ಅವನ ಸಂಗಡ ಇದ್ದರು. ಬಾಲಾಕನು, “ಯೆಹೋವನು ಏನು ಹೇಳಿದ್ದಾನೆ?” ಎಂದು ಕೇಳಿದನು.


ಸೌಲನು, “ನಾನು ನನ್ನ ಆಣೆಯನ್ನು ನೆರವೇರಿಸದಿದ್ದರೆ ಯೆಹೋವನು ಬಹುಶಃ ನನಗೆ ಬಹಳ ಕೆಟ್ಟದ್ದನ್ನು ಮಾಡಬಹುದು. ಯೋನಾತಾನನು ಸಾಯಲೇಬೇಕು” ಎಂದು ಹೇಳಿದನು.


ಯೆಹೋವನು ಹೇಳಿರುವ ಸಂಗತಿಗಳು ನಿಜವಾಗಿಯೂ ಸಂಭವಿಸುತ್ತವೆ ಎಂದು ನಾನು ಪ್ರಮಾಣ ಮಾಡುತ್ತೇನೆ. ಸೌಲನ ವಂಶದವರಿಂದ ರಾಜ್ಯಾಧಿಕಾರವನ್ನು ಕಿತ್ತುಕೊಂಡು ದಾವೀದನಿಗೆ ಕೊಡುವುದಾಗಿ ಯೆಹೋವನು ಹೇಳಿದ್ದಾನೆ. ಯೆಹೋವನು ಇಸ್ರೇಲಿಗೂ ಯೆಹೂದಕ್ಕೂ ದಾವೀದನನ್ನು ರಾಜನನ್ನಾಗಿ ಮಾಡುತ್ತಾನೆ. ಅವನು ದಾನಿನಿಂದ ಬೇರ್ಷೆಬದವರೆಗೆ ಆಳುತ್ತಾನೆ. ಈ ಸಂಗತಿಗಳು ನೆರವೇರುವುದಕ್ಕೆ ನಾನು ಸಹಾಯ ಮಾಡದಿದ್ದರೆ ದೇವರು ನನಗೆ ಕೆಟ್ಟದ್ದನ್ನು ಮಾಡಲಿ” ಎಂದು ಹೇಳಿದನು.


ರಾಜನಾದ ದಾವೀದನು ಆ ಸ್ತ್ರೀಗೆ, “ನಾನು ಕೇಳುವ ಪ್ರಶ್ನೆಗೆ ನೀನು ಉತ್ತರವನ್ನು ಹೇಳಲೇಬೇಕು” ಎಂದು ಉತ್ತರಿಸಿದನು. ಆ ಸ್ತ್ರೀಯು, “ರಾಜನಾದ ನನ್ನ ಒಡಯನೇ, ದಯವಿಟ್ಟು ನಿನ್ನ ಪ್ರಶ್ನೆಯನ್ನು ಕೇಳು” ಎಂದಳು.


ಇದಲ್ಲದೆ ರಾಜನು, “ಈ ದಿನದ ಅಂತ್ಯದೊಳಗೆ ನಾನು ಶಾಫಾಟನ ಮಗನಾದ ಎಲೀಷನ ತಲೆಯನ್ನು ಅವನ ದೇಹದ ಮೇಲೆ ಉಳಿಯುವಂತೆ ಮಾಡಿದರೆ ದೇವರು ನನ್ನನ್ನು ದಂಡಿಸಲಿ!” ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು