Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 25:39 - ಪರಿಶುದ್ದ ಬೈಬಲ್‌

39 ನಾಬಾಲನು ಸತ್ತನೆಂಬುದು ದಾವೀದನಿಗೆ ತಿಳಿಯಿತು. ದಾವೀದನು, “ಯೆಹೋವನಿಗೆ ಸ್ತೋತ್ರವಾಗಲಿ! ನಾಬಾಲನು ನನ್ನ ಬಗ್ಗೆ ಕೆಟ್ಟಮಾತುಗಳನ್ನು ಆಡಿದನು, ಆದರೆ ಯೆಹೋವನು ನನಗೆ ಸಹಾಯ ಮಾಡಿದನು. ನಾನು ತಪ್ಪುಮಾಡದಂತೆ ಯೆಹೋವನು ನನ್ನನ್ನು ತಡೆದನು. ನಾಬಾಲನು ಕೆಟ್ಟದನ್ನು ಮಾಡಿದ್ದರಿಂದ ಯೆಹೋವನು ಅವನಿಗೆ ಸಾವನ್ನು ಬರಮಾಡಿದನು” ಎಂದು ಹೇಳಿದನು. ನಂತರ ದಾವೀದನು ಅಬೀಗೈಲಳಿಗೆ ಒಂದು ಸಂದೇಶವನ್ನು ಕಳುಹಿಸಿ ತನ್ನ ಹೆಂಡತಿಯಾಗಬೇಕೆಂದು ಕೇಳಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

39 ನಾಬಾಲನು ಸತ್ತನೆಂಬ ವರ್ತಮಾನವು ದಾವೀದನು ಕೇಳಿ, “ನನಗೆ ಅಪಮಾನ ಮಾಡಿದ ನಾಬಾಲನಿಗೆ ಮುಯ್ಯಿತೀರಿಸಿದಂತ ಯೆಹೋವನಿಗೆ ಸ್ತೋತ್ರವಾಗಲಿ. ಆತನು ನನ್ನನ್ನು ಕೆಟ್ಟತನಕ್ಕೆ ದೂರಮಾಡಿ ನಾಬಾಲನ ಕೆಟ್ಟತನವನ್ನು ಅವನ ತಲೆಯ ಮೇಲೆಯೇ ಹೊರಿಸಿದನಲ್ಲಾ” ಎಂದು ಹೇಳಿದನು. ಅನಂತರ ಅವನು ಅಬೀಗೈಲಳನ್ನು ತನಗೆ ಹೆಂಡತಿಯಾಗಿರಬೇಕೆಂದು ದೂತರ ಮೂಲಕ ಹೇಳಿ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

39 ನಾಬಾಲನು ಸತ್ತನೆಂಬ ವರ್ತಮಾನವನ್ನು ದಾವೀದನು ಕೇಳಿದನು. “ನನಗೆ ಅಪಮಾನ ಮಾಡಿದ ನಾಬಾಲನಿಗೆ ಮುಯ್ಯಿ ತೀರಿಸಿದಂಥ ಸರ್ವೇಶ್ವರನಿಗೆ ಸ್ತೋತ್ರವಾಗಲಿ! ಅವರು ನನ್ನನ್ನು ಕೆಟ್ಟತನದಿಂದ ದೂರಮಾಡಿ ನಾಬಾಲನ ಕೆಟ್ಟತನವನ್ನು ಅವನ ತಲೆಯ ಮೇಲೆಯೇ ಹೊರಿಸಿದ್ದಾರೆ,” ಎಂದನು. ಅನಂತರ ಅವನು, ಅಬೀಗೈಲಳು ತನಗೆ ಹೆಂಡತಿಯಾಗಬೇಕೆಂದು ದೂತರನ್ನು ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

39 ನಾಬಾಲನು ಸತ್ತನೆಂಬ ವರ್ತಮಾನವನ್ನು ದಾವೀದನು ಕೇಳಿ - ನನಗೆ ಅಪಮಾನ ಮಾಡಿದ ನಾಬಾಲನಿಗೆ ಮುಯ್ಯಿತೀರಿಸಿದಂಥ ಯೆಹೋವನಿಗೆ ಸ್ತೋತ್ರವಾಗಲಿ. ಆತನು ನನ್ನನ್ನು ಕೆಟ್ಟತನಕ್ಕೆ ದೂರಮಾಡಿ ನಾಬಾಲನ ಕೆಟ್ಟತನವನ್ನು ಅವನ ತಲೆಯ ಮೇಲೆಯೇ ಹೊರಿಸಿದನಲ್ಲಾ ಅಂದನು. ಅನಂತರ ಅವನು ಅಬೀಗೈಲಳು ತನಗೆ ಹೆಂಡತಿಯಾಗಬೇಕೆಂದು ದೂತರನ್ನು ಕಳುಹಿಸಿದನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

39 ನಾಬಾಲನು ಸತ್ತನೆಂದು ದಾವೀದನು ಕೇಳಿದಾಗ, “ನನ್ನ ನಿಂದೆಯ ವ್ಯಾಜ್ಯವನ್ನು ನಾಬಾಲನಿಂದ ವಿಚಾರಿಸಿ, ತನ್ನ ಸೇವಕನನ್ನು ಕೇಡು ಮಾಡಗೊಡದ ಹಾಗೆ ತಡೆದ ಯೆಹೋವ ದೇವರು ಸ್ತುತಿಹೊಂದಲಿ. ಏಕೆಂದರೆ ಯೆಹೋವ ದೇವರು ನಾಬಾಲನ ಕೆಟ್ಟತನವನ್ನು ಅವನ ತಲೆಯ ಮೇಲೆ ಬರಮಾಡಿದರು,” ಎಂದನು. ದಾವೀದನು ಅಬೀಗೈಲಳನ್ನು ತನಗೆ ಹೆಂಡತಿಯಾಗಿ ತೆಗೆದುಕೊಳ್ಳುವುದಕ್ಕಾಗಿ ಅವಳ ಸಂಗಡ ಮಾತನಾಡಲು ಸೇವಕರನ್ನು ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 25:39
29 ತಿಳಿವುಗಳ ಹೋಲಿಕೆ  

ಯಾಕೆಂದರೆ ಯೆಹೋವನು ಅವರ ಪರವಾಗಿ ವಾದಿಸುವನು; ಅವರನ್ನು ದರೋಡೆ ಮಾಡಬೇಕೆಂದಿರುವವರ ಪ್ರಾಣಗಳನ್ನು ತೆಗೆದುಹಾಕುವನು.


ಇಸ್ರೇಲರ ದೇವರಾದ ಯೆಹೋವನಾಣೆ, ನೀನು ನನ್ನನ್ನು ಸಂಧಿಸಲು ಬೇಗನೆ ಬರದಿದ್ದರೆ ನಾಳೆ ಹೊತ್ತಾರೆಯ ವೇಳೆಗೆ ನಾಬಾಲನ ಕುಟುಂಬದಲ್ಲಿ ಒಬ್ಬನೂ ಜೀವಸಹಿತ ಉಳಿಯುತ್ತಿರಲಿಲ್ಲ” ಎಂದು ಹೇಳಿದನು.


ಮುಗ್ದಜನರನ್ನು ಕೊಂದು ಅಪರಾಧಿಯಾಗದಂತೆ ಯೆಹೋವನು ನಿನ್ನನ್ನು ಕಾಪಾಡಿದ್ದಾನೆ. ಯೆಹೋವನ ಆಣೆಯಾಗಿಯೂ ನಿನ್ನ ಆಣೆಯಾಗಿಯೂ ನಿನ್ನ ಶತ್ರುಗಳೂ ನಿನಗೆ ಕೇಡುಮಾಡುವವರೂ ನಾಬಾಲನಂತಾಗಲಿ.


ಅವರು ತಮ್ಮ ಕುಯುಕ್ತಿಗೆ ತಕ್ಕ ದಂಡನೆಯನ್ನು ಹೊಂದುವರು. ಅವರು ಇತರರ ವಿಷಯದಲ್ಲಿ ಕ್ರೂರವಾಗಿ ನಡೆದುಕೊಂಡರು. ಅವರು ಮಾಡಿದ ಹಿಂಸೆಯು ಅವರಿಗೇ ಸಂಭವಿಸುವುದು.


ನೀನು ನನ್ನ ತಂದೆಯಾದ ದಾವೀದನಿಗೆ ವಿರುದ್ಧವಾಗಿ ಅನೇಕ ಕೆಟ್ಟಕಾರ್ಯಗಳನ್ನು ಮಾಡಿರುವೆ ಎಂಬುದು ನಿನಗೆ ತಿಳಿದಿದೆ. ಈಗ ನಿನ್ನ ಆ ಕೆಟ್ಟಕಾರ್ಯಗಳಿಗಾಗಿ ಯೆಹೋವನು ನಿನ್ನನ್ನು ದಂಡಿಸುತ್ತಾನೆ.


ಆಗ ದಾವೀದನು ಅಬೀಗೈಲಳಿಗೆ, “ಇಸ್ರೇಲರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ದೇವರೇ ನಿನ್ನನ್ನು ನನ್ನ ಬಳಿಗೆ ಕಳುಹಿಸಿದ್ದಾನೆ.


ಯೆಹೋವನೇ ನಮ್ಮಿಬ್ಬರಿಗೂ ನ್ಯಾಯಾಧೀಶನಾಗಿದ್ದು ತೀರ್ಪು ನೀಡಲಿ. ಯೆಹೋವನು ನನ್ನ ಪರವಾಗಿ ವಾದಿಸಿ ನಾನು ನೀತಿವಂತನೆಂದು ನಿರೂಪಿಸಿ ನನ್ನನ್ನು ನಿನ್ನಿಂದ ರಕ್ಷಿಸುತ್ತಾನೆ” ಎಂದು ಹೇಳಿದನು.


ಯಾರಾದರೂ ನನಗೆ ತೊಂದರೆ ಮಾಡಲು ಪ್ರಯತ್ನಿಸಿದರೆ, ಪ್ರಭುವು ನನ್ನನ್ನು ರಕ್ಷಿಸುವನು. ಪ್ರಭುವು ನನ್ನನ್ನು ಸುರಕ್ಷಿತವಾಗಿ ತನ್ನ ಪರಲೋಕರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಪ್ರಭುವಿಗೆ ಮಹಿಮೆಯಾಗಲಿ.


ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಸಂಪೂರ್ಣವಾಗಿ ಪರಿಶುದ್ಧಗೊಳಿಸಲೆಂದು ಪ್ರಾರ್ಥಿಸುತ್ತೇವೆ. ಪ್ರಭುವಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ ನಿಮ್ಮ ಆತ್ಮ, ಶರೀರ, ಪ್ರಾಣಗಳು ದೋಷರಹಿತವಾಗಿರಲೆಂದು ಪ್ರಾರ್ಥಿಸುತ್ತೇವೆ.


ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ. ಆದ್ದರಿಂದ ಆತನು ನನ್ನ ಮೇಲೆ ಕೋಪಿಸಿಕೊಂಡಿದ್ದಾನೆ. ಆದರೆ ನನ್ನ ಪರವಾಗಿ ಆತನು ವಾದಿಸುತ್ತಾನೆ. ನನಗೆ ಒಳ್ಳೆಯದನ್ನೇ ಆತನು ಮಾಡುತ್ತಾನೆ. ಆ ಬಳಿಕ ನನ್ನನ್ನು ಹೊರಗೆ ಬೆಳಕಿಗೆ ತರುವನು. ಆತನು ನೀತಿವಂತನೆಂಬುದು ಆಗ ನನಗೆ ತಿಳಿಯುವುದು.


ನಮಗೆ ಚಿಕ್ಕ ತಂಗಿಯಿದ್ದಾಳೆ, ಆಕೆಯ ಸ್ತನಗಳು ಇನ್ನೂ ಬೆಳೆದಿಲ್ಲ. ಆಕೆಯ ನಿಶ್ಚಿತಾರ್ಥ ದಿನದಲ್ಲಿ ನಮ್ಮ ತಂಗಿಗೋಸ್ಕರ ನಾವೇನು ಮಾಡಬೇಕು?


ಲಾವಣ್ಯ ನಿನ್ನನ್ನು ಮೋಸಗೊಳಿಸಬಲ್ಲದು; ಸೌಂದರ್ಯ ತಾತ್ಕಾಲಿಕವಾದದ್ದು. ಆದರೆ ಯೆಹೋವನಲ್ಲಿ ಭಯಭಕ್ತಿಯುಳ್ಳ ಹೆಂಗಸೇ, ಹೊಗಳಿಕೆಗೆ ಪಾತ್ರಳು.


ಒಳ್ಳೆಯ ಹೆಂಡತಿಯನ್ನು ಪಡೆದುಕೊಳ್ಳುವುದು ತುಂಬಾ ಕಷ್ಟ. ಆಭರಣಕ್ಕಿಂತಲೂ ಹೆಚ್ಚು ಬೆಲೆಬಾಳುವಳು.


ಮಕ್ಕಳು ತಂದೆಯಿಂದ ಮನೆಗಳನ್ನು ಮತ್ತು ಹಣವನ್ನು ಸ್ವಾಸ್ತ್ಯವಾಗಿ ಪಡೆದುಕೊಳ್ಳುವರು. ವಿವೇಕಿಯಾದ ಹೆಂಡತಿಯಾದರೋ ಯೆಹೋವನಿಂದ ಬಂದ ಉಡುಗೊರೆ.


ಹೆಂಡತಿಯುಳ್ಳವನು ಸಂತೋಷವನ್ನೇ ಪಡೆದುಕೊಂಡಿದ್ದಾನೆ; ಯೆಹೋವನು ಅವನ ಬಗ್ಗೆ ಸಂತೋಷಪಡುವನು.


ಮೊರ್ದೆಕೈಗೋಸ್ಕರ ಸಿದ್ಧಮಾಡಿದ್ದ ಗಲ್ಲುಮರಕ್ಕೆ ಸೇವಕರು ಹಾಮಾನನನ್ನು ತೂಗುಹಾಕಿದರು. ಅನಂತರ ರಾಜನ ಸಿಟ್ಟು ಇಳಿಯಿತು.


“ಇಸ್ರೇಲರು ಯುದ್ಧ ಸನ್ನದ್ಧರಾಗುತ್ತಿದ್ದಾರೆ; ಜನರು ಸ್ವಇಚ್ಛೆಯಿಂದ ಯುದ್ಧಕ್ಕೆ ಹೋಗಲು ಒಪ್ಪಿದ್ದಾರೆ; ಯೆಹೋವನಿಗೆ ಸ್ತೋತ್ರವಾಗಲಿ!


ನೀವು ಯಾವ ತಪ್ಪನ್ನೂ ಮಾಡದಿರಲಿ ಎಂಬುದಾಗಿ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮನ್ನು ಅಯೋಗ್ಯರೆಂದು ಜನರು ಭಾವಿಸಿಕೊಂಡರೂ ನೀವು ಒಳ್ಳೆಯದನ್ನು ಮಾಡುವುದೇ ಮುಖ್ಯ.


ದಾವೀದನ ಸೈನಿಕರು ಕರ್ಮೆಲಿಗೆ ಹೋಗಿ ಅಬೀಗೈಲಳಿಗೆ, “ದಾವೀದನು ನಿನ್ನನ್ನು ಕರೆತರಲು ಹೇಳಿದ್ದಾನೆ. ನಿನ್ನನ್ನು ತನ್ನ ಹೆಂಡತಿಯನ್ನಾಗಿ ಸ್ವೀಕರಿಸಿಕೊಳ್ಳಬೇಕೆಂಬುದು ದಾವೀದನ ಅಪೇಕ್ಷೆ” ಎಂದು ಹೇಳಿದರು.


ಯೆಹೋವನಾಣೆ, ಸೌಲನನ್ನು ಸ್ವತಃ ಯೆಹೋವನೇ ದಂಡಿಸುತ್ತಾನೆ. ಸೌಲನು ಸ್ವಾಭಾವಿಕನಾದ ಮರಣಹೊಂದಬಹುದು ಅಥವಾ ಯುದ್ಧದಲ್ಲಿ ಕೊಲ್ಲಲ್ಪಡಬಹುದು.


ಹಾಮಾನನ ಕುತಂತ್ರವನ್ನು ಎಸ್ತೇರ್ ರಾಣಿಯು ರಾಜನ ಸಂಗಡ ಮಾತಾಡುವುದರ ಮೂಲಕ ನಿರರ್ಥಕಗೊಳಿಸಿ ಅವನಿಗೂ ಅವನ ಕುಟುಂಬಕ್ಕೂ ಮರಣವಾಗುವಂತೆ ಮಾಡಿದಳು. ಹಾಮಾನನೂ ಅವನ ಗಂಡುಮಕ್ಕಳೂ ಗಲ್ಲಿಗೇರಿಸಲ್ಪಟ್ಟರು.


ನೀನು ಜನಾಂಗಗಳನ್ನು ಟೀಕಿಸಿ ಆ ದುಷ್ಟರನ್ನು ನಾಶಮಾಡಿದೆ. ನೀನು ಅವರ ಹೆಸರುಗಳನ್ನು ಜೀವಿತರ ಪಟ್ಟಿಯಿಂದ ಶಾಶ್ವತವಾಗಿ ಅಳಿಸಿಹಾಕಿರುವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು