1 ಸಮುಯೇಲ 2:33 - ಪರಿಶುದ್ದ ಬೈಬಲ್33 ನನ್ನ ಯಜ್ಞವೇದಿಕೆಯ ಬಳಿಯಲ್ಲಿ ಯಾಜಕಸೇವೆ ಮಾಡುವುದಕ್ಕಾಗಿ ನಾನು ಒಬ್ಬನನ್ನು ಉಳಿಸಿಕೊಳ್ಳುವೆನು. ಅವನು ಬಹುಮುಪ್ಪಿನವರೆಗೂ ಬದುಕುವನು. ಅವನ ಕಣ್ಣುಗಳು ಕಾಣದೆ ಹೋಗುವವರೆಗೂ ಬಲಹೀನನಾಗುವವರೆಗೂ ಅವನು ಬದುಕುವನು. ಉಳಿದ ನಿನ್ನ ಸಂತತಿಯವರೆಲ್ಲಾ ಖಡ್ಗದಿಂದ ಸಾಯುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201933 ನಾನು ನಿನ್ನ ಸಂತಾನವನ್ನು ನನ್ನ ಸಾನ್ನಿಧ್ಯ ಸೇವೆಯಿಂದ ತೆಗೆದುಹಾಕದೆ, ಒಬ್ಬನನ್ನಾದರೂ ಉಳಿಸಿದರೆ ಅವನು ನಿನ್ನ ಕಣ್ಣೀರಿಗೂ ಮತ್ತು ಮನೋವ್ಯಥೆಗೂ ಕಾರಣನಾಗುವನು. ನಿನ್ನ ಸಂತಾನದವರೆಲ್ಲರೂ ಕತ್ತಿಯಿಂದ ಸಂಹಾರವಾಗುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)33 ನನ್ನ ಸಾನ್ನಿಧ್ಯ ಸೇವೆಯಿಂದ ನಿಮ್ಮಲ್ಲಿ ಒಬ್ಬನನ್ನು ಉಳಿಸಿ ಮಿಕ್ಕವರನ್ನು ತೆಗೆದುಹಾಕುವೆನು. ಉಳಿಸಲಾದವನು ಕೂಡ ಕುರುಡನಾಗಿ ನಿನ್ನ ವ್ಯಥೆಗೆ ಕಾರಣನಾಗುವನು. ನಿನ್ನ ಸಂತಾನದವರೆಲ್ಲರು ಕತ್ತಿಯಿಂದ ಸಾಯುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)33 ನಾನು ನನ್ನ ಸಾನ್ನಿಧ್ಯಸೇವೆಯಿಂದ ತೆಗೆದುಹಾಕದೆ ಒಬ್ಬನನ್ನಾದರೂ ಉಳಿಸಿದರೆ ಅವನು ನಿನ್ನ ಕಣ್ಗೇಡಿಗೂ ಮನೋವ್ಯಥೆಗೂ ಕಾರಣನಾಗುವನು. ನಿನ್ನ ಸಂತಾನದವರೆಲ್ಲರೂ ಕತ್ತಿಯಿಂದ ಸಂಹೃತರಾಗುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ33 ನನ್ನ ಬಲಿಪೀಠದ ಸೇವೆಯಿಂದ ನಾನು ತೆಗೆದು ಬಿಡದ ಮನುಷ್ಯನು, ನಿನ್ನ ಕಣ್ಣುಗಳನ್ನು ಕುಂದಿಸಿ, ನಿನ್ನ ಹೃದಯವನ್ನು ವೇದನೆ ಪಡಿಸುವುದಕ್ಕೆ ಇರುವನು. ನಿನ್ನ ಮನೆಯ ಸಂತತಿಯವರೆಲ್ಲಾ ಯೌವನ ಪ್ರಾಯದಲ್ಲಿಯೇ ಖಡ್ಗದಿಂದ ಸಾಯುವರು. ಅಧ್ಯಾಯವನ್ನು ನೋಡಿ |