1 ಸಮುಯೇಲ 2:15 - ಪರಿಶುದ್ದ ಬೈಬಲ್15 ಆದರೆ ಏಲಿಯ ಮಕ್ಕಳು ಈ ರೀತಿ ಮಾಡುತ್ತಿರಲಿಲ್ಲ. ಯಜ್ಞವೇದಿಕೆಯ ಮೇಲೆ ಕೊಬ್ಬನ್ನು ಹೋಮ ಮಾಡುವುದಕ್ಕಿಂತ ಮೊದಲೇ ಅವರ ಸೇವಕರು ಯಜ್ಞಗಳನ್ನು ಅರ್ಪಿಸುವ ಜನರ ಬಳಿಗೆ ಹೋಗುತ್ತಿದ್ದರು. ಯಾಜಕನ ಸೇವಕನು, “ಯಾಜಕನಿಗೆ ಕರಿದು ಕೊಡಲು ಸ್ವಲ್ಪ ಮಾಂಸವನ್ನು ಕೊಡಿ. ಬೇಯಿಸಿದ ಮಾಂಸವನ್ನು ಯಾಜಕನು ನಿಮ್ಮಿಂದ ಸ್ವೀಕರಿಸಿಕೊಳ್ಳುವುದಿಲ್ಲ” ಎಂದು ಹೇಳುತ್ತಿದ್ದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ಇದಲ್ಲದೆ ಯಾಜಕನ ಆಳು ಕೊಬ್ಬನ್ನು ಹೋಮಮಾಡುವುದಕ್ಕಿಂತ ಮುಂಚೆಯೇ ಬಂದು ಯಜ್ಞವನ್ನರ್ಪಿಸುವವನಿಗೆ, “ಯಾಜಕನಿಗೋಸ್ಕರ ಸುಡತಕ್ಕ ಮಾಂಸವನ್ನು ಕೊಡು; ನೀನು ಬೇಯಿಸಿದ ಮಾಂಸವನ್ನು ಅವನು ತೆಗೆದುಕೊಳ್ಳುವುದಿಲ್ಲ; ಅವನಿಗೆ ಹಸಿಮಾಂಸವೇ ಬೇಕು” ಅನ್ನುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ಇದಲ್ಲದೆ, ಕೊಬ್ಬನ್ನು ಹೋಮಮಾಡುವುದಕ್ಕೆ ಮುಂಚೆಯೇ ಯಾಜಕನ ಆಳು ಬಂದು ಬಲಿಯರ್ಪಿಸುತ್ತಿದ್ದವನಿಗೆ, “ಹುರಿಯತಕ್ಕ ಮಾಂಸವನ್ನು ಯಾಜಕನಿಗೆ ಕೊಡು; ನೀವು ಬೇಯಿಸಿದ ಮಾಂಸವನ್ನು ಅವರು ತೆಗೆದುಕೊಳ್ಳುವುದಿಲ್ಲ; ಅವರಿಗೆ ಹಸಿ ಮಾಂಸವೇ ಬೇಕು,” ಎನ್ನುತ್ತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ಇದಲ್ಲದೆ ಯಾಜಕನ ಆಳು ಕೊಬ್ಬನ್ನು ಹೋಮಮಾಡುವದಕ್ಕಿಂತ ಮುಂಚೆಯೇ ಬಂದು ಯಜ್ಞವನ್ನರ್ಪಿಸುವವನಿಗೆ - ಯಾಜಕನಿಗೋಸ್ಕರ ಕರಿಯತಕ್ಕ ಮಾಂಸವನ್ನು ಕೊಡು; ನೀನು ಬೇಯಿಸಿದ ಮಾಂಸವನ್ನು ಅವನು ತೆಗೆದುಕೊಳ್ಳುವದಿಲ್ಲ; ಅವನಿಗೆ ಹಸೀ ಮಾಂಸವೇ ಬೇಕು ಅನ್ನುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಇದಲ್ಲದೆ ಕೊಬ್ಬನ್ನು ಬಲಿ ಅರ್ಪಿಸುವುದಕ್ಕಿಂತ ಮುಂಚೆ ಯಾಜಕನ ಸೇವಕನು ಬಂದು, ಬಲಿಯನ್ನು ಅರ್ಪಿಸುವವನ ಸಂಗಡ, “ಯಾಜಕನಿಗೆ ಸುಡುವುದಕ್ಕೆ ಮಾಂಸವನ್ನು ಕೊಡು. ಅವನು ನಿನ್ನ ಕೈಯಿಂದ ಬೆಂದ ಮಾಂಸವನ್ನು ತೆಗೆದುಕೊಳ್ಳುವುದಿಲ್ಲ. ಅದು ಹಸಿಯಾಗಿರಬೇಕು,” ಎನ್ನುತ್ತಿದ್ದನು. ಅಧ್ಯಾಯವನ್ನು ನೋಡಿ |
ನಿಮ್ಮ ಅನ್ಯೋನ್ಯತೆಯ ಭೋಜನದಲ್ಲಿ ಈ ಜನರು ಮುಳುಗಿಹೋದ ಬಂಡೆಗಳಂತಿದ್ದಾರೆ. ಅವರು ಭಯವಿಲ್ಲದೆ ನಿಮ್ಮ ಜೊತೆಯಲ್ಲಿ ತಿನ್ನುತ್ತಾರೆ. ಅವರು ತಮ್ಮ ಬಗ್ಗೆ ಮಾತ್ರ ಚಿಂತಿಸುವ ಕುರುಬರಾಗಿದ್ದಾರೆ. ಅವರು ನೀರಿಲ್ಲದ ಮೋಡಗಳಂತಿದ್ದಾರೆ. ಗಾಳಿಯು ಆ ಮೋಡಗಳನ್ನು ಬಡಿದುಕೊಂಡು ಹೋಗುವುದು. ಅವರು ಕಾಲಕ್ಕೆ ತಕ್ಕಂತೆ ಫಲಬಿಡದ ಮತ್ತು ಬೇರುಸಹಿತ ಕಿತ್ತುಬಂದು ಉರುಳಿಹೋದ ಮರಗಳಿಂತಿದ್ದಾರೆ.