1 ಸಮುಯೇಲ 18:16 - ಪರಿಶುದ್ದ ಬೈಬಲ್16 ಆದರೆ ಇಸ್ರೇಲಿನ ಮತ್ತು ಯೆಹೂದದ ಜನರೆಲ್ಲ ದಾವೀದನನ್ನು ಪ್ರೀತಿಸಿದರು. ಅವನು ಯುದ್ಧದಲ್ಲಿ ಅವರನ್ನು ಮುನ್ನಡೆಸಿದ್ದರಿಂದ ಮತ್ತು ಅವರಿಗೋಸ್ಕರ ಹೋರಾಡಿದ್ದರಿಂದ ಅವರು ಅವನನ್ನು ಬಹಳವಾಗಿ ಪ್ರೀತಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಆದರೆ ಇಸ್ರಾಯೇಲರೂ, ಯೆಹೂದ್ಯರೂ ತಮ್ಮ ಸಂಗಡ ಹೋಗುತ್ತಾ ಬರುತ್ತಾ ಇದ್ದ ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಆದರೆ ಇಸ್ರಯೇಲರಿಗೆ ಹಾಗು ಯೆಹೂದ್ಯರಿಗೆ ದಾವೀದನ ಮೇಲೆ ಮಿಗಿಲಾದ ಪ್ರೀತಿ. ಏಕೆಂದರೆ ಅವನು ತಮ್ಮ ಸಂಗಡವೇ ಬಂದು ಮುಂದಾಳತ್ವ ವಹಿಸುತ್ತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಇಸ್ರಾಯೇಲ್ಯರೂ ಯೆಹೂದ್ಯರೂ ತಮ್ಮ ಸಂಗಡ ಹೋಗುತ್ತಾ ಬರುತ್ತಾ ಇದ್ದ ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಆದರೆ ಇಸ್ರಾಯೇಲ್ ಜನರೂ ಯೆಹೂದ ಜನರೂ ದಾವೀದನು ತಮ್ಮ ಮುಂದೆ ಹೊರಟು ಹೋಗುತ್ತಾ ಬರುತ್ತಾ ಇರುವುದರಿಂದ ಅವನನ್ನು ಪ್ರೀತಿ ಮಾಡಿದರು. ಅಧ್ಯಾಯವನ್ನು ನೋಡಿ |
ಅರಸನ ನಂತರ ರಾಜ್ಯದಲ್ಲಿ ಯೆಹೂದಿಯಾದ ಮೊರ್ದೆಕೈಯೇ ಮುಖ್ಯ ವ್ಯಕ್ತಿಯಾಗಿದ್ದನು. ರಾಜ್ಯದಲ್ಲಿ ಅವನಿಗೆ ಎರಡನೇ ಸ್ಥಾನವಿತ್ತು. ಯೆಹೂದ್ಯರೊಳಗೆ ಅವನು ಪ್ರಮುಖ ವ್ಯಕ್ತಿಯಾಗಿದ್ದನು. ಯೆಹೂದ್ಯರೆಲ್ಲರೂ ಅವನನ್ನು ಬಹಳವಾಗಿ ಗೌರವಿಸುತ್ತಿದ್ದರು. ತನ್ನ ಜನರ ಒಳಿತಿಗಾಗಿ (ಜನರಿಗೋಸ್ಕರವಾಗಿ) ಮೊರ್ದೆಕೈ ಬಹಳವಾಗಿ ಪ್ರಯಾಸಪಟ್ಟಿದ್ದರಿಂದ ಜನರು ಅವನನ್ನು ಸನ್ಮಾನಿಸಿದರು; ಮೊರ್ದೆಕೈ ಯೆಹೂದ್ಯರೆಲ್ಲರಿಗೆ ಸಮಾಧಾನವನ್ನು ತಂದನು.