1 ಸಮುಯೇಲ 17:52 - ಪರಿಶುದ್ದ ಬೈಬಲ್52 ಇಸ್ರೇಲಿನ ಮತ್ತು ಯೆಹೂದದ ಸೈನಿಕರು ಆರ್ಭಟಮಾಡುತ್ತಾ ಫಿಲಿಷ್ಟಿಯರ ಬೆನ್ನಟ್ಟಿದರು. ಇಸ್ರೇಲರು ಫಿಲಿಷ್ಟಿಯರನ್ನು ಗತ್ ನಗರದ ಗಡಿಯವರೆಗೂ ಎಕ್ರೋನಿನ ಬಾಗಿಲುಗಳ ವರೆಗೂ ಅಟ್ಟಿಸಿಕೊಂಡು ಹೋದರು. ಅವರು ಅನೇಕ ಫಿಲಿಷ್ಟಿಯರನ್ನು ಕೊಂದರು. ಅವರ ಶವಗಳು ಶಾರಯಿಮಿನ ಮಾರ್ಗದುದ್ದಕ್ಕೂ ಗತ್ ಮತ್ತು ಎಕ್ರೋನ್‌ಗಳವರೆಗೆ ಬಿದ್ದಿದ್ದವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201952 ಇಸ್ರಾಯೇಲರು ಯೆಹೂದ್ಯರು ಎದ್ದು ಆರ್ಭಟಿಸಿ ಫಿಲಿಷ್ಟಿಯರನ್ನು ತಗ್ಗಿನ ದಾರಿಯವರೆಗೂ ಎಕ್ರೋನಿನ ಬಾಗಿಲುಗಳವರೆಗೂ ಹಿಂದಟ್ಟಿದರು. ಫಿಲಿಷ್ಟಿಯರ ಹೆಣಗಳು ಶಾರಯಿಮಿನಿಂದ ಗತ್ ಎಕ್ರೋನ್ ಪಟ್ಟಣಗಳವರೆಗೂ ಬಿದ್ದಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)52 ಇಸ್ರಯೇಲರೂ ಯೆಹೂದ್ಯರೂ ಎದ್ದು ಆರ್ಭಟಿಸಿ ಫಿಲಿಷ್ಟಿಯರನ್ನು ಕಣಿವೆಯ ದಾರಿಯವರೆಗೂ ಎಕ್ರೋನಿನ ಬಾಗಿಲುಗಳವರೆಗೂ ಹಿಂದಟ್ಟಿದರು. ಫಿಲಿಷ್ಟಿಯರ ಹೆಣಗಳು ಶಾರಯಿಮಿನಿಂದ ಗತ್, ಎಕ್ರೋನ್ ಪಟ್ಟಣಗಳವರೆಗೂ ಬಿದ್ದಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)52 ಇಸ್ರಾಯೇಲ್ಯರೂ ಯೆಹೂದ್ಯರೂ ಎದ್ದು ಆರ್ಭಟಿಸಿ ಫಿಲಿಷ್ಟಿಯರನ್ನು ತಗ್ಗಿನ ದಾರಿಯವರೆಗೂ ಎಕ್ರೋನಿನ ಬಾಗಲುಗಳವರೆಗೂ ಹಿಂದಟ್ಟಿದರು. ಫಿಲಿಷ್ಟಿಯರ ಹೆಣಗಳು ಶಾರಯಿವಿುನಿಂದ ಗತ್ ಎಕ್ರೋನ್ ಪಟ್ಟಣಗಳವರೆಗೂ ಬಿದ್ದಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ52 ಇಸ್ರಾಯೇಲರೂ, ಯೆಹೂದದ ಜನರೂ ಎದ್ದು ಆರ್ಭಟಿಸಿ, ತಗ್ಗಿನ ಮೇರೆಯವರೆಗೂ, ಎಕ್ರೋನಿನ ಬಾಗಿಲಿನವರೆಗೂ ಫಿಲಿಷ್ಟಿಯರನ್ನು ಹಿಂದಟ್ಟಿದರು. ಆದ್ದರಿಂದ ಹತರಾದ ಫಿಲಿಷ್ಟಿಯರು ಶಾರಯಿಮಿನ ಮಾರ್ಗದಲ್ಲಿ ಗತ್ ಎಕ್ರೋನಿನವರೆಗೂ ಬಿದ್ದಿದ್ದರು. ಅಧ್ಯಾಯವನ್ನು ನೋಡಿ |