35 ಆದನ್ನು ನಾನು ಅಟ್ಟಿಸಿಕೊಂಡು ಹೋಗುತ್ತಿದ್ದೆ. ನಾನು ಆ ಕ್ರೂರ ಮೃಗದ ಮೇಲೆ ಆಕ್ರಮಣ ಮಾಡಿ, ಅದರ ಬಾಯಿಂದ ಕುರಿಯನ್ನು ಬಿಡಿಸುತ್ತಿದ್ದೆನು. ಅದು ನನ್ನ ಮೇಲೆ ಆಕ್ರಮಣ ಮಾಡಿದರೆ, ನಾನು ಅದರ ಗಡ್ಡ ಹಿಡಿದು ಹೋರಾಡಿ ಅದನ್ನು ಕೊಲ್ಲುತ್ತಿದ್ದೆನು.
35 ನಾನು ಒಡನೇ ಬೆನ್ನಟ್ಟಿ, ಅದನ್ನು ಹೊಡೆದು, ಕುರಿಮರಿಯನ್ನು ಕಿತ್ತುಕೊಳ್ಳುತ್ತಿದ್ದೆನು. ಅದು ಹಿಂದಿರುಗಿ ನನ್ನ ಮೇಲೆ ಬೀಳಲು ಬಂದಾಗ ಅದರ ಗದ್ದಹಿಡಿದು ಬಡಿದು ಕೊಂದುಹಾಕುತ್ತಿದ್ದೆನು.
35 ನಾನು ಒಡನೆ ಬೆನ್ನಟ್ಟಿ ಹೋಗುತ್ತಿದ್ದೆ; ಆ ಕಾಡುಮೃಗವನ್ನು ಹೊಡೆದು ಕುರಿಮರಿಯನ್ನು ಕಿತ್ತುಕೊಳ್ಳುತ್ತಿದ್ದೆ. ಅದು ಹಿಂದಿರುಗಿ ನನ್ನ ಮೇಲೆ ಬಿದ್ದಾಗ ಅದನ್ನು ಗಡ್ಡ ಹಿಡಿದು, ಬಡಿದು, ಕೊಂದುಹಾಕುತ್ತಿದ್ದೆ.
35 ನಾನು ಒಡನೆ ಅದನ್ನು ಬೆನ್ನಟ್ಟಿ ಹೊಡೆದು ಕುರಿಮರಿಯನ್ನು ಕಿತ್ತುಕೊಳ್ಳುತ್ತಿದ್ದೆನು. ಅದು ಹಿಂದಿರುಗಿ ನನ್ನ ಮೇಲೆ ಬಿದ್ದರೆ ಅದನ್ನು ಗದ್ದಹಿಡಿದು ಬಡಿದು ಕೊಂದುಹಾಕುತ್ತಿದ್ದೆನು.
35 ಆಗ ನಾನು ಅದರ ಹಿಂದೆ ಹೋಗಿ, ಅದನ್ನು ಹೊಡೆದುಬಿಟ್ಟು, ಆ ಕುರಿಮರಿಯನ್ನು ಅದರ ಬಾಯಿಂದ ತಪ್ಪಿಸಿದೆನು. ಅದು ನನ್ನ ಮೇಲೆ ಹಿಂದಿರುಗಿ ಬಿದ್ದಾಗ, ನಾನು ಅದರ ಗಡ್ಡವನ್ನು ಹಿಡಿದು, ಹೊಡೆದು ಕೊಂದುಹಾಕಿದೆನು.
ಯೆಹೋವನು ಹೇಳುವುದೇನೆಂದರೆ, “ಒಂದುವೇಳೆ ಸಿಂಹವು ಒಂದು ಕುರಿಮರಿಯ ಮೇಲೆ ಎರಗಿದರೆ ಕುರುಬನು ಅದನ್ನು ರಕ್ಷಿಸಲು ಪ್ರಯತ್ನಿಸಾನು. ಆದರೆ ಕುರುಬನು ಆ ಕುರಿಮರಿಯ ಒಂದು ಭಾಗವನ್ನು ಮಾತ್ರ ಕಾಪಾಡಿಯಾನು. ಸಿಂಹದ ಬಾಯಿಂದ ಕುರಿಯ ಎರಡು ಕಾಲುಗಳನ್ನೋ ಕಿವಿಯ ಒಂದು ಭಾಗವನ್ನೋ ಎಳೆದು ರಕ್ಷಿಸಿಯಾನು. ಅದೇ ರೀತಿಯಲ್ಲಿ ಬಹುತೇಕ ಇಸ್ರೇಲರು ರಕ್ಷಿಸಲ್ಪಡುವದಿಲ್ಲ. ಸಮಾರ್ಯದಲ್ಲಿರುವ ಜನರು ತಮ್ಮ ಹಾಸಿಗೆಯ ಒಂದು ಮೂಲೆಯನ್ನಾಗಲಿ ಅಥವಾ ಮಂಚದ ಮೇಲಿನ ಬಟ್ಟೆಯ ಒಂದು ತುಂಡನ್ನಾಗಲಿ ಉಳಿಸಿಕೊಳ್ಳುವರು.”
ನನ್ನ ದೇವರು ನನ್ನನ್ನು ರಕ್ಷಿಸುವುದಕ್ಕಾಗಿ ತನ್ನ ದೂತನನ್ನು ಕಳುಹಿಸಿದನು. ಆ ದೇವದೂತನು ಸಿಂಹಗಳ ಬಾಯಿಯನ್ನು ಮುಚ್ಚಿದನು. ಸಿಂಹಗಳು ನನ್ನನ್ನು ಗಾಯಗೊಳಿಸಲಿಲ್ಲ. ಏಕೆಂದರೆ ನಾನು ತಪ್ಪಿತಸ್ಥನಲ್ಲವೆಂದು ನನ್ನ ದೇವರಿಗೆ ಗೊತ್ತುಂಟು. ರಾಜನೇ, ನಾನೆಂದೂ ನಿನಗೆ ತಪ್ಪು ಮಾಡಲಿಲ್ಲ” ಎಂದು ಉತ್ತರಿಸಿದನು.
ಯೆಹೋಯಾದಾವನ ಮಗನಾದ ಬೆನಾಯನು ಅವರಲ್ಲಿ ಒಬ್ಬನು. ಅವನು ಬಲಿಷ್ಠ ವ್ಯಕ್ತಿಯಾಗಿದ್ದನು. ಅವನು ಕಬ್ಜಯೇಲಿನವನಾಗಿದ್ದನು. ಬೆನಾಯನು ಅನೇಕ ಸಾಹಸಕಾರ್ಯಗಳನ್ನು ಮಾಡಿದನು. ಬೆನಾಯನು ಮೋವಾಬ್ಯನಾದ ಅರೀಯೇಲನ ಇಬ್ಬರು ಮಕ್ಕಳನ್ನು ಕೊಂದನು. ಬೆನಾಯನು ಮಂಜುಸುರಿಯುವಾಗ ಒಂದು ತಗ್ಗಿನಲ್ಲಿ ಇಳಿದು ಸಿಂಹವನ್ನು ಕೊಂದನು.
ನಾನು ಒಂದು ಸಿಂಹವನ್ನೂ ಒಂದು ಕರಡಿಯನ್ನೂ ಕೊಂದಿದ್ದೇನೆ. ಅದೇ ರೀತಿಯಲ್ಲಿ ನಾನು ಅನ್ಯದೇಶಿಯನಾದ ಗೊಲ್ಯಾತನನ್ನೂ ಕೊಂದು ಹಾಕುತ್ತೇನೆ. ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸಿದ್ದರಿಂದ ಗೊಲ್ಯಾತನು ಸಾಯಲೇಬೇಕು.