1 ಸಮುಯೇಲ 10:22 - ಪರಿಶುದ್ದ ಬೈಬಲ್22 ಆಗ ಅವರು ಯೆಹೋವನನ್ನು, “ಸೌಲನು ಇಲ್ಲಿಗೆ ಬರುವನೋ?” ಎಂದು ಕೇಳಿದರು. ಯೆಹೋವನು, “ಸೌಲನು ಸರಕುಗಳ ಹಿಂದೆ ಅಡಗಿಕೊಂಡಿದ್ದಾನೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಅವರು, “ಆ ಮನುಷ್ಯನು ಇಲ್ಲಿಗೆ ಬರುವನೋ” ಎಂದು ಯೆಹೋವನನ್ನು ವಿಚಾರಿಸಿದಾಗ ಆತನು, “ಬಂದಿದ್ದಾನೆ; ಇಗೋ, ಸಾಮಾನುಗಳ ಮಧ್ಯದಲ್ಲಿ ಅಡಗಿಕೊಂಡಿದ್ದಾನೆ” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಅವರು, “ಆ ವ್ಯಕ್ತಿ ಇಲ್ಲಿಗೆ ಬರುವನೋ?” ಎಂದು ಸರ್ವೇಶ್ವರನನ್ನು ವಿಚಾರಿಸಿದಾಗ, “ಬಂದಿದ್ದಾನೆ; ಇಗೋ, ಸರಕು ಸಾಮಾನುಗಳ ನಡುವೆ ಅಡಗಿಕೊಂಡಿದ್ದಾನೆ,” ಎಂದು ಉತ್ತರ ಬಂದಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ಅವರು - ಆ ಮನುಷ್ಯನು ಇಲ್ಲಿಗೆ ಬರುವನೋ ಎಂದು ಯೆಹೋವನನ್ನು ವಿಚಾರಿಸಿದಾಗ ಆತನು - ಬಂದಿದ್ದಾನೆ; ಇಗೋ, ಸಾಮಾನುಗಳಲ್ಲಿ ಅಡಗಿಕೊಂಡಿದ್ದಾನೆ ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ಆದ್ದರಿಂದ ಅವರು, “ಅವನು ಇನ್ನು ಇಲ್ಲಿ ಬರುವನೋ?” ಎಂದು ಯೆಹೋವ ದೇವರನ್ನು ವಿಚಾರಿಸಿದರು. ಯೆಹೋವ ದೇವರು, “ಇಗೋ, ಅವನು ಸಲಕರಣೆಗಳಲ್ಲಿ ಅಡಗಿಕೊಂಡಿದ್ದಾನೆ,” ಎಂದು ಹೇಳಿದರು. ಅಧ್ಯಾಯವನ್ನು ನೋಡಿ |
ಯೆಹೋಶುವನು ತೀರ್ಮಾನವೇನಾದರೂ ಮಾಡಬೇಕಾದರೆ ಅವನು ಯಾಜಕನಾದ ಎಲ್ಲಾಜಾರನ ಬಳಿಗೆ ಹೋಗಲಿ, ಎಲ್ಲಾಜಾರನು ಊರೀಮಿನಿಂದ ಯೆಹೋವನ ಉತ್ತರವನ್ನು ಪಡೆಯುವನು. ಆಗ ಯೆಹೋಶುವನೂ ಇಸ್ರೇಲರೆಲ್ಲರೂ ದೇವರು ಹೇಳುವ ಕಾರ್ಯಗಳನ್ನು ಮಾಡುವರು. ಆತನು, ‘ಯುದ್ಧಕ್ಕೆ ಹೋಗಿರಿ’ ಎಂದು ಹೇಳಿದರೆ ಅವರು ಯುದ್ಧಕ್ಕೆ ಹೋಗುವರು. ಆತನು, ‘ಮನೆಗೆ ಹೋಗಿರಿ’ ಎಂದು ಹೇಳಿದರೆ ಅವರು ಮನೆಗೆ ಹೋಗುವರು” ಎಂದು ಹೇಳಿದನು.
ಫೀನೆಹಾಸನು ಅಲ್ಲಿ ದೇವರ ಸೇವೆ ಮಾಡುವ ಯಾಜಕನಾಗಿದ್ದನು. ಫೀನೆಹಾಸನು ಎಲ್ಲಾಜಾರನ ಮಗನಾಗಿದ್ದನು. ಎಲ್ಲಾಜಾರನು ಆರೋನನ ಮಗನಾಗಿದ್ದನು.) ಇಸ್ರೇಲರು, “ಬೆನ್ಯಾಮೀನ್ಯರು ನಮ್ಮ ಬಂಧುಗಳು. ನಾವು ಅವರ ವಿರುದ್ಧ ಯುದ್ಧ ಮಾಡುವುದಕ್ಕೆ ಮತ್ತೆ ಹೋಗಬೇಕೇ? ಅಥವಾ ನಾವು ಯುದ್ಧ ಮಾಡುವುದನ್ನು ನಿಲ್ಲಿಸಿ ಬಿಡಬೇಕೇ?” ಎಂದು ಯೆಹೋವನನ್ನು ಕೇಳಿದರು. “ಹೋಗಿರಿ, ನಾಳೆ ಅವರನ್ನು ಸೋಲಿಸಲು ನಾನು ನಿಮಗೆ ಸಹಾಯ ಮಾಡುತ್ತೇನೆ” ಎಂದು ಯೆಹೋವನು ಉತ್ತರಕೊಟ್ಟನು.
ಬೆನ್ಯಾಮೀನ್ ಕುಲದಲ್ಲಿ ಒಂದು ಕುಟುಂಬವನ್ನು ಆರಿಸಿಕೊಳ್ಳುವುದಕ್ಕಾಗಿ ಮತ್ತೆ ಚೀಟು ಹಾಕಲಾಯಿತು. ಅದರಲ್ಲಿ ಮಟ್ರಿಯ ಕುಟುಂಬವು ಆರಿಸಲ್ಪಟ್ಟಿತು. ನಂತರ ಸಮುವೇಲನು ಮಟ್ರಿಯ ಕುಟುಂಬದ ಪ್ರತಿಯೊಬ್ಬನನ್ನು ಸಮೀಪಕ್ಕೆ ಕರೆದು ಅವರಲ್ಲಿ ಒಬ್ಬನನ್ನು ಆರಿಸಿಕೊಳ್ಳುವುದಕ್ಕಾಗಿ ಚೀಟು ಹಾಕಿದನು. ಅದರಲ್ಲಿ ಕೀಷನ ಮಗನಾದ ಸೌಲನು ಆರಿಸಲ್ಪಟ್ಟನು. ಆದರೆ ಜನರು ಸೌಲನನ್ನು ಹುಡುಕಿದಾಗ ಅವರಿಗೆ ಅವನು ಸಿಕ್ಕಲಿಲ್ಲ.