1 ಸಮುಯೇಲ 10:12 - ಪರಿಶುದ್ದ ಬೈಬಲ್12 ಆಗ ಗಿಬಿಯತ್ ಎಲೋಹಿಮಿನಲ್ಲಿ ವಾಸಿಸುತ್ತಿದ್ದ ಮನುಷ್ಯನೊಬ್ಬನು, “ಹೌದು, ಅವನು ಅವರ ನಾಯಕನಂತೆ ಕಾಣುತ್ತಿದ್ದಾನೆ” ಎಂದು ಹೇಳಿದನು. ಆದ್ದರಿಂದಲೇ, “ಸೌಲನೂ ಪ್ರವಾದಿಗಳಲ್ಲಿ ಒಬ್ಬನಾದನು” ಎಂಬ ಗಾದೆಯು ಹುಟ್ಟಿಕೊಂಡಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಆಗ ಆ ಸ್ಥಳದವನೊಬ್ಬನು, “ಹಾಗಾದರೆ ಇವರ ತಂದೆ ಯಾರು?” ಎಂದು ಕೇಳಿದನು. ಈ ಸಂಗತಿಯಿಂದ “ಸೌಲನು ಪ್ರವಾದಿಗಳಲ್ಲಿದ್ದಾನೆ” ಎಂಬ ವಿಷಯ ಹುಟ್ಟಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಆಗ ಆ ಸ್ಥಳೀಯರಲ್ಲಿ ಒಬ್ಬನು, “ಹಾಗಾದರೆ ಇವರ ತಂದೆ ಯಾರು?” ಎಂದು ಕೇಳಿದನು. ಈ ಘಟನೆಯಿಂದಾಗಿ, “ಏನು, ಸೌಲನೂ ಪ್ರವಾದಿಯಾಗಿಬಿಟ್ಟನೊ?” ಎಂಬ ಗಾದೆ ಹುಟ್ಟಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಆ ಸ್ಥಳದವನೊಬ್ಬನು - ಹಾಗಾದರೆ ಇವರ ತಂದೆ ಯಾರು ಎಂದು ಕೇಳಿದನು. ಈ ಸಂಗತಿಯಿಂದ ಸೌಲನು ಪ್ರವಾದಿಗಳಲ್ಲಿದ್ದಾನೋ ಎಂಬ ಗಾದೆ ಹುಟ್ಟಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಅದಕ್ಕೆ ಅಲ್ಲಿಯವನೊಬ್ಬನು, “ಹಾಗಾದರೆ ಅವರ ನಾಯಕರು ಯಾರು?” ಎಂದನು. ಆದ್ದರಿಂದ, “ಸೌಲನು ಸಹ ಪ್ರವಾದಿಗಳಲ್ಲಿ ಇದ್ದಾನೋ?” ಎಂಬ ಗಾದೆ ಉಂಟಾಯಿತು. ಅಧ್ಯಾಯವನ್ನು ನೋಡಿ |