1 ಪೇತ್ರನು 4:14 - ಪರಿಶುದ್ದ ಬೈಬಲ್14 ನೀವು ಕ್ರಿಸ್ತನನ್ನು ಅನುಸರಿಸುತ್ತಿರುವುದರ ನಿಮಿತ್ತವಾಗಿ ನಿಮ್ಮ ಬಗ್ಗೆ ಜನರು ಕೆಟ್ಟದ್ದನ್ನು ನುಡಿದರೆ ನೀವು ಭಾಗ್ಯವಂತರಾಗಿದ್ದೀರಿ. ತೇಜೋಮಯವಾದ ಆತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನೆ. ಆತನು ದೇವರಾತ್ಮನಾಗಿದ್ದಾನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರು. ಮಹಿಮೆಯ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಕ್ರಿಸ್ತಯೇಸುವಿನ ನಾಮದ ನಿಮಿತ್ತ ನಿಂದೆ ಅವಮಾನಗಳಿಗೆ ಗುರಿಯಾದರೆ ನೀವು ಧನ್ಯರು! ಮಹಿಮಾನ್ವಿತ ದೇವರ ಆತ್ಮವು ನಿಮ್ಮಲ್ಲಿ ನೆಲಸಿರುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ನೀವು ಕ್ರಿಸ್ತನ ಹೆಸರಿನ ನಿವಿುತ್ತ ನಿಂದೆಗೆ ಗುರಿಯಾದರೆ ಧನ್ಯರೇ; ತೇಜೋಮಯವಾದ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ನೀವು ಕ್ರಿಸ್ತ ಯೇಸುವಿನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ, ಧನ್ಯರು. ಏಕೆಂದರೆ, ಮಹಿಮೆಯ ಆತ್ಮರೂ, ದೇವರೂ ನಿಮ್ಮಲ್ಲಿ ವಾಸಿಸುತ್ತಾರೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್14 ತುಮಿ ಕ್ರಿಸ್ತಾಚ್ಯಾ ನಾವಾನ್ ಚಲ್ತಲೆ ತೆಜ್ಯಾಸಾಟಿ ಅವ್ಮಾನ್ ತುಮ್ಕಾ ಸೊಸುಕ್ ಗಾವ್ಲ್ಯಾರ್ ತುಮ್ಚೆ ನಸಿಬ್ ಕವ್ಡೆ ಬರೆ, ದೆವಾಚ್ಯಾ ಮಹಿಮೆನ್ ಭರಲ್ಲೊ ಆತ್ಮೊ ತುಮ್ಚ್ಯಾ ಭುತ್ತುರ್ ವಸ್ತಿ ಕರುಲ್ಲಾ ಮನುನ್ ಹೊಲೊ. ಅಧ್ಯಾಯವನ್ನು ನೋಡಿ |