1 ಪೇತ್ರನು 3:9 - ಪರಿಶುದ್ದ ಬೈಬಲ್9 ಅಪಕಾರ ಮಾಡಿದವನಿಗೆ ಅಪಕಾರ ಮಾಡದೆ, ನಿಂದಿಸಿದವನನ್ನು ನಿಂದಿಸದೆ, ಅವನನ್ನು ಆಶೀರ್ವದಿಸುವಂತೆ ದೇವರಲ್ಲಿ ಬೇಡಿಕೊಳ್ಳಿರಿ. ಏಕೆಂದರೆ ಆಶೀರ್ವಾದವನ್ನು ಹೊಂದಿಕೊಳ್ಳಲು ನೀವು ಕರೆಯಲ್ಪಟ್ಟವರಾಗಿದ್ದೀರಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಅಪಕಾರಕ್ಕೆ ಅಪಕಾರವನ್ನು, ನಿಂದೆಗೆ ನಿಂದೆಯನ್ನು ಮಾಡದೇ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದಿದ್ದಾನಲ್ಲಾ. ಹೀಗೆ ಮಾಡುವುದಾದರೆ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಮುಯ್ಯಿಗೆ ಮುಯ್ಯಿ ತೀರಿಸಬೇಡಿರಿ; ಶಾಪಕ್ಕೆ ಪ್ರತಿಶಾಪ ಹಾಕದೆ ಆಶೀರ್ವಾದ ಮಾಡಿರಿ. ಹೀಗೆ ಮಾಡಿದರೆ ದೇವರ ಆಶೀರ್ವಾದವನ್ನು ಬಾಧ್ಯವಾಗಿ ಪಡೆಯುವಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಅಪಕಾರಕ್ಕೆ ಅಪಕಾರವನ್ನು ನಿಂದೆಗೆ ನಿಂದೆಯನ್ನು ಮಾಡದೆ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದನಲ್ಲಾ; ಹೀಗೆ ಮಾಡುವದಾದರೆ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಅಪಕಾರಕ್ಕೆ ಅಪಕಾರವನ್ನೂ ನಿಂದೆಗೆ ನಿಂದೆಯನ್ನೂ ಮಾಡದೆ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದರಲ್ಲವೇ? ಹೀಗೆ ಮಾಡುವವರಾದ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರೆಂದು ನಿಮಗೆ ತಿಳಿದಿದೆಯಲ್ಲಾ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್9 ವಾಯ್ಟ್ ಕರ್ತಲ್ಯಾಕ್ನಿ ವಾಯ್ಟ್ ಕರುನಕಾಸಿ, ಅನಿ ನಿಂದ್ಯಾ ಕರ್ತಲ್ಯಾಕ್ನಿ ಅನಿ ಪರ್ತುನ್ ನಿಂದ್ಯಾ ಕರಿನಸ್ತಾನಾ ತೆಚ್ಯಾ ಬದ್ಲಾಕ್ ತೆಕಾ ತುಮಿ ಆಶಿರ್ವಾದ್ ದಿವಾ, ಕಶ್ಯಾಕ್ ಮಟ್ಲ್ಯಾರ್, ದೆವಾನ್ ತುಮ್ಕಾ ಬಲ್ವಲ್ಲ್ಯಾ ತನ್ನಾ ತುಮ್ಕಾ ಗೊಸ್ಟ್ ದಿಲ್ಲಿ ಆಶಿರ್ವಾದಾಚ್ಯಾ ವಿಶಯಾತುಚ್, ಅಧ್ಯಾಯವನ್ನು ನೋಡಿ |