Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 9:22 - ಪರಿಶುದ್ದ ಬೈಬಲ್‌

22 ಒಟ್ಟು ಇನ್ನೂರ ಹನ್ನೆರಡು ಮಂದಿ ಪವಿತ್ರಗುಡಾರದ ಬಾಗಿಲನ್ನು ಕಾಯುವುದಕ್ಕೆ ಆರಿಸಲ್ಪಟ್ಟಿದ್ದರು. ಅವರ ಹೆಸರುಗಳು ವಂಶದ ಚರಿತ್ರೆಯಲ್ಲಿ ಬರೆಯಲ್ಪಟ್ಟಿರುತ್ತವೆ. ದಾವೀದನೂ ದೇವರ ಮನುಷ್ಯನಾದ ಸಮುವೇಲನೂ ಇವರನ್ನು ಆರಿಸಿಕೊಂಡರು. ಯಾಕೆಂದರೆ ಇವರೆಲ್ಲರೂ ನಂಬಿಗಸ್ತರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ದ್ವಾರಪಾಲಕ ಸೇವೆಗೆ ಪ್ರತ್ಯೇಕಿಸಲ್ಪಟ್ಟವರು ಒಟ್ಟಿಗೆ ಇನ್ನೂರ ಹನ್ನೆರಡು ಜನರು. ಅವರ ಹೆಸರುಗಳು ಅವರವರ ಗ್ರಾಮಗಳ ಪಟ್ಟಿಯಲ್ಲಿ ದಾಖಲಾಗಿದ್ದವು. ದಾವೀದನೂ, ದರ್ಶಿಯಾದ ಸಮುವೇಲನೂ ಅವರನ್ನು ಈ ಉದ್ಯೊಗಕ್ಕೆ ನೇಮಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಒಟ್ಟು ಇನ್ನೂರ ಹನ್ನೆರಡು ಮಂದಿ, ದ್ವಾರಪಾಲಕರಾಗಿ ನೇಮಕಗೊಂಡಿದ್ದರು. ಅವರು ನೆಲೆಸಿದ್ದ ಗ್ರಾಮಗಳಲ್ಲಿ ಅವರ ಹೆಸರುಗಳು ದಾಖಲಾಗಿದ್ದವು. ಈ ಜವಾಬ್ದಾರಿಯ ಸ್ಥಾನಗಳಿಗೆ ಅವರ ಪೂರ್ವಜರನ್ನು ನೇಮಿಸಿದವರು ಅರಸ ದಾವೀದನು ಮತ್ತು ಪ್ರವಾದಿ ಸಮುವೇಲನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ದ್ವಾರಪಾಲಕ ಸೇವೆಗೆ ಪ್ರತ್ಯೇಕಿಸಲ್ಪಟ್ಟವರು ಒಟ್ಟಿಗೆ ಇನ್ನೂರ ಹನ್ನೆರಡು ಮಂದಿ; ಅವರ ಹೆಸರುಗಳು ಅವರವರ ಗ್ರಾಮಗಳ ಪಟ್ಟಿಗಳಲ್ಲಿ ಲಿಖಿತವಾಗಿದ್ದವು. ದಾವೀದನೂ ದರ್ಶಿಯಾದ ಸಮುವೇಲನೂ ಅವರನ್ನು ಈ ಉದ್ಯೋಗಕ್ಕೆ ನೇವಿುಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಬಾಗಿಲುಗಳಲ್ಲಿ ದ್ವಾರಪಾಲಕರಾಗಿರಲು ಆಯ್ಕೆಯಾದ ಇವರೆಲ್ಲರು 212 ಮಂದಿಯಾಗಿದ್ದರು. ಇವರು ಹೆಸರುಗಳು ಅವರವರ ಗ್ರಾಮಗಳಲ್ಲಿ ಅವರ ವಂಶಾವಳಿಯ ಪ್ರಕಾರ ಲಿಖಿತವಾಗಿದ್ದವು. ಇವರು ನಂಬಿಗಸ್ತರಾದ್ದರಿಂದ ದಾವೀದನೂ, ದರ್ಶಿಯಾದ ಸಮುಯೇಲನೂ ಇವರನ್ನು ಜವಾಬ್ದಾರಿಯ ಸ್ಥಾನಗಳಿಗೆ ನೇಮಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 9:22
18 ತಿಳಿವುಗಳ ಹೋಲಿಕೆ  

(ಹಿಂದಿನ ಕಾಲದಲ್ಲಿ ಇಸ್ರೇಲರು ಪ್ರವಾದಿಯನ್ನು “ದರ್ಶಿ” ಎಂದು ಕರೆಯುತ್ತಿದ್ದರು. ದೇವರಿಂದ ಏನಾದರೂ ಕೇಳಬೇಕಾಗಿದ್ದರೆ, “ದರ್ಶಿಯ ಬಳಿಗೆ ಹೋಗೋಣ” ಎನ್ನುತ್ತಿದ್ದರು.)


ದಾವೀದನು ಸೊಲೊಮೋನನಿಗೆ ಲೇವಿಯರ ಮತ್ತು ಯಾಜಕರ ತಂಡದ ವಿಷಯವಾಗಿ ತಿಳಿಸಿದನು. ದೇವಾಲಯದ ಆರಾಧನಾ ಕ್ರಮಗಳನ್ನು ಅದಕ್ಕೆ ಸಂಬಂಧಪಟ್ಟ ವಿವಿಧ ವಿಷಯಗಳನ್ನು ಸೊಲೊಮೋನನಿಗೆ ದಾವೀದನು ವಿವರಿಸಿದನು.


ಉಗ್ರಾಣಕ್ಕೆ ಮುಖ್ಯಸ್ತರನ್ನು ಆ ದಿನ ಆರಿಸಿದರು. ಜನರು ತಮ್ಮ ಪ್ರಥಮಫಲಗಳನ್ನು, ಪೈರಿನ ಹತ್ತನೆಯ ಒಂದಂಶವನ್ನು ತಂದರು. ಉಗ್ರಾಣದ ಮುಖ್ಯಸ್ತರು ಅವುಗಳನ್ನು ಕೋಣೆಯೊಳಗೆ ಶೇಖರಿಸಿಟ್ಟರು. ಎಲ್ಲರೂ ಅಚ್ಚುಕಟ್ಟಾಗಿ ತಮ್ಮತಮ್ಮ ಕೆಲಸಕಾರ್ಯಗಳನ್ನು ಮಾಡುವುದನ್ನು ನೋಡಿ ಜನರು ಸಂತೋಷಪಟ್ಟರು; ಹೆಚ್ಚಾದ ವಸ್ತುಗಳನ್ನು ಉಗ್ರಾಣದೊಳಕ್ಕೆ ತಂದರು.


ಲೇವಿಕುಲದವರಲ್ಲಿ ಕೆಲವು ವರ್ಗಗಳವರು ಬೆನ್ಯಾಮೀನರ ಪ್ರದೇಶಕ್ಕೆ ಹೋದರು.


ಲೇವಿಯರ ಹೆಂಡತಿಯರಿಗೂ ಮಕ್ಕಳಿಗೂ ಎಲ್ಲರಿಗೂ ಅದರಲ್ಲಿ ಪಾಲು ದೊರೆಯಿತು. ಯಾರ್ಯಾರ ಹೆಸರುಗಳು ಲೇವಿಯರ ಕುಟುಂಬದ ಪಟ್ಟಿಯಲ್ಲಿ ಬರೆಯಲ್ಪಟ್ಟಿತ್ತೊ ಅವರೆಲ್ಲರಿಗೆ ಪಾಲು ದೊರೆಯಿತು. ಯಾಕೆಂದರೆ ಲೇವಿಯರು ತಮ್ಮನ್ನು ದೇವಾಲಯದ ಸೇವೆಗೆ ಯಾವಾಗಲೂ ಸಿದ್ಧಪಡಿಸಿಕೊಳ್ಳುತ್ತಿದ್ದರು.


ಏದೆನ್, ಮಿನ್ಯಾಮಿನ್, ಯೇಷೂವ, ಶೆಮಾಯ, ಅಮರ್ಯ ಮತ್ತು ಶೆಕನ್ಯ ಇವರು ಕೋರೆಯ ಸಹಾಯಕರು. ಇವರು ಯಾಜಕರು ವಾಸಿಸುವ ಪಟ್ಟಣಗಳಲ್ಲಿದ್ದು ನಂಬಿಗಸ್ತಿಕೆಯಿಂದ ಸೇವೆ ಮಾಡಿದರು. ಕೂಡಿಸಿದ ಕಾಣಿಕೆಗಳನ್ನು ನಂಬಿಗಸ್ತಿಕೆಯಿಂದ ಯಾಜಕರ ಕುಟುಂಬದವರಿಗೆ ಪಕ್ಷಪಾತವಿಲ್ಲದೆ ಹಂಚಿದರು.


ನೇಮಿಸಲ್ಪಟ್ಟ ಯಾಜಕರ ಮತ್ತು ಲೇವಿಯರ ತಂಡಗಳು ದೇವಾಲಯದ ಸೇವೆಗಾಗಿ ಸಿದ್ಧರಾಗಿದ್ದಾರೆ; ಅನುಭವಸ್ಥರಾದ ಕಾರ್ಮಿಕರು ದೇವಾಲಯದ ಕೆಲಸಕ್ಕಾಗಿ ಸಿದ್ಧರಾಗಿದ್ದಾರೆ. ಕೆಲಸದ ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು ನಿನ್ನ ಆಜ್ಞೆಯನ್ನು ಪರಿಪಾಲಿಸಲು ಸಿದ್ಧರಾಗಿದ್ದಾರೆ” ಎಂದು ದಾವೀದನು ಸೊಲೊಮೋನನಿಗೆ ಹೇಳಿದನು.


ಮತ್ತಿತ್ಯ ಎಂಬ ಲೇವಿಯು ದೇವರಿಗೆ ಸಮರ್ಪಿಸುವ ರೊಟ್ಟಿಯನ್ನು ತಯಾರು ಮಾಡುತ್ತಿದ್ದನು. ಇವನು ಶಲ್ಲೂಮನ ಚೊಚ್ಚಲಮಗ. ಶಲ್ಲೂಮನು ಕೋರಹನ ಕುಲದವನಾಗಿದ್ದನು.


ಓಬದ್ಯನು ಶೆಮಾಯನ ಮಗ. ಶೆಮಾಯನು ಗಾಲಾಲನ ಮಗ. ಗಾಲಾಲನು ಯೆದೂತೂನನ ಮಗ. ಆಸನ ಮಗನಾದ ಬೆರೆಕ್ಯನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಆಸನು ಎಲ್ಕಾನನ ಮಗ. ಎಲ್ಕಾನನು ನೆಟೋಫ ಜನರ ಸಮೀಪದ ಗ್ರಾಮದಲ್ಲಿ ವಾಸಿಸುತ್ತಿದ್ದನು.


ಅವರೂ ಅವರ ಸಂತತಿಯವರೂ ದೇವದರ್ಶನಗುಡಾರದ ದ್ವಾರಪಾಲರಾಗಿದ್ದರು.


ಅಶುದ್ಧರಾದವರು ದೇವಾಲಯದೊಳಗೆ ಪ್ರವೇಶಿಸದಂತೆ ಯೆಹೋಯಾದನು ಆಯಾ ಬಾಗಿಲುಗಳಲ್ಲಿ ದ್ವಾರಪಾಲಕರನ್ನು ನೇಮಿಸಿದನು.


ಪ್ರಾರಂಭದಿಂದ ಹಿಡಿದು ಕೊನೆಯತನಕ ದಾವೀದನು ಮಾಡಿದ ಎಲ್ಲಾ ಕಾರ್ಯಗಳನ್ನು ದರ್ಶಿಯಾದ ಸಮುವೇಲ, ಪ್ರವಾದಿಯಾದ ನಾತಾನ ಮತ್ತು ದರ್ಶಿಯಾದ ಗಾದ್ ಇವರ ಚರಿತ್ರೆಗಳಲ್ಲಿ ಬರೆಯಲ್ಪಟ್ಟಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು