1 ಪೂರ್ವಕಾಲ ವೃತ್ತಾಂತ 8:40 - ಪರಿಶುದ್ದ ಬೈಬಲ್40 ಊಲಾಮನ ಗಂಡುಮಕ್ಕಳೆಲ್ಲರೂ ರಣವೀರರು; ಬಿಲ್ಲುಬಾಣಗಳನ್ನು ಉಪಯೋಗಿಸುವುದರಲ್ಲಿ ನಿಪುಣರು. ಅವರಿಗೆ ಅನೇಕ ಗಂಡುಮಕ್ಕಳು ಮತ್ತು ಗಂಡುಮೊಮ್ಮಕ್ಕಳಿದ್ದರು. ಅವರಿಗೆ ಒಟ್ಟು ನೂರೈವತ್ತು ಮಂದಿ ಗಂಡುಮಕ್ಕಳು ಮತ್ತು ಗಂಡುಮೊಮ್ಮಕ್ಕಳು ಇದ್ದರು. ಇವರೆಲ್ಲಾ ಬೆನ್ಯಾಮೀನನ ಸಂತತಿಯವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201940 ಊಲಾಮನ ಮಕ್ಕಳು ಬಿಲ್ಲನ್ನು ಉಪಯೋಗಿಸುವುದರಲ್ಲಿ ಗಟ್ಟಿಗರಾದ ರಣವೀರರು. ಅವರು ಅನೇಕ ಮಂದಿ ಮಕ್ಕಳನ್ನೂ, ಮೊಮ್ಮಕ್ಕಳನ್ನೂ ಪಡೆದರು. ಒಟ್ಟು ನೂರ ಐವತ್ತು ಜನರು ಅವರ ಕುಟುಂಬದಲ್ಲಿದ್ದರು. ಎಲ್ಲರೂ ಬೆನ್ಯಾಮೀನ್ಯರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)40 ಊಲಾಮನ ಮಕ್ಕಳು ಶೂರಸೈನಿಕರೂ ಬಿಲ್ಲುವಿದ್ಯೆಯಲ್ಲಿ ಪರಿಣಿತರೂ ಆಗಿದ್ದರು. ಅವನಿಗೆ ಒಟ್ಟು ಒಂದುನೂರ ಐವತ್ತು ಮಂದಿ ಮಕ್ಕಳು ಮೊಮ್ಮಕ್ಕಳೂ ಇದ್ದರು. ಇವರೆಲ್ಲರೂ ಬೆನ್ಯಾಮೀನ್ ಗೋತ್ರದವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)40 ಊಲಾಮನ ಮಕ್ಕಳು ಬಿಲ್ಲನ್ನು ಉಪಯೋಗಿಸುವದರಲ್ಲಿ ಗಟ್ಟಿಗರಾದ ರಣವೀರರು. ಅವರು ಅನೇಕ ಮಂದಿ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಪಡೆದರು. ಅವರು ಒಟ್ಟಿಗೆ ನೂರ ಐವತ್ತು ಮಂದಿ. ಎಲ್ಲರೂ ಬೆನ್ಯಾಮೀನ್ಯರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ40 ಈ ಉಲಾಮನ ಪುತ್ರರು ಬಿಲ್ಲುಗಾರರಾಗಿ ಯುದ್ಧದಲ್ಲಿ ಪರಾಕ್ರಮಶಾಲಿಗಳಾಗಿದ್ದರು. ಅವರಿಗೆ ಮಕ್ಕಳೂ, ಮೊಮ್ಮಕ್ಕಳೂ 150 ಮಂದಿ ಇದ್ದರು. ಇವರೆಲ್ಲರೂ ಬೆನ್ಯಾಮೀನನ ವಂಶಜರು. ಅಧ್ಯಾಯವನ್ನು ನೋಡಿ |