1 ಪೂರ್ವಕಾಲ ವೃತ್ತಾಂತ 7:21 - ಪರಿಶುದ್ದ ಬೈಬಲ್21 ತಹತನ ಮಗನು ಜಾಬಾದ್ ಮತ್ತು ಜಾಬಾದನ ಮಕ್ಕಳು ಶೂತೆಲಹ, ಎಜೆರ್, ಎಲ್ಲಾದ್ ಎಂಬುವರು. ಗತ್ ನಗರದ ಮೂಲನಿವಾಸಿಗಳು ಎಜೆರನನ್ನು ಮತ್ತು ಎಲ್ಲಾದನನ್ನು ಕೊಂದುಹಾಕಿದರು. ಯಾಕೆಂದರೆ ಎಜೆರನು ಮತ್ತು ಎಲ್ಲಾದನು ಗತ್ ಊರಿನವರ ದನಕುರಿಗಳನ್ನು ಕದ್ದುಕೊಳ್ಳಲು ಹೋಗಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ತಹತನ ಮಗ ಜಾಬಾದ್, ಜಾಬಾದನ ಮಕ್ಕಳು ಶೂತೆಲಹ, ಏಜೆರ್ ಮತ್ತು ಎಲ್ಲಾದ್. ಇವರು ಗತ್ ಊರಿನವರ ದನಕುರಿಗಳನ್ನು ಸುಲಿಗೆ ಮಾಡುವುದಕ್ಕೋಸ್ಕರ ಗಟ್ಟಾ ಇಳಿದು ಅವರ ದೇಶಕ್ಕೆ ಹೋದುದರಿಂದ ಆ ದೇಶದ ಮೂಲ ನಿವಾಸಿಗಳು ಇವರನ್ನು ಕೊಂದುಹಾಕಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಜಾಬಾದ್, ಶೂತೆಲಹ ಎಂಬವರು. ಶೂತೆಲಹನಲ್ಲದೆ ಎಫ್ರಯಿಮನಿಗೆ ಎಜೆರ್, ಎಲ್ಲಾದ್ ಎಂಬಿಬ್ಬರು ಮಕ್ಕಳಿದ್ದರು. ಇವರು ಗತ್‍ನ ಮೂಲನಿವಾಸಿಗಳ ದನಗಳನ್ನು ಕದಿಯಲು ಪ್ರಯತ್ನಿಸಿದಾಗ ಕೊಲೆಗೀಡಾದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಇವನ ಮಗನು ಜಾಬಾದ್; ಇವನ ಮಕ್ಕಳು - ಶೂತೆಲಹ, ಎಜೆರ್, ಎಲ್ಲಾದ್ ಎಂಬವರು. ಇವರು ಗತ್ ಊರಿನವರ ದನಕುರಿಗಳನ್ನು ಸುಲಿಗೆ ಮಾಡುವದಕ್ಕೋಸ್ಕರ ಗಟ್ಟಾ ಇಳಿದು ಅವರ ದೇಶಕ್ಕೆ ಹೋದದರಿಂದ ಆ ದೇಶದ ಮೂಲನಿವಾಸಿಗಳು ಇವರನ್ನು ಕೊಂದುಹಾಕಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 ಅವನ ಮಗನು ಜಾಬಾದ್; ಅವನ ಮಗನು ಶೂತೆಲಹ, ಏಜೆರ್, ಎಲಿಯಾದ್. ಆ ದೇಶದಲ್ಲಿ ಹುಟ್ಟಿದ ಗತ್‌ನವರು ಇವರ ಪಶುಗಳನ್ನು ಹಿಡಿದುಕೊಳ್ಳಲು ಇಳಿದು ಬಂದಾಗ, ಇವರನ್ನು ಕೊಂದುಹಾಕಿದರು. ಅಧ್ಯಾಯವನ್ನು ನೋಡಿ |