1 ಪೂರ್ವಕಾಲ ವೃತ್ತಾಂತ 6:53 - ಪರಿಶುದ್ದ ಬೈಬಲ್53 ಚಾದೋಕ್ ಅಹೀಟೂಬನ ಮಗ, ಅಹಿಮಾಚನು ಚಾದೋಕನ ಮಗ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201953 ಅಹೀಟೂಬನ ಮಗ ಚಾದೋಕ್, ಇವನ ಮಗ ಅಹಿಮಾಚ್. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)53 ಚಾದೋಕ್ ಮತ್ತು ಅಹಿಮಾಚ್. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)53 ಇವನ ಮಗನು ಅಹೀಟೂಬ್; ಇವನ ಮಗನು ಚಾದೋಕ್; ಇವನ ಮಗನು ಅಹಿಮಾಚ್. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ53 ಅವನ ಮಗನು ಚಾದೋಕನು, ಅವನ ಮಗನು ಅಹೀಮಾಚನು. ಅಧ್ಯಾಯವನ್ನು ನೋಡಿ |
“ಯಾಜಕರೆಲ್ಲರೂ ಲೇವಿ ಕುಲಕ್ಕೆ ಸಂಬಂಧಪಟ್ಟವರು. ಆದರೆ ಲೇವಿಯರು ನನ್ನನ್ನು ಬಿಟ್ಟು ತೊಲಗಿದಾಗ ಚಾದೋಕನ ಸಂತತಿಯವರಾದ ಯಾಜಕರು ನನ್ನ ಪವಿತ್ರ ಸ್ಥಳವನ್ನು ಪರಾಂಬರಿಸಿದರು. ಆದ್ದರಿಂದ ಚಾದೋಕನ ಸಂತತಿಯವರು ಮಾತ್ರ ನನಗೆ ಕಾಣಿಕೆಗಳನ್ನು ಸಮರ್ಪಿಸುವರು. ಅವರು ನನ್ನ ಸನ್ನಿಧಿಯಲ್ಲಿ ನಿಂತು ಯಜ್ಞಮಾಡಲ್ಪಡುವ ಪ್ರಾಣಿಗಳ ಕೊಬ್ಬು ಮತ್ತು ರಕ್ತವನ್ನು ನನಗೆ ಸಮರ್ಪಿಸುವರು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
ಇವರನ್ನು ವಿಶಿಷ್ಟಕಾರ್ಯಗಳಿಗಾಗಿ ಚೀಟುಹಾಕಿ ಆರಿಸಲಾಯಿತು. ಆರೋನನ ಸಂತತಿಯವರೂ ಯಾಜಕರೂ ಆಗಿದ್ದ ತಮ್ಮ ಸಂಬಂಧಿಕರು ಮಾಡಿದಂತೆಯೇ ಚೀಟುಹಾಕಿ ವಿಶಿಷ್ಟ ಕಾರ್ಯಗಳಿಗಾಗಿ ಇವರನ್ನು ಆರಿಸಿಕೊಳ್ಳಲಾಯಿತು. ರಾಜನಾದ ದಾವೀದನ, ಚಾದೋಕನ, ಅಹೀಮೆಲೆಕನ ಮತ್ತು ಲೇವಿಕುಲದ ನಾಯಕರ ಎದುರಿಗೆ ಚೀಟುಹಾಕಿದರು. ಹಿರಿಯ ಅಥವಾ ಕಿರಿಯ ಕುಟುಂಬಗಳೆನ್ನದೆ ಎಲ್ಲರಿಗೂ ಸಮಾನವಾಗಿ ಕೆಲಸಗಳನ್ನು ಹಂಚಿದರು.