Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 4:17 - ಪರಿಶುದ್ದ ಬೈಬಲ್‌

17-18 ಎಜ್ರನ ಗಂಡುಮಕ್ಕಳು ಯಾರೆಂದರೆ: ಯೆತೆರ್, ಮೆರೆದ್, ಏಫೆರ್, ಯಾಲೋನ್, ಮೆರೆದನ ಗಂಡುಮಕ್ಕಳು: ಮಿರ್ಯಾಮ್, ಶಮ್ಮೈ ಮತ್ತು ಇಷ್ಬಹ. ಇಷ್ಬಹನ ಮಗ ಎಷ್ಟೆಮೋ. ಮೆರೆದನಿಗೆ ಯೆಹೂದ್ಯಳಾದ ಹೆಂಡತಿಯಿದ್ದಳು. ಅವಳಲ್ಲಿ ಯೆರೆದ್, ಹೆಬೆರ್ ಮತ್ತು ಯೆಕೊತೀಯೇಲ್ ಎಂಬ ಗಂಡುಮಕ್ಕಳು ಹುಟ್ಟಿದರು. ಯೆರೆದನು ಗೆದೋರ್ಯನ ತಂದೆ. ಹೆಬೆರನು ಸೋಕೋನನ ತಂದೆ; ಯೆಕೊತೀಯೇಲನು ಜಾನೋಹನ ತಂದೆ. ಇವರು ಬಿತ್ಯಳ ಮಕ್ಕಳು; ಬಿತ್ಯಳು ಫರೋಹನ ಮಗಳು. ಈಕೆಯೇ ಮೆರೆದನ ಈಜಿಪ್ಟಿನ ಹೆಂಡತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಎಜ್ರನ ಮಕ್ಕಳು: ಯೆತೆರ್, ಮೆರೆದ್, ಏಫೆರ್ ಮತ್ತು ಯಾಲೋನ್ ಎಂಬುವವರು. ಮೆರೆದನು ಫರೋಹನ ಮಗಳಾದ ಬಿತ್ಯೆಳನ್ನು ಮದುವೆಮಾಡಿಕೊಂಡನು. ಈಕೆಯು ಅವನಿಂದ ಗರ್ಭಿಣಿಯಾಗಿ ಮಿರ್ಯಾಮ್, ಶಮ್ಮೈ, ಎಷ್ಟೆಮೋವದವರ ಮೂಲಪುರುಷನಾದ ಇಷ್ಬಹ ಇವರನ್ನು ಹೆತ್ತಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17-18 ಎಜ್ರನಿಗೆ ಯೆತೆರ್, ಮೆರೆದ್, ಏಫೇರ್, ಯಾಲೋನ್ ಎಂಬ ನಾಲ್ವರು ಮಕ್ಕಳಿದ್ದರು. ಮೆರೆದನು ಈಜಿಪ್ಟಿನ ಅರಸನ ಮಗಳು ಬಿತ್ಯ ಎಂಬವಳನ್ನು ಮದುವೆಯಾಗಿ ಮಿರ್ಯಾಮ್ ಎಂಬ ಮಗಳನ್ನೂ ಶಮ್ಮೈ, ಎಷ್ಟೆಮೋವ ಎಂಬ ಇಬ್ಬರು ಗಂಡುಮಕ್ಕಳನ್ನೂ ಪಡೆದನು. ಇಷ್ಟಹನು ಎಷ್ಟಮೋವ್ ಪಟ್ಟಣವನ್ನು ಕಟ್ಟಿಸಿದನು. ಮೆರೆದನು ಸಹ ಯಾದ್ ಕುಲದ ಸ್ತ್ರೀಯೊಬ್ಬಳನ್ನು ಮದುವೆಯಾಗಿ ಅವಳಿಂದ ಮೂರು ಜನ ಮಕ್ಕಳನ್ನು ಪಡೆದನು: ಗೆದೋರ್ಯ ಪಟ್ಟಣ ಕಟ್ಟಿಸಿದ ಯೆರೆದ್, ಸೋಕೋವಿ ಪಟ್ಟಣದ ಸ್ಥಾಪಕ ಹೆಬಿರ್ ಮತ್ತು ಜಾನೋಹ ಪಟ್ಟಣದ ಸ್ಥಾಪಕ ಯೆಕೂತೀಯೇಲ್ ಎಂಬವರೇ ಆ ಮೂರು ಮಂದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಎಜ್ರನ ಮಕ್ಕಳು - ಯೆತೆರ್, ಮೆರೆದ್ ಏಫೆರ್, ಯಾಲೋನ್ ಎಂಬವರು. ಮೆರೆದನು ಫರೋಹನ ಮಗಳಾದ ಬಿತ್ಯಳನ್ನು ಮದುವೆ ಮಾಡಿಕೊಂಡನು. ಈಕೆಯು ಅವನಿಂದ ಗರ್ಭಿಣಿಯಾಗಿ ವಿುರ್ಯಾಮ್, ಶಮ್ಮೈ, ಎಷ್ಟೆಮೋವದವರ ಮೂಲಪುರುಷನಾದ ಇಷ್ಬಹ ಇವರನ್ನು ಹೆತ್ತಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಎಜ್ರನ ಪುತ್ರರು: ಯೆತೆರ್, ಮೆರೆದ್, ಏಫೆರ್, ಯಾಲೋನ್ ಎಂಬವರು. ಮೇರದನ ಹೆಂಡತಿಯು ಅವನಿಗೆ ಮಿರ್ಯಾಮ್, ಶಮ್ಮಾಯ, ಎಷ್ಟೆಮೋವನ ತಂದೆ ಇಷ್ಬಾಹನನ್ನೂ ಹೆತ್ತಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 4:17
7 ತಿಳಿವುಗಳ ಹೋಲಿಕೆ  

ಮೆರೆದನ ಹೆಂಡತಿಯು ನೆಹಮನ ತಂಗಿ. ಮೆರೆದನ ಹೆಂಡತಿಯು ಯೂದಾಯದಿಂದ ಬಂದವಳು. ಮೆರೆದನ ಹೆಂಡತಿಯ ಗಂಡುಮಕ್ಕಳು: ಕೆಯೀಲ ಮತ್ತು ಎಷ್ಟೆಮೋ ಗೋತ್ರಗಳ ಮೂಲಪಿತೃಗಳು. ಕೆಯೀಲನು ಗರ್ಮ್ಯರಿಗೆ ಸೇರಿದವನು ಮತ್ತು ಎಷ್ಟೆಮೋವನು ಮಾಕಾತ್ಯರಿಗೆ ಸೇರಿದವನು.


ಅದಕ್ಕೆ ದಾವೀದನು, “ನೋಡು, ನಾನು ಅವಕ್ಕೆಲ್ಲಾ ಪೂರ್ಣಕ್ರಯ ಕೊಡುತ್ತೇನೆ. ನಿನ್ನಿಂದ ನಾನು ಪುಕ್ಕಟೆಯಾಗಿ ತೆಗೆದುಕೊಂಡದ್ದನ್ನು ದೇವರಿಗೆ ಸಮರ್ಪಿಸುವುದಿಲ್ಲ. ಧರ್ಮಾರ್ಥವಾಗಿ ದೊರೆತದ್ದನ್ನು ದೇವರಿಗೆ ಕಾಣಿಕೆಯಾಗಿ ಕೊಡುವದಿಲ್ಲ” ಎಂದನು.


ಆರೋನನ ಸಂತತಿಯವರಿಗೆ ಹೆಬ್ರೋನ್ ಪಟ್ಟಣವನ್ನೇ ಕೊಟ್ಟರು. ಹೆಬ್ರೋನು ಆಶ್ರಯಪಟ್ಟಣಗಳಲ್ಲಿ ಒಂದಾಗಿತ್ತು. ಅವರಿಗೆ ಬೇರೆ ನಗರಗಳೂ ಕೊಡಲ್ಪಟ್ಟವು: ಲಿಬ್ನ, ಯತ್ತೀರ್, ಎಷ್ಟೆಮೋವ, ಹೀಲ್ಲೇನ್, ದೆಬೀರ್,


ಅರೋಯೇರಿನವರಿಗೆ, ಸಿಪ್ಮೋತಿನವರಿಗೆ, ಎಷ್ಟೆಮೋವದವರಿಗೆ,


ಅನಾಬ್, ಎಷ್ಟೆಮೋ, ಅನೀಮ್,


ಯೆಹಲ್ಲೆಲೇಲನ ಗಂಡುಮಕ್ಕಳು ಯಾರೆಂದರೆ: ಜೀಪ್, ಜೀಫಾ, ತೀರ್ಯ ಮತ್ತು ಅಸರೇಲ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು