1 ಪೂರ್ವಕಾಲ ವೃತ್ತಾಂತ 3:15 - ಪರಿಶುದ್ದ ಬೈಬಲ್15 ಯೋಷೀಯನ ಗಂಡುಮಕ್ಕಳು ಯಾರೆಂದರೆ: ಮೊದಲನೆಯವನು ಯೋಹಾನಾನ್; ಎರಡನೆಯವನು ಯೆಹೋಯಾಕೀಮ; ಮೂರನೆಯವನು ಚಿದ್ಕೀಯ; ನಾಲ್ಕನೆಯವನು ಶಲ್ಲೂಮ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ಯೋಷೀಯನ ಮಕ್ಕಳು: ಚೊಚ್ಚಲ ಮಗ ಯೋಹಾನಾನ್, ಎರಡನೆಯವನು ಯೆಹೋಯಾಕೀಮ್, ಮೂರನೆಯವನು ಚಿದ್ಕೀಯ, ನಾಲ್ಕನೆಯವನು ಶಲ್ಲೂಮ್. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ಯೋಷೀಯನಿಗೆ ನಾಲ್ಕು ಜನಮಕ್ಕಳು: ಯೋಹಾನಾನ್, ಯೆಹೋಯಾಕೀಮ್, ಚಿದ್ಕೀಯ ಮತ್ತು ಶಲ್ಲೂಮ್. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ಯೋಷೀಯನ ಮಕ್ಕಳು - ಚೊಚ್ಚಲನು ಯೋಹಾನಾನ್; ಎರಡನೆಯವನು ಯೆಹೋಯಾಕೀಮ್; ಮೂರನೆಯವನು ಚಿದ್ಕೀಯ; ನಾಲ್ಕನೆಯವನು ಶಲ್ಲೂಮ್. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಯೋಷೀಯನ ಮಕ್ಕಳು: ಚೊಚ್ಚಲಮಗನಾದ ಯೋಹಾನಾನ್, ಎರಡನೆಯವನಾದ ಯೆಹೋಯಾಕೀಮ್, ಮೂರನೆಯವನಾದ ಚಿದ್ಕೀಯ, ನಾಲ್ಕನೆಯವನಾದ ಶಲ್ಲೂಮ್. ಅಧ್ಯಾಯವನ್ನು ನೋಡಿ |
ಯೆಹೋಯಾಕೀಮನು ಯೆಹೂದದಲ್ಲಿ ಆಳುವಾಗಲೂ ಯೆಹೋವನು ಯೆರೆಮೀಯನೊಂದಿಗೆ ಮಾತನಾಡುವದನ್ನು ಮುಂದುವರೆಸಿದನು. ಯೆಹೋಯಾಕೀಮನು ಯೋಷೀಯನ ಮಗನು. ಯೆಹೂದದಲ್ಲಿ ಚಿದ್ಕೀಯನು ಆಳಿದ ಹನ್ನೊಂದು ವರ್ಷ ಐದು ತಿಂಗಳ ಕಾಲ ಯೆಹೋವನು ಯೆರೆಮೀಯನೊಂದಿಗೆ ಮಾತನಾಡುವದನ್ನು ಮುಂದುವರೆಸಿದನು. ಚಿದ್ಕೀಯನು ಸಹ ಯೋಷೀಯನ ಮಗನಾಗಿದ್ದನು. ಚಿದ್ಕೀಯನ ಆಳ್ವಿಕೆಯ ಹನ್ನೊಂದನೇ ವರ್ಷದ ಐದನೆಯ ತಿಂಗಳಿನಲ್ಲಿ ಜೆರುಸಲೇಮಿನ ನಿವಾಸಿಗಳು ಸೆರೆ ಒಯ್ಯಲ್ಪಟ್ಟರು.
ಯೋಷೀಯನ ಮಗನಾದ ಯೆಹೋಯಾಕೀಮನಿಗೆ ಯೆಹೋವನು ಹೀಗೆ ಹೇಳುವನು, “ಯೆಹೂದದ ಜನರು ಯೆಹೋಯಾಕೀಮನಿಗೋಸ್ಕರ ಗೋಳಾಡುವದಿಲ್ಲ. ಅವರು ಒಬ್ಬರಿಗೊಬ್ಬರು, ‘ನನ್ನ ಸೋದರನೇ, ಯೆಹೋಯಾಕೀಮನಿಗೋಸ್ಕರ ನನಗೆ ತುಂಬ ದುಃಖವಾಗಿದೆ, ನನ್ನ ಸೋದರಿಯೇ, ಯೆಹೋಯಾಕೀಮನಿಗೋಸ್ಕರ ನನಗೆ ತುಂಬ ದುಃಖವಾಗಿದೆ’ ಎಂದು ಹೇಳುವದಿಲ್ಲ. ಯೆಹೂದದ ಜನರು ಯೆಹೋಯಾಕೀಮನಿಗೋಸ್ಕರ ಅಳುವದಿಲ್ಲ. ಅವರು ಅವನ ಬಗ್ಗೆ ‘ಒಡೆಯನೇ, ನನ್ನ ರಾಜನೇ, ನನಗೆ ತುಂಬಾ ದುಃಖವಾಗಿದೆ’ ಎಂದು ಹೇಳುವದಿಲ್ಲ.