Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 29:2 - ಪರಿಶುದ್ದ ಬೈಬಲ್‌

2 ದೇವಾಲಯವನ್ನು ಕಟ್ಟಲು ಅದಕ್ಕೆ ಬೇಕಾದ ಬೆಳ್ಳಿ, ಬಂಗಾರ, ತಾಮ್ರ ಮುಂತಾದವುಗಳನ್ನು ಬಹು ಪ್ರಯಾಸದಿಂದ ಶೇಖರಿಸಿದ್ದೇನೆ. ಬಂಗಾರದಿಂದ ಮಾಡಬೇಕಾದ ಸಾಮಗ್ರಿಗಳಿಗೆ ಬೇಕಾದ ಬಂಗಾರವನ್ನು ಕೊಟ್ಟಿರುತ್ತೇನೆ. ಬೆಳ್ಳಿಯಿಂದ ತಯಾರಿಸಬೇಕಾದ ಸಾಮಗ್ರಿಗಳಿಗೆ ತಗಲುವ ಬೆಳ್ಳಿಯನ್ನು ಕೊಟ್ಟಿರುತ್ತೇನೆ. ಹಾಗೆಯೇ ತಾಮ್ರದ ವಸ್ತುಗಳಿಗೆ ಬೇಕಾಗುವ ತಾಮ್ರವನ್ನು ಕೊಟ್ಟಿದ್ದೇನೆ; ಕಬ್ಬಿಣದ ವಸ್ತುಗಳಿಗೆ ಬೇಕಾಗುವ ಕಬ್ಬಿಣವನ್ನು ಕೊಟ್ಟಿದ್ದೇನೆ; ಮರದಿಂದ ಮಾಡುವ ಸಾಮಗ್ರಿಗಳಿಗೆ ಬೇಕಾಗುವ ಮರವನ್ನು ಕೊಟ್ಟಿದ್ದೇನೆ; ನೀಲಿ ಬಣ್ಣದ ರತ್ನಗಳನ್ನು, ಚೌಕಟ್ಟಿಗೆ ಬೇಕಾದ ರತ್ನಗಳನ್ನು, ಹೊಳೆಯುವ ನಾನಾಬಣ್ಣದ ಹರಳುಗಳನ್ನು, ಬಿಳಿಬಣ್ಣದ ಹಾಲುಗಲ್ಲುಗಳನ್ನು ಬೇಕಾದಷ್ಟು ಸಂಗ್ರಹಿಸಿಟ್ಟಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ನಾನು ನನ್ನಿಂದಾಗುವಷ್ಟು ಪ್ರಯಾಸಪಟ್ಟು ಬಂಗಾರದ ಕೆಲಸಕ್ಕಾಗಿ ಬೇಕಾಗುವ ಬಂಗಾರ, ಬೆಳ್ಳಿಯ ಕೆಲಸಕ್ಕಾಗಿ ಬೇಕಾಗುವ ಬೆಳ್ಳಿ, ತಾಮ್ರದ ಕೆಲಸಕ್ಕಾಗಿ ಬೇಕಾಗುವ ತಾಮ್ರ, ಕಬ್ಬಿಣದ ಕೆಲಸಕ್ಕಾಗಿ ಬೇಕಾಗುವ ಕಬ್ಬಿಣ, ಮರದ ಕೆಲಸಕ್ಕಾಗಿ ಬೇಕಾಗುವ ಮರ ಇವುಗಳನ್ನೂ, ಗೋಮೇಧಿಕ ರತ್ನ, ಕೆತ್ತುವುದಕ್ಕೆ ಬೇಕಾಗುವ ರತ್ನ, ಕೆಂಪು ಹರಳು, ವಿಚಿತ್ರ ವರ್ಣದ ಕಲ್ಲು, ಎಲ್ಲಾ ತರದ ಮಣಿ, ಚಂದ್ರಕಾಂತಶಿಲೆ ಇವುಗಳನ್ನೂ ನನ್ನ ದೇವರ ಮಂದಿರಕ್ಕೋಸ್ಕರ ರಾಶಿ ರಾಶಿಯಾಗಿ ಸಂಗ್ರಹಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ನಾನು ನನ್ನಿಂದಾಗುವಷ್ಟು ಪ್ರಯಾಸಪಟ್ಟು ಬಂಗಾರದ ಕೆಲಸಕ್ಕಾಗಿ ಬೇಕಾಗುವ ಬಂಗಾರ, ಬೆಳ್ಳಿಯ ಕೆಲಸಕ್ಕಾಗಿ ಬೇಕಾಗುವ ಬೆಳ್ಳಿ, ತಾಮ್ರದ ಕೆಲಸಕ್ಕಾಗಿ ಬೇಕಾಗುವ ತಾಮ್ರ, ಕಬ್ಬಿಣದ ಕೆಲಸಕ್ಕಾಗಿ ಬೇಕಾಗುವ ಕಬ್ಬಿಣ, ಮರದ ಕೆಲಸಕ್ಕಾಗಿ ಬೇಕಾಗುವ ಮರ, ಇವುಗಳನ್ನೂ ಗೋಮೇಧಕ ರತ್ನ ಕೆತ್ತುವುದಕ್ಕೆ ಬೇಕಾಗುವ ರತ್ನ, ಕೆಂಪುಹರಳು, ವಿವಿಧ ವರ್ಣದ ಕಲ್ಲು, ತರತರದ ಮಣೆ, ಚಂದ್ರಕಾಂತ ಇವುಗಳನ್ನೂ ನನ್ನ ದೇವರ ಮಂದಿರಕ್ಕಾಗಿ ರಾಶಿರಾಶಿಯಾಗಿ ಸಂಗ್ರಹಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ನಾನು ನನ್ನಿಂದಾಗುವಷ್ಟು ಪ್ರಯಾಸಪಟ್ಟು ಬಂಗಾರದ ಕೆಲಸಕ್ಕಾಗಿ ಬೇಕಾಗುವ ಬಂಗಾರ, ಬೆಳ್ಳಿಯ ಕೆಲಸಕ್ಕಾಗಿ ಬೇಕಾಗುವ ಬೆಳ್ಳಿ, ತಾಮ್ರದ ಕೆಲಸಕ್ಕಾಗಿ ಬೇಕಾಗುವ ತಾಮ್ರ, ಕಬ್ಬಿಣದ ಕೆಲಸಕ್ಕಾಗಿ ಬೇಕಾಗುವ ಕಬ್ಬಿಣ, ಮರದ ಕೆಲಸಕ್ಕಾಗಿ ಬೇಕಾಗುವ ಮರ ಇವುಗಳನ್ನೂ ಗೋಮೇಧಕ ರತ್ನ, ಕೆತ್ತುವದಕ್ಕೆ ಬೇಕಾಗುವ ರತ್ನ, ಕೆಂಪರಲು, ವಿಚಿತ್ರ ವರ್ಣದ ಕಲ್ಲು, ಎಲ್ಲಾ ತರದ ಮಣಿ, ಚಂದ್ರಕಾಂತ ಇವುಗಳನ್ನೂ ನನ್ನ ದೇವರ ಮಂದಿರಕ್ಕೋಸ್ಕರ ರಾಶಿರಾಶಿಯಾಗಿ ಸಂಗ್ರಹಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಆದರೆ ನಾನು ನನ್ನ ಸಮಸ್ತ ಶಕ್ತಿಯಿಂದ ನನ್ನ ದೇವರ ಮನೆಯ ನಿಮಿತ್ತ, ಬಂಗಾರದ ಕೆಲಸಕ್ಕೋಸ್ಕರ ಬಂಗಾರವನ್ನೂ, ಬೆಳ್ಳಿಯ ಕೆಲಸಕ್ಕೋಸ್ಕರ ಬೆಳ್ಳಿಯನ್ನೂ, ಕಂಚಿನ ಕೆಲಸಕ್ಕೋಸ್ಕರ ಕಂಚನ್ನೂ, ಕಬ್ಬಿಣದ ಕೆಲಸಕ್ಕೋಸ್ಕರ ಕಬ್ಬಿಣವನ್ನೂ, ಮರದ ಕೆಲಸಕ್ಕೋಸ್ಕರ ಮರವನ್ನೂ, ಗೋಮೇಧಿಕ ರತ್ನಗಳನ್ನೂ; ಕೆತ್ತುವುದಕ್ಕೆ ರತ್ನ ವಿಚಿತ್ರವಾದಂಥ ಕಲ್ಲುಗಳನ್ನೂ; ಸಕಲ ಅಮೂಲ್ಯವಾದ ಕಲ್ಲುಗಳನ್ನೂ. ಅಮೃತ ಶಿಲೆಗಳನ್ನೂ ಬಹಳಷ್ಟು ಸಿದ್ಧಮಾಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 29:2
22 ತಿಳಿವುಗಳ ಹೋಲಿಕೆ  

ಎಲ್ಲಾ ಕಾರ್ಯಗಳನ್ನು ನಿಮ್ಮಿಂದಾದಷ್ಟು ಅತ್ಯುತ್ತಮವಾಗಿಯೇ ಮಾಡಿರಿ. ಯಾವುದೇ ಕಾರ್ಯವನ್ನಾಗಲಿ ಜನರಿಗಾಗಿ ಮಾಡದೆ ಪ್ರಭುವಿಗಾಗಿ ಮಾಡಿರಿ.


ನಿನ್ನ ಕೆಲಸಕಾರ್ಯಗಳನ್ನು ನಿನ್ನಿಂದಾದಷ್ಟು ಉತ್ತಮವಾಗಿ ಮಾಡು. ಸಮಾಧಿಯಲ್ಲಿ ನಿನಗೆ ಕೆಲಸವಿಲ್ಲ. ಅಲ್ಲಿ ಆಲೋಚನೆಯಾಗಲಿ ಜ್ಞಾನವಾಗಲಿ ವಿವೇಕವಾಗಲಿ ಇರುವುದಿಲ್ಲ. ನಾವೆಲ್ಲರೂ ಮರಣದ ಆ ಸ್ಥಳಕ್ಕೆ ಹೋಗುತ್ತಿದ್ದೇವೆ.


ತಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಕೊಟ್ಟಿದ್ದಾರೆಂದು ನಾನು ನಿಮಗೆ ಹೇಳುತ್ತೇನೆ. ಅವರು ತಮ್ಮ ಶಕ್ತಿಮೀರಿ ಕೊಟ್ಟಿದ್ದಾರೆ. ಅವರು ತಾವಾಗಿಯೇ ಕೊಟ್ಟರು. ಕೊಡಬೇಕೆಂದು ಅವರಿಗೆ ಯಾರೂ ಹೇಳಲಿಲ್ಲ.


ಓಫೀರ್ ದೇಶದ ಬಂಗಾರದಿಂದಾಗಲಿ ಅಮೂಲ್ಯವಾದ ಗೋಮೇಧಕ ರತ್ನದಿಂದಾಗಲಿ ಇಂದ್ರನೀಲಮಣಿಗಳಿಂದಾಗಲಿ ಜ್ಞಾನವನ್ನು ಕೊಂಡುಕೊಳ್ಳಲಾಗದು.


ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ, ವೈಡೂರ್ಯಗಳು ಇದ್ದವು. ಈ ಎಲ್ಲಾ ರತ್ನಗಳನ್ನು ಚಿನ್ನದ ಜವೆಯ ಕಲ್ಲುಗಳಲ್ಲಿ ಇಟ್ಟರು.


ಕೆಲಸಗಾರರು ಗೋಮೇಧಕ ರತ್ನಗಳನ್ನು ಏಫೋದಿನೊಳಗೆ ಚಿನ್ನದ ಕುಂದಣದಲ್ಲಿ ಇಟ್ಟರು. ಈ ರತ್ನಗಳಲ್ಲಿ ಇಸ್ರೇಲರ ಹನ್ನೆರಡು ಕುಲಗಳ ಹೆಸರುಗಳನ್ನು ಬರೆದರು.


ನಾಲ್ಕನೆಯ ಸಾಲಿನಲ್ಲಿ ಪೀತರತ್ನ ಮತ್ತು ಬೆರುಲ್ಲ ವಜ್ರಗಳಿರಬೇಕು. ಈ ಎಲ್ಲಾ ರತ್ನಗಳನ್ನು ಚಿನ್ನದ ಜವೆಯ ಕಲ್ಲುಗಳಲ್ಲಿ ಸೇರಿಸಬೇಕು.


ಅದರ ಮೇಲೆ ಅಂದವಾದ ರತ್ನಗಳನ್ನು ನಾಲ್ಕು ಸಾಲುಗಳಾಗಿ ಹಾಕಿಸಬೇಕು. ರತ್ನಗಳ ಮೊದಲಿನ ಸಾಲಿನಲ್ಲಿ ಮಾಣಿಕ್ಯ, ಪುಷ್ಪರಾಗ, ಸ್ಪಟಿಕಗಳಿರಬೇಕು.


ಈ ದೇಶದಲ್ಲಿ ಒಳ್ಳೆಯ ಬಂಗಾರ ದೊರೆಯುತ್ತಿತ್ತು. ಅಲ್ಲದೆ ಗುಗ್ಗುಲ ಮತ್ತು ಗೋಮೇಧಿಕ ರತ್ನ ಸಹ ದೊರಕುತ್ತಿದ್ದವು.


ಯೇಸುವಿನ ವಿಷಯವಾದ ಸುದ್ದಿಯು ಸಿರಿಯ ದೇಶದಲ್ಲೆಲ್ಲಾ ಹರಡಿತು. ಜನರು ಕಾಯಿಲೆಯವರನ್ನೆಲ್ಲ ಯೇಸುವಿನ ಬಳಿಗೆ ತಂದರು. ಅವರು ನಾನಾ ವಿಧವಾದ ವ್ಯಾಧಿಗಳಿಂದ ಮತ್ತು ನೋವಿನಿಂದ ಬಾಧೆಪಡುತ್ತಿದ್ದರು. ಕೆಲವರು ತೀವ್ರವಾದ ನೋವಿನಿಂದ ನರಳುತ್ತಿದ್ದರು. ಕೆಲವರು ದೆವ್ವಗಳಿಂದ ಪೀಡಿತರಾಗಿದ್ದರು. ಕೆಲವರು ಮೂರ್ಛಾರೋಗಿಗಳಾಗಿದ್ದರು. ಕೆಲವರು ಪಾರ್ಶ್ವವಾಯು ರೋಗಿಗಳಾಗಿದ್ದರು. ಯೇಸು ಇವರನ್ನೆಲ್ಲಾ ಗುಣಪಡಿಸಿದನು.


ಅಲ್ಲದೆ ದೇವಾಲಯಕ್ಕೆ ಬೇಕಾದ ಬೆಳ್ಳಿಬಂಗಾರಗಳ ಸಾಮಾನುಗಳನ್ನು ನಾನು ಕಾಣಿಕೆಯಾಗಿ ಕೊಟ್ಟಿರುತ್ತೇನೆ. ಯಾಕೆಂದರೆ ನನ್ನ ದೇವರ ಪರಿಶುದ್ಧಾಲಯವು ಕಟ್ಟಲ್ಪಡಬೇಕೆಂಬುದು ನಿಜವಾಗಿಯೂ ನನ್ನ ಬಯಕೆಯಾಗಿದೆ. ಈ ಪವಿತ್ರ ದೇವಾಲಯವನ್ನು ಕಟ್ಟಲು ನಾನು ಈ ವಸ್ತುಗಳನ್ನೆಲ್ಲಾ ಕೊಡುತ್ತಿದ್ದೇನೆ.


ನನ್ನ ಮಗನಾದ ಸೊಲೊಮೋನನೂ ನಿನಗೆ ನಂಬಿಗಸ್ತನಾಗಿರುವಂತೆ ಸಹಾಯಮಾಡು. ನಿನ್ನ ಆಜ್ಞೆ, ಕಟ್ಟಳೆ ಮತ್ತು ನಿಯಮಗಳನ್ನು ಅನುಸರಿಸಲು ಸಹಾಯಮಾಡು. ನಿನ್ನ ಮಂದಿರಕ್ಕಾಗಿ ನಾನು ಇಷ್ಟೆಲ್ಲವನ್ನು ಸಿದ್ಧಮಾಡಿರುವೆನಲ್ಲಾ, ಅವನು ಅದನ್ನು ಕಟ್ಟಿ ಪೂರ್ಣಗೊಳಿಸಲು ಸಹಾಯಮಾಡು.”


“ಎರಡು ಗೋಮೇಧಕ ರತ್ನಗಳನ್ನು ತೆಗೆದುಕೊ. ಈ ರತ್ನಗಳ ಮೇಲೆ ಇಸ್ರೇಲನ ಹನ್ನೆರಡು ಗಂಡುಮಕ್ಕಳ ಹೆಸರನ್ನು ಬರೆಸು.


ದೇವಾಲಯವನ್ನು ಬೆಲೆಯುಳ್ಳ ರತ್ನಗಳಿಂದ ಅಲಂಕರಿಸಿದನು. ಸೊಲೊಮೋನನು ಪರ್ವಯಿಮ್ ದೇಶದ ಬಂಗಾರವನ್ನು ಉಪಯೋಗಿಸಿದನು.


“ಬೆಳ್ಳಿಯ ಗಣಿಗಳು ಇವೆ; ಚಿನ್ನವನ್ನು ಶುದ್ಧೀಕರಿಸುವ ಸ್ಥಳಗಳೂ ಇವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು