1 ಪೂರ್ವಕಾಲ ವೃತ್ತಾಂತ 29:19 - ಪರಿಶುದ್ದ ಬೈಬಲ್19 ನನ್ನ ಮಗನಾದ ಸೊಲೊಮೋನನೂ ನಿನಗೆ ನಂಬಿಗಸ್ತನಾಗಿರುವಂತೆ ಸಹಾಯಮಾಡು. ನಿನ್ನ ಆಜ್ಞೆ, ಕಟ್ಟಳೆ ಮತ್ತು ನಿಯಮಗಳನ್ನು ಅನುಸರಿಸಲು ಸಹಾಯಮಾಡು. ನಿನ್ನ ಮಂದಿರಕ್ಕಾಗಿ ನಾನು ಇಷ್ಟೆಲ್ಲವನ್ನು ಸಿದ್ಧಮಾಡಿರುವೆನಲ್ಲಾ, ಅವನು ಅದನ್ನು ಕಟ್ಟಿ ಪೂರ್ಣಗೊಳಿಸಲು ಸಹಾಯಮಾಡು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ನನ್ನ ಮಗನಾದ ಸೊಲೊಮೋನನು ನಿನ್ನ ಆಜ್ಞಾವಿಧಿಗಳನ್ನು ಕೈಕೊಳ್ಳುತ್ತಿರುವಂತೆಯೂ, ನಾನು ಯಾವ ಮಂದಿರಕ್ಕೋಸ್ಕರ ಇಷ್ಟನ್ನೆಲ್ಲಾ ಸಿದ್ಧಪಡಿಸಿರುತ್ತೇನೋ ಆ ನಿನ್ನ ಮಂದಿರವನ್ನು ಅವನು ಯಥಾರ್ಥಮನಸ್ಸಿನಿಂದ ಕಟ್ಟಿಸಿ ತೀರಿಸುವಂತೆಯೂ ದಯಪಾಲಿಸು” ಎಂದು ಪ್ರಾರ್ಥಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ನನ್ನ ಮಗ ಸೊಲೊಮೋನನು ನಿಮ್ಮ ಆಜ್ಞಾವಿಧಿನಿಯಮಗಳನ್ನು ಅನುಸರಿಸುವಂತೆ ಮಾಡಿರಿ; ನಾನು ಯಾವ ಮಂದಿರ ನಿರ್ಮಾಣಕ್ಕಾಗಿ ಇದನ್ನೆಲ್ಲಾ ಸಂಗ್ರಹಿಸಿದ್ದೇನೋ ಆ ನಿಮ್ಮ ಮಂದಿರವನ್ನು ಇವನು ನಿಷ್ಠೆಯಿಂದ ಕಟ್ಟಿಸಿ ಮುಗಿಸುವಂತೆ ಅನುಗ್ರಹಿಸಿರಿ.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ನನ್ನ ಮಗನಾದ ಸೊಲೊಮೋನನು ನಿನ್ನ ಆಜ್ಞಾನಿಯಮವಿಧಿಗಳನ್ನು ಕೈಕೊಳ್ಳುತ್ತಿರುವಂತೆಯೂ ನಾನು ಯಾವ ಮಂದಿರಕ್ಕೋಸ್ಕರ ಇಷ್ಟನ್ನೆಲ್ಲಾ ಸಿದ್ಧಪಡಿಸಿರುತ್ತೇನೋ ಆ ನಿನ್ನ ಮಂದಿರವನ್ನು ಅವನು ಯಥಾರ್ಥಮನಸ್ಸಿನಿಂದ ಕಟ್ಟಿಸಿ ತೀರಿಸುವಂತೆಯೂ ದಯಪಾಲಿಸು ಎಂಬದೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಇದಲ್ಲದೆ ನಿಮ್ಮ ಆಜ್ಞೆಗಳನ್ನೂ, ನಿಮ್ಮ ಸಾಕ್ಷಿಗಳನ್ನೂ, ನಿಮ್ಮ ಕಟ್ಟಳೆಗಳನ್ನೂ ಕೈಗೊಳ್ಳಲೂ, ಸಮಸ್ತವನ್ನು ಮಾಡಲೂ ನಾನು ಯಾವುದಕ್ಕೋಸ್ಕರ ಸಿದ್ಧ ಮಾಡಿದೆನೋ, ಆ ಮಹಾ ಕಟ್ಟಡವನ್ನು ಕಟ್ಟಿಸಲೂ, ನನ್ನ ಮಗನಾದ ಸೊಲೊಮೋನನಿಗೆ ಪೂರ್ಣ ಹೃದಯವನ್ನು ಕೊಡಿರಿ,” ಎಂದನು. ಅಧ್ಯಾಯವನ್ನು ನೋಡಿ |