Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 28:1 - ಪರಿಶುದ್ದ ಬೈಬಲ್‌

1 ದಾವೀದನು ತನ್ನ ರಾಜ್ಯದಲ್ಲಿದ್ದ ಎಲ್ಲಾ ನಾಯಕರನ್ನು ಅಂದರೆ ಕುಲಪ್ರಧಾನರನ್ನು, ಪ್ರಧಾನಸೇನಾಧಿಪತಿಗಳನ್ನು, ಮಹಾಸೇನಾಧಿಪತಿಗಳನ್ನು ಮತ್ತು ಸೇನಾಧಿಪತಿಗಳನ್ನು, ರಾಜನಿಗೂ ಅವನ ಗಂಡುಮಕ್ಕಳಿಗೂ ಸೇರಿದ ಆಸ್ತಿಯನ್ನು ಮತ್ತು ಪಶುಗಳನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿಗಳನ್ನು; ರಾಜನ ಪ್ರಮುಖ ಅಧಿಕಾರಿಗಳನ್ನು; ಬಲಿಷ್ಠ ಯುದ್ಧವೀರರನ್ನು ಮತ್ತು ಧೈರ್ಯವಂತರಾದ ಸೈನಿಕರನ್ನು ಜೆರುಸಲೇಮಿಗೆ ಕರೆಸಿ ಸಭೆಸೇರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ದಾವೀದನು ಇಸ್ರಾಯೇಲರ ಎಲ್ಲಾ ಗೋತ್ರಗಳ ಅಧಿಪತಿಗಳನ್ನು, ಅರಸನ ಸೇವೆಮಾಡುತ್ತಿರುವ ವರ್ಗನಾಯಕರು, ಸಹಸ್ರಾಧಿಪತಿಗಳು, ಶತಾಧಿಪತಿಗಳು ಅರಸನ ದನಕುರಿ ಮೊದಲಾದ ಸಂಪತ್ತಿನ ಮೇಲ್ವಿಚಾರಕರು, ರಾಜಪುತ್ರ ಪಾಲಕರು, ಕಂಚುಕಿಗಳು, ಯುದ್ಧವೀರರು ಹಾಗೂ ಎಲ್ಲಾ ಪ್ರಧಾನರನ್ನು ಯೆರೂಸಲೇಮಿಗೆ ಕರೆಯಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ದಾವೀದನು ಇಸ್ರಯೇಲರ ಎಲ್ಲ ಪದಾಧಿಕಾರಿಗಳನ್ನು ಅಂದರೆ, ಕುಲ ಅಧ್ಯಕ್ಷರುಗಳು, ಅರಸನ ಸೇವೆಮಾಡುತ್ತಿದ್ದ ವರ್ಗನಾಯಕರು, ಸಹಸ್ರಾಧಿಪತಿಗಳು, ಶತಾಧಿಪತಿಗಳು, ಅರಸನ ದನಕುರಿ ಮೊದಲಾದ ಸೊತ್ತಿನ ಮೇಲ್ವಿಚಾರಕರು, ರಾಜಪುತ್ರ ಪಾಲಕರು, ಕಂಚುಕಿಗಳು, ರಣವೀರರು ಹೀಗೆ ಎಲ್ಲ ಅಧಿಕಾರಿಗಳನ್ನು ಜೆರುಸಲೇಮಿಗೆ ಕರೆಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ದಾವೀದನು ಇಸ್ರಾಯೇಲ್ಯರ ಎಲ್ಲಾ ಅಧಿಪತಿಗಳನ್ನು ಅಂದರೆ ಕುಲಾಧಿಪತಿಗಳು, ಅರಸನ ಸೇವೆಮಾಡುತ್ತಿರುವ ವರ್ಗನಾಯಕರು, ಸಹಸ್ರಾಧಿಪತಿಗಳು, ಶತಾಧಿಪತಿಗಳು, ಅರಸನ ದನಕುರಿ ಮೊದಲಾದ ಸೊತ್ತಿನ ಮೇಲ್ವಿಚಾರಕರು, ರಾಜಪುತ್ರ ಪಾಲಕರು, ಕಂಚುಕಿಗಳು, ರಣವೀರರು ಅಂತೂ ಎಲ್ಲಾ ಘನವಂತರನ್ನು ಯೆರೂಸಲೇವಿುಗೆ ಕರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ದಾವೀದನು ಇಸ್ರಾಯೇಲಿನ ಸಮಸ್ತ ಪ್ರಧಾನ ಗೋತ್ರಗಳ ಪ್ರಧಾನರನ್ನೂ, ವರ್ಗ ವರ್ಗವಾಗಿ ಅರಸನನ್ನು ಸೇವೆಮಾಡಿದ ಸಭೆಗಳ ಪ್ರಧಾನರನ್ನೂ, ಸಹಸ್ರಾಧಿಪತಿಗಳನ್ನೂ, ಶತಾಧಿಪತಿಗಳನ್ನೂ ಅರಸನ ಸ್ವತ್ತಿನ ಮೇಲೆಯೂ, ಅವನ ಪುತ್ರರ ಸ್ವತ್ತಿನ ಮೇಲೆಯೂ ಪಶುಗಳ ಮೇಲೆಯೂ ಇರುವ ಪ್ರಧಾನರನ್ನೂ, ಅಧಿಕಾರಿಗಳನ್ನೂ, ಪರಾಕ್ರಮಶಾಲಿಗಳನ್ನೂ, ಶೂರರನ್ನೂ ಯೆರೂಸಲೇಮಿನಲ್ಲಿ ಕೂಡಿ ಬರಲು ಕರೆಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 28:1
9 ತಿಳಿವುಗಳ ಹೋಲಿಕೆ  

ದಾವೀದನು ರಾಜ್ಯದ ಎಲ್ಲಾ ಮುಖಂಡರುಗಳನ್ನೂ ಯಾಜಕರನ್ನೂ ಲೇವಿಯರನ್ನೂ ಕರೆದನು.


ಯೆಹೋಶುವನು ಶೆಕೆಮಿನಲ್ಲಿ ಇಸ್ರೇಲಿನ ಎಲ್ಲ ಕುಲದವರನ್ನು, ಹಿರಿಯ ನಾಯಕರನ್ನು, ಕುಲದ ಪ್ರಧಾನರನ್ನು, ನ್ಯಾಯಾಧೀಶರನ್ನು, ಮುಖಂಡರನ್ನು ಮತ್ತು ಇಸ್ರೇಲಿನ ಅಧಿಕಾರಿಗಳನ್ನು ಒಟ್ಟಾಗಿ ಸೇರಿಸಿದನು. ಈ ಜನರು ದೇವರ ಸನ್ನಿಧಿಯಲ್ಲಿ ನಿಂತರು.


ಆಗ ಯೆಹೋಶುವನು ಎಲ್ಲಾ ಹಿರಿಯನಾಯಕರನ್ನು, ಕುಟುಂಬದ ಮುಖ್ಯಸ್ಥರನ್ನು, ನ್ಯಾಯಾಧೀಶರನ್ನು ಮತ್ತು ಇಸ್ರೇಲರ ಅಧಿಕಾರಿಗಳನ್ನು ಸಭೆ ಸೇರಿಸಿದನು. ಯೆಹೋಶುವನು ಅವರಿಗೆ, “ನಾನು ಬಹಳ ಮುದುಕನಾಗಿದ್ದೇನೆ.


ಬಳಿಕ ತನ್ನ ಮಗನಾದ ಸೊಲೊಮೋನನೊಂದಿಗೆ ಸಹಕರಿಸಲು ಇಸ್ರೇಲರ ಮುಖಂಡರಿಗೆ ಆಜ್ಞಾಪಿಸಿದನು.


ಆಗ ಇಸ್ರೇಲರ ಕುಲಪ್ರಧಾನರು, ಕುಟುಂಬಗಳ ನಾಯಕರು, ಪ್ರಧಾನಸೇನಾಧಿಪತಿಗಳು, ಸೇನಾಧಿಪತಿಗಳು, ರಾಜನ ಕೆಲಸಕ್ಕಾಗಿ ನೇಮಕಗೊಂಡಿದ್ದ ಅಧಿಕಾರಿಗಳು, ತಮ್ಮಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕೊಟ್ಟರು.


ಸೊಲೊಮೋನನು ಇಸ್ರೇಲರನ್ನೂ ಅಂದರೆ ನ್ಯಾಯಾಧಿಪತಿಗಳನ್ನೂ ಶತಾಧಿಪತಿಗಳನ್ನೂ ಸೇನಾಧಿಪತಿಗಳನ್ನೂ ಕುಲಪ್ರಧಾನರನ್ನೂ ಕರೆಯಿಸಿ ಅವರೊಂದಿಗೆ ಗಿಬ್ಯೋನಿನ ಉನ್ನತಸ್ಥಳಕ್ಕೆ ಹೋದನು. ದೇವದರ್ಶನಗುಡಾರವು ಅಲ್ಲಿತ್ತು. ಅರಣ್ಯದಲ್ಲಿ ಇಸ್ರೇಲರು ಪ್ರಯಾಣಿಸುತ್ತಿದ್ದಾಗ ಯೆಹೋವನ ಸೇವಕನಾದ ಮೋಶೆಯು ಗುಡಾರವನ್ನು ಮಾಡಿಸಿದ್ದನು.


ನೆರೆದುಬಂದಿದ್ದ ಇಸ್ರೇಲರೆಲ್ಲರಿಗೆ ದಾವೀದನು, “ದೇವರು ನನ್ನ ಮಗನಾದ ಸೊಲೊಮೋನನನ್ನು ಆರಿಸಿಕೊಂಡಿರುತ್ತಾನೆ. ಅವನು ಇನ್ನೂ ಎಳೆಪ್ರಾಯದವನಾಗಿರುವದರಿಂದ ಈ ಕಾರ್ಯವನ್ನು ಮಾಡಿಸಬೇಕಾದ ಜ್ಞಾನವು ಅವನಲ್ಲಿಲ್ಲ. ಆದರೆ ಕೆಲಸವು ಅತಿ ಘನವಾದದ್ದು. ಕಟ್ಟುವ ಆಲಯವು ಮನುಷ್ಯರಿಗಾಗಿಯಲ್ಲ. ದೇವರಾದ ಯೆಹೋವನಿಗಾಗಿಯಷ್ಟೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು