1 ಪೂರ್ವಕಾಲ ವೃತ್ತಾಂತ 24:30 - ಪರಿಶುದ್ದ ಬೈಬಲ್30 ಮೂಷೀಯ ಗಂಡುಮಕ್ಕಳಾದ ಮಹ್ಲೀ, ಏದೆರ್ ಮತ್ತು ಯೆರೀಮೋತ್. ಇವರೆಲ್ಲರು ಲೇವಿಕುಲದವರ ನಾಯಕರುಗಳು. ಇವರನ್ನು ಆಯಾ ಗೋತ್ರಗಳಿಗನುಸಾರವಾಗಿ ಪಟ್ಟಿ ಮಾಡಲಾಯಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201930 ಮೂಷೀಯನ ಮಕ್ಕಳು ಮಹ್ಲೀ, ಏದೆರ್ ಮತ್ತು ಯೆರೀಮೋತ್ ಎಂಬುವವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)30 ಮೂಷೀಯ ಮಕ್ಕಳು: ಮಹ್ಲೀ, ಏದೆರ್, ಯೆರೀಮೋತ್ ಎಂಬವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)30 ಮೂಷೀಯ ಮಕ್ಕಳು - ಮಹ್ಲೀ, ಏದೆರ್, ಯೆರೀಮೋತ್ ಎಂಬವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ30 ಮೂಷೀಯ ಪುತ್ರರು: ಮಹ್ಲೀ, ಏದೆರ್, ಯೆರೀಮೋತ್. ಇವರು ತಮ್ಮ ಕುಟುಂಬಗಳ ಪ್ರಕಾರ ಲೇವಿಯರ ಪುತ್ರರಾಗಿದ್ದರು. ಅಧ್ಯಾಯವನ್ನು ನೋಡಿ |
ಇವರನ್ನು ವಿಶಿಷ್ಟಕಾರ್ಯಗಳಿಗಾಗಿ ಚೀಟುಹಾಕಿ ಆರಿಸಲಾಯಿತು. ಆರೋನನ ಸಂತತಿಯವರೂ ಯಾಜಕರೂ ಆಗಿದ್ದ ತಮ್ಮ ಸಂಬಂಧಿಕರು ಮಾಡಿದಂತೆಯೇ ಚೀಟುಹಾಕಿ ವಿಶಿಷ್ಟ ಕಾರ್ಯಗಳಿಗಾಗಿ ಇವರನ್ನು ಆರಿಸಿಕೊಳ್ಳಲಾಯಿತು. ರಾಜನಾದ ದಾವೀದನ, ಚಾದೋಕನ, ಅಹೀಮೆಲೆಕನ ಮತ್ತು ಲೇವಿಕುಲದ ನಾಯಕರ ಎದುರಿಗೆ ಚೀಟುಹಾಕಿದರು. ಹಿರಿಯ ಅಥವಾ ಕಿರಿಯ ಕುಟುಂಬಗಳೆನ್ನದೆ ಎಲ್ಲರಿಗೂ ಸಮಾನವಾಗಿ ಕೆಲಸಗಳನ್ನು ಹಂಚಿದರು.