Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 24:3 - ಪರಿಶುದ್ದ ಬೈಬಲ್‌

3 ಎಲ್ಲಾಜಾರ್ ಮತ್ತು ಈತಾಮಾರ್ ಕುಲದ ಯಾಜಕರನ್ನು ದಾವೀದನು ಪ್ರತ್ಯೇಕಿಸಿ ಚಾದೋಕ್ ಮತ್ತು ಅಹೀಮೆಲೆಕ್ ಯಾಜಕರ ಸಹಾಯದಿಂದ ಎರಡು ವರ್ಗಗಳನ್ನಾಗಿ ಮಾಡಿದನು. ಚಾದೋಕನು ಎಲ್ಲಾಜಾರನ ವಂಶದವನಾಗಿದ್ದನು ಮತ್ತು ಅಹೀಮೆಲೆಕನು ಈತಾಮಾರನ ವಂಶದವನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ದಾವೀದನು ಎಲ್ಲಾಜಾರನ ಸಂತಾನದವನಾದ ಚಾದೋಕನೂ, ಈತಾಮಾರನ ಸಂತಾನದವನಾದ ಅಹೀಮೆಲೆಕನು ಯಾಜಕರನ್ನು ಸರದಿಯ ಮೇಲೆ ಸೇವೆಮಾಡತಕ್ಕ ವರ್ಗಗಳನ್ನಾಗಿ ವಿಭಾಗಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ದಾವೀದನೂ ಎಲ್ಲಾಜಾರನ ಸಂತಾನದವನಾದ ಚಾದೋಕನೂ ಈತಾಮಾರನ ಸಂತಾನದವನಾದ ಅಹೀಮೆಲೆಕನೂ ಯಾಜಕರನ್ನು ಸರದಿಯ ಮೇಲೆ ಸೇವೆ ಸಲ್ಲಿಸತಕ್ಕ ವರ್ಗಗಳನ್ನಾಗಿ ವಿಭಾಗಿಸಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ದಾವೀದನೂ ಎಲ್ಲಾಜಾರನ ಸಂತಾನದವನಾದ ಚಾದೋಕನೂ ಈತಾಮಾರನ ಸಂತಾನದವನಾದ ಅಹೀಮೆಲೆಕನೂ ಯಾಜಕರನ್ನು ಸರತಿಯ ಮೇಲೆ ಸೇವಿಸತಕ್ಕ ವರ್ಗಗಳನ್ನಾಗಿ ವಿಭಾಗಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಆದ್ದರಿಂದ ದಾವೀದನು ಎಲಿಯಾಜರನ ಮಕ್ಕಳಲ್ಲಿ ಚಾದೋಕನಿಗೂ, ಈತಾಮಾರನ ಮಕ್ಕಳಲ್ಲಿ ಅಹೀಮೆಲೆಕನಿಗೂ ಅವರ ಸೇವೆಯಲ್ಲಿರುವ ಪದ್ದತಿಗಳ ಪ್ರಕಾರ ವರ್ಗಗಳನ್ನು ವಿಭಾಗಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 24:3
15 ತಿಳಿವುಗಳ ಹೋಲಿಕೆ  

ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಹೀಮೆಲೆಕನೂ ಯಾಜಕರಾಗಿದ್ದರು. ಸೆರಾಯನು ಕಾರ್ಯದರ್ಶಿಯಾಗಿದ್ದನು.


ಇವರನ್ನು ವಿಶಿಷ್ಟಕಾರ್ಯಗಳಿಗಾಗಿ ಚೀಟುಹಾಕಿ ಆರಿಸಲಾಯಿತು. ಆರೋನನ ಸಂತತಿಯವರೂ ಯಾಜಕರೂ ಆಗಿದ್ದ ತಮ್ಮ ಸಂಬಂಧಿಕರು ಮಾಡಿದಂತೆಯೇ ಚೀಟುಹಾಕಿ ವಿಶಿಷ್ಟ ಕಾರ್ಯಗಳಿಗಾಗಿ ಇವರನ್ನು ಆರಿಸಿಕೊಳ್ಳಲಾಯಿತು. ರಾಜನಾದ ದಾವೀದನ, ಚಾದೋಕನ, ಅಹೀಮೆಲೆಕನ ಮತ್ತು ಲೇವಿಕುಲದ ನಾಯಕರ ಎದುರಿಗೆ ಚೀಟುಹಾಕಿದರು. ಹಿರಿಯ ಅಥವಾ ಕಿರಿಯ ಕುಟುಂಬಗಳೆನ್ನದೆ ಎಲ್ಲರಿಗೂ ಸಮಾನವಾಗಿ ಕೆಲಸಗಳನ್ನು ಹಂಚಿದರು.


ನೆತನೇಲನ ಮಗನಾದ ಶೆಮಾಯನು ಲೇಖಕನಾಗಿದ್ದನು. ಶೆಮಾಯನು ಲೇವಿ ಸಂತತಿಗೆ ಸೇರಿದವನಾಗಿದ್ದನು. ಇವನು ವಂಶಾವಳಿಯನ್ನು ಬರೆದಿಡುತ್ತಿದ್ದನು. ಅರಸನಾದ ದಾವೀದನ ಮತ್ತು ಯಾಜಕರಾದ ಚಾದೋಕನ, ಅಹೀಮೆಲೆಕನ ಮತ್ತು ಲೇವಿಯರ ನಾಯಕರ ಎದುರಿನಲ್ಲಿ ಸಂತತಿಯವರನ್ನು ಬರೆದನು. ಪ್ರತಿಸಲ ಚೀಟುಹಾಕಿ ಒಬ್ಬನನ್ನು ಒಂದು ಕೆಲಸಕ್ಕೆ ಆರಿಸಿದಾಗ ಅವನ ಹೆಸರನ್ನು ವಂಶಾವಳಿಯಲ್ಲಿ ಬರೆದನು. ಹೀಗೆ ಒಬ್ಬೊಬ್ಬನು ಯಾವಯಾವ ಕೆಲಸಗಳನ್ನು ಮಾಡಬೇಕೆಂದು ಎಲ್ಲರಿಗೂ ಗೊತ್ತುಪಡಿಸಿದರು. ಈ ರೀತಿಯಾಗಿ ಎಲ್ಲಾಜಾರ್ ಮತ್ತು ಈತಾಮಾರ್ ಕುಟುಂಬದವರಿಗೆ ಯಾಜಕೋದ್ಯೋಗವನ್ನು ಮಾಡುವಂತೆ ವರ್ಗಗಳಾಗಿ ಪ್ರತ್ಯೇಕಿಸಿ ಕೆಲಸಗಳನ್ನು ನೇಮಿಸಿದರು.


ಗಿಬ್ಯೋನಿನ ಉನ್ನತಸ್ಥಳದಲ್ಲಿದ್ದ ದೇವದರ್ಶನ ಗುಡಾರದಲ್ಲಿ ಸೇವೆಮಾಡಲು ದಾವೀದನು ಚಾದೋಕನನ್ನು ಮತ್ತು ಇತರ ಯಾಜಕರನ್ನು ನೇಮಿಸಿದನು.


ನಂತರ ದಾವೀದನು ಯಾಜಕರಾದ ಚಾದೋಕನನ್ನು ಮತ್ತು ಎಬ್ಯಾತಾರನನ್ನು ಮತ್ತು ಕೆಳಕಂಡ ಲೇವಿಯರನ್ನು ಸಹ ಕರೆಸಿದನು: ಊರೀಯೇಲ್, ಅಸಾಯ, ಯೋವೇಲ್, ಶೆಮಾಯ, ಎಲೀಯೇಲ್ ಮತ್ತು ಅಮ್ಮೀನಾದಾಬ್.


ಆಗ ಯೆಹೋಯಾದಾವನ ಮಗನಾದ ಬೆನಾಯನನ್ನು ಯೋವಾಬನ ಸ್ಥಾನದಲ್ಲಿ ಸೇನಾಧಿಪತಿಯನ್ನಾಗಿ ಸೊಲೊಮೋನನು ನೇಮಿಸಿದನು. ಎಬ್ಯಾತಾರನ ಸ್ಥಾನದಲ್ಲಿ ಚಾದೋಕನನ್ನು ನೂತನ ಪ್ರಧಾನಯಾಜಕನನ್ನಾಗಿ ನೇಮಿಸಿದನು.


ಶೆವನು ಕಾರ್ಯದರ್ಶಿಯಾಗಿದ್ದನು. ಚಾದೋಕ್ ಮತ್ತು ಎಬ್ಯಾತಾರರು ಯಾಜಕರಾಗಿದ್ದರು.


ನಂತರ ದಾವೀದನು ಹೊರಟುಹೋದನು. ಯೋನಾತಾನನು ಪಟ್ಟಣಕ್ಕೆ ಹಿಂದಿರುಗಿದನು. ದಾವೀದನು ನೋಬ್ ಎಂಬ ಪಟ್ಟಣದ ಯಾಜಕನಾದ ಅಹೀಮೆಲೆಕನನ್ನು ನೋಡಲು ಹೋದನು. ಅಹೀಮೆಲೆಕನು ದಾವೀದನನ್ನು ಸಂಧಿಸಲು ಹೊರಗೆ ಬಂದನು. ಅಹೀಮೆಲೆಕನು ಭಯದಿಂದ ನಡುಗುತ್ತಿದ್ದನು. ಅಹೀಮೆಲೆಕನು ದಾವೀದನಿಗೆ, “ನೀನು ಒಬ್ಬಂಟಿಗನಾಗಿ ಬಂದಿರುವುದೇಕೆ? ಬೇರೆ ಯಾವ ವ್ಯಕ್ತಿಯೂ ನಿನ್ನ ಜೊತೆಯಲ್ಲಿಲ್ಲದಿರುವುದೇಕೆ?” ಎಂದು ಕೇಳಿದನು.


ಈತಾಮಾರನ ಸಂತತಿಗಿಂತಲೂ ಎಲ್ಲಾಜಾರನ ಸಂತತಿಯವರಲ್ಲಿ ಹೆಚ್ಚು ಮಂದಿ ನಾಯಕರಿದ್ದರು. ಎಲ್ಲಾಜಾರನ ಸಂತತಿಯವರಲ್ಲಿ ಹದಿನಾರು ಮಂದಿ ಮತ್ತು ಈತಾಮಾರನ ಸಂತತಿಯವರಲ್ಲಿ ಎಂಟು ಮಂದಿ ನಾಯಕರಿದ್ದರು.


ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಬೀಮೆಲೆಕನೂ ಯಾಜಕರಾಗಿದ್ದರು. ಶವ್ಷನು ಲೇಖಕನಾಗಿದ್ದನು.


ದಾವೀದನು ಹೇಳಿದ ಪ್ರಕಾರ ಸೊಲೊಮೋನನು ಯಾಜಕರನ್ನು ಸರದಿಯ ಪ್ರಕಾರ ಸೇವೆಗೆ ನೇಮಿಸಿದನು. ಲೇವಿಯರನ್ನು ಆಯಾಕೆಲಸಕ್ಕೆ ನೇಮಿಸಿದನು. ಅವರು ಗಾಯನದಲ್ಲಿಯೂ ಯಾಜಕರ ಕೆಲಸಗಳಲ್ಲಿ ಸಹಾಯಕರಾಗಿಯೂ ದೇವಾಲಯದ ಕೆಲಸದಲ್ಲಿ ಪಾಲುತೆಗೆದುಕೊಂಡರು. ದ್ವಾರಪಾಲಕರ ಕೆಲಸಕ್ಕೆ ಸೊಲೊಮೋನನು ಜನರನ್ನು ಆರಿಸಿ ದ್ವಾರಗಳನ್ನು ಕಾಯುವುದಕ್ಕೆ ಅವರನ್ನು ನೇಮಿಸಿದನು. ದೇವಮನುಷ್ಯನಾದ ದಾವೀದನು ಹೀಗೆಯೇ ಮಾಡಬೇಕೆಂದು ತಿಳಿಸಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು