23 ಆಗ ಒರ್ನಾನನು, “ನೀನು ನನ್ನ ಒಡೆಯನೂ ಅರಸನೂ ಆಗಿರುವಿ. ಈ ಕಣವನ್ನು ನೀನೇ ತೆಗೆದುಕೋ. ನೀನು ಏನು ಬೇಕಾದರೂ ಮಾಡು. ಸರ್ವಾಂಗಹೋಮಕ್ಕೆ ಬೇಕಾದ ಕಟ್ಟಿಗೆಗಾಗಿ ನೇಗಿಲುಗಳನ್ನೂ ಧಾನ್ಯಾರ್ಪಣೆಗೆ ಬೇಕಾದ ಗೋಧಿಯನ್ನೂ ಪಶುವನ್ನೂ ನಾನು ಕೊಡುತ್ತೇನೆ” ಅಂದನು.
23 ಆಗ ಒರ್ನಾನನು ದಾವೀದನಿಗೆ, “ನನ್ನ ಒಡೆಯನಾದ ಅರಸನು ತನಗೆ ಇಷ್ಟವಾದದ್ದನ್ನು ತೆಗೆದುಕೊಂಡು ಯಜ್ಞಮಾಡೋಣವಾಗಲಿ. ಇಲ್ಲಿ ಯಜ್ಞಕ್ಕೆ ಹೋರಿಗಳೂ, ಸೌದೆಗೆ ಹಂತೀಕುಂಟೆಗಳೂ, ನೈವೇದ್ಯಕ್ಕೋಸ್ಕರ ಗೋದಿಯೂ ಇರುತ್ತವೆ. ಇವೆಲ್ಲವನ್ನೂ ಕೊಡುತ್ತೇನೆ” ಎಂದು ಹೇಳಿದನು.
23 ಆಗ ಒರ್ನಾನನು ದಾವೀದನಿಗೆ, “ನನ್ನ ಒಡೆಯರಾದ ಅರಸರು ತಮಗೆ ಇಷ್ಟವಾದದ್ದನ್ನು ತೆಗೆದುಕೊಂಡು ಬಲಿ ಅರ್ಪಿಸಬಹುದು. ಬಲಿದಾನಕ್ಕೆ ಇಲ್ಲಿ ಹೋರಿಗಳೂ ಸೌದೆಗೆ ಹಂತೀಕುಂಟೆಗಳೂ ನೈವೇದ್ಯಕ್ಕೆ ಗೋದಿಯೂ ಇರುತ್ತವೆ, ಇವೆಲ್ಲವನ್ನೂ ಕೊಡುತ್ತೇನೆ,” ಎಂದು ಹೇಳಿದನು.
23 ಆಗ ಒರ್ನಾನನು ದಾವೀದನಿಗೆ - ನನ್ನ ಒಡೆಯನಾದ ಅರಸನು ತನಗೆ ಇಷ್ಟವಾದದ್ದನ್ನು ತೆಗೆದುಕೊಂಡು ಯಜ್ಞಮಾಡೋಣವಾಗಲಿ. ಇಲ್ಲಿ ಯಜ್ಞಕ್ಕೆ ಹೋರಿಗಳೂ ಸೌದೆಗೆ ಹಂತೀಕುಂಟೆಗಳೂ ನೈವೇದ್ಯಕ್ಕೋಸ್ಕರ ಗೋದಿಯೂ ಇರುತ್ತವೆ; ಇವೆಲ್ಲವನ್ನೂ ಕೊಡುತ್ತೇನೆ ಎಂದು ಹೇಳಿದನು.
ಬೇತ್‌ಷೆಮೆಷಿನ ಯೆಹೋಶುವನಿಗೆ ಸೇರಿದ ಹೊಲಕ್ಕೆ ಆ ಬಂಡಿಯು ಬಂದಿತು. ಆ ಹೊಲದ ಒಂದು ದೊಡ್ಡ ಕಲ್ಲಿನ ಬಳಿ ಆ ಬಂಡಿಯು ನಿಂತಿತು. ಬೇತ್‌ಷೆಮೆಷಿನ ಜನರು ಬಂಡಿಯ ಕಟ್ಟಿಗೆಗಳನ್ನು ಒಡೆದು ಆ ಹಸುಗಳನ್ನು ಯೆಹೋವನಿಗೆ ಆಹುತಿಯಾಗಿ ಅರ್ಪಿಸಿದರು. ಕೆಲವು ಲೇವಿಯರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಇಳಿಸಿದರು. ಅಲ್ಲದೆ ಅವರು ಚಿನ್ನದ ಮಾದರಿಗಳಿದ್ದ ಚೀಲವನ್ನು ಇಳಿಸಿದರು. ಲೇವಿಯರು ಯೆಹೋವನ ಪೆಟ್ಟಿಗೆಯನ್ನು ಮತ್ತು ಆ ಚೀಲವನ್ನು ದೊಡ್ಡಕಲ್ಲಿನ ಮೇಲಿಟ್ಟರು. ಅದೇ ದಿನ ಬೇತ್‌ಷೆಮೆಷಿನ ಜನರು ಯೆಹೋವನಿಗೆ ಸರ್ವಾಂಗಹೋಮಗಳನ್ನು ಅರ್ಪಿಸಿದರು.
“ಆಮೇಲೆ ಯೆಹೋವನು ಹೇಳಿದಂತೆಯೇ ಆಯಿತು. ನನ್ನ ಚಿಕ್ಕಪ್ಪನ ಮಗನಾದ ಹನಮೇಲನು ಕಾರಾಗೃಹದ ಅಂಗಳದಲ್ಲಿದ್ದ ನನ್ನ ಬಳಿಗೆ ಬಂದು ಹೀಗೆ ಹೇಳಿದನು: ‘ಯೆರೆಮೀಯನೇ, ಬೆನ್ಯಾಮೀನ್ ಸೀಮೆಯ ಅನಾತೋತಿನಲ್ಲಿರುವ ನನ್ನ ಹೊಲವನ್ನು ಕೊಂಡುಕೊ. ಆ ಹೊಲವನ್ನು ನಿನಗಾಗಿ ಕೊಂಡುಕೊ. ಅದರ ಒಡೆಯನಾಗುವದಕ್ಕೆ ನಿನಗೆ ಹಕ್ಕಿದೆ.’” ಇದು ಯೆಹೋವನ ಸಂದೇಶವೆಂದು ನನಗೆ ತಿಳಿಯಿತು.
ನಂತರ ಎಲೀಷನು ಹೋಗಿ ತಾನು ಉಳುತ್ತಿದ್ದ ಎತ್ತುಗಳನ್ನು ವಧಿಸಿ, ಮಾಂಸವನ್ನು ನೊಗದಿಂದಲೇ ಬೇಯಿಸಿ ಜನರೆಲ್ಲರಿಗೆ ಔತಣವನ್ನು ಏರ್ಪಡಿಸಿದನು. ನಂತರ ಅವನು ಎಲೀಯನನ್ನು ಹಿಂಬಾಲಿಸಿ ಅವನ ಸಹಾಯಕನಾದನು.
ದಾವೀದನು ಒರ್ನಾನನಿಗೆ, “ನಿನ್ನ ಕಣವನ್ನು ನನಗೆ ಕ್ರಯಕ್ಕೆ ಮಾರಿಬಿಡು. ನಾನು ಇಲ್ಲಿ ಯಜ್ಞವೇದಿಕೆಯನ್ನು ಕಟ್ಟಿ ದೇವರನ್ನು ಆರಾಧಿಸಬೇಕು. ಆಗ ಈ ಭಯಂಕರ ವ್ಯಾಧಿಯು ನಿಂತುಹೋಗುವುದು” ಅಂದನು.
ಅದಕ್ಕೆ ದಾವೀದನು, “ನೋಡು, ನಾನು ಅವಕ್ಕೆಲ್ಲಾ ಪೂರ್ಣಕ್ರಯ ಕೊಡುತ್ತೇನೆ. ನಿನ್ನಿಂದ ನಾನು ಪುಕ್ಕಟೆಯಾಗಿ ತೆಗೆದುಕೊಂಡದ್ದನ್ನು ದೇವರಿಗೆ ಸಮರ್ಪಿಸುವುದಿಲ್ಲ. ಧರ್ಮಾರ್ಥವಾಗಿ ದೊರೆತದ್ದನ್ನು ದೇವರಿಗೆ ಕಾಣಿಕೆಯಾಗಿ ಕೊಡುವದಿಲ್ಲ” ಎಂದನು.