Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 2:42 - ಪರಿಶುದ್ದ ಬೈಬಲ್‌

42 ಕಾಲೇಬನು ಯೆರಹ್ಮೇಲನ ತಮ್ಮ. ಅವನಿಗೆ ಕೆಲವು ಗಂಡುಮಕ್ಕಳಿದ್ದರು. ಚೊಚ್ಚಲಮಗನು ಮೇಷ. ಮೇಷನು ಜೀಫ್ಯನ ತಂದೆ. ಮಾರೇಷನು ಸಹ ಕಾಲೇಬನ ಮಗ. ಮಾರೇಷನು ಹೆಬ್ರೋನನ ತಂದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

42 ಯೆರಹೇಲ್ಮನ ಸಹೋದರನಾದ ಕಾಲೇಬನ ಸಂತಾನದವರು: ಚೊಚ್ಚಲನು ಜೀಫ್ಯರ ಮೂಲಪುರುಷನಾದ ಮೇಷನು, ಎರಡನೆಯವನು ಮಾರೇಷನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

42 ಕಾಲೇಬನ ಚೊಚ್ಚಲು ಮಗನಿಗೆ ಅಂದರೆ ಯೆರಹ್ಮೇಲನ ಸಹೋದರನಿಗೆ ಮೇಷ ಎಂದು ಹೆಸರಿಡಲಾಗಿತ್ತು. ಮೇಷನು ಜೀಫ್ಯನ ತಂದೆ, ಇವನು ಮಾರೇಷನ ತಂದೆ, ಇವನು ಹೆಬ್ರೋನನ ತಂದೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

42 ಯೆರಹ್ಮೇಲನ ಸಹೋದರನಾದ ಕಾಲೇಬನ ಸಂತಾನದವರು - ಚೊಚ್ಚಲನೂ ಜೀಫ್ಯರ ಮೂಲಪುರುಷನೂ ಆದ ಮೇಷನು, ಮಾರೇಷ ವಂಶದವರು ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

42 ಯೆರಹ್ಮೇಲನ ಸಹೋದರನಾದ ಕಾಲೇಬನ ಪುತ್ರರು: ಅವನ ಚೊಚ್ಚಲ ಮಗನು ಮೇಷನು; ಇವನು ಜೀಫ್ಯನಿಗೆ ತಂದೆಯಾಗಿದ್ದನು. ಹೆಬ್ರೋನನ ತಂದೆಯಾದ ಮಾರೇಷನಿಗೆ ಮಕ್ಕಳು ಜನಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 2:42
20 ತಿಳಿವುಗಳ ಹೋಲಿಕೆ  

ದೇವರ ಚೊಚ್ಚಲು ಮಕ್ಕಳ ಸಭೆಗೆ ನೀವು ಬಂದಿರುವಿರಿ. ಅವರ ಹೆಸರುಗಳನ್ನು ಪರಲೋಕದಲ್ಲಿ ಬರೆಯಲಾಗಿದೆ. ನೀವು ಜನರಿಗೆಲ್ಲ ತೀರ್ಪು ನೀಡುವ ದೇವರ ಬಳಿಗೂ ಪರಿಪೂರ್ಣರನ್ನಾಗಿ ಮಾಡಲ್ಪಟ್ಟ ಒಳ್ಳೆಯ ಜನರ ಆತ್ಮಗಳ ಬಳಿಗೂ ಬಂದಿರುವಿರಿ.


ದೇವರು ತಾನು ಜಗತ್ತನ್ನು ಸೃಷ್ಟಿಸುವುದಕ್ಕಿಂತ ಮೊದಲೇ ಆ ಜನರನ್ನು ಬಲ್ಲವನಾಗಿದ್ದನು ಮತ್ತು ಆ ಜನರು ತನ್ನ ಮಗನ ಅನುರೂಪಿಗಳಾಗಿರಬೇಕೆಂದು ನಿರ್ಧರಿಸಿದನು. ಹೀಗಿರಲಾಗಿ, ಅನೇಕ ಸಹೋದರ ಸಹೋದರಿಯರಲ್ಲಿ ಯೇಸುವೇ ಹಿರಿಯವನಾಗಿದ್ದಾನೆ.


ಯೆಗೂವೇಲನು ಗಿಬ್ಯೋನನ ತಂದೆ. ಇವನು ಗಿಬ್ಯೋನಿನಲ್ಲಿ ವಾಸಿಸುತ್ತಿದ್ದನು. ಯೆಗೂವೇಲನ ಹೆಂಡತಿಯ ಹೆಸರು ಮಾಕ.


ಶೋಬಾಲನು ಕಿರ್ಯತ್ಯಾರೀಮನ್ನು ಕಟ್ಟಿದನು. ಇದು ಶೋಬಾಲನ ಸಂತತಿಯವರ ಪಟ್ಟಿ: ಹಾರೋಯೆ ಮತ್ತು ಮಾನಹತಿ ಊರಿನ ಅರ್ಧಜನರು;


ಈಕೆಯು ಶಾಫ್ ಮತ್ತು ಶೆವನ ತಾಯಿಯೂ ಆಗಿದ್ದಳು. ಶಾಫನ ಮಗ ಮದ್ಮನ್ನ. ಶೆವನು ಮಕ್‌ಬೇನ ಮತ್ತು ಗಿಬ್ಯನ ತಂದೆ. ಕಾಲೇಬನ ಮಗಳ ಹೆಸರು ಅಕ್ಸಾಹ.


ಶಮ್ಮೈಯನ ಮಗ ಮಾವೋನ್, ಇವನ ಮಗನು ಬೇತ್ಸೂರ್.


ಜೀಫಿನ ಜನರು ಸೌಲನನ್ನು ನೋಡುವುದಕ್ಕಾಗಿ ಗಿಬೆಯಕ್ಕೆ ಹೋದರು. ಅವರು ಸೌಲನಿಗೆ, “ದಾವೀದನು ಹಕೀಲಾ ಬೆಟ್ಟದ ಮೇಲೆ ಅಡಗಿಕೊಂಡಿದ್ದಾನೆ. ಈ ಬೆಟ್ಟವು ಜೆಸಿಮೋನ್ ಅರಣ್ಯಕ್ಕೆ ಎದುರಿನಲ್ಲಿದೆ” ಎಂದು ಹೇಳಿದರು.


ಜೀಫಿನ ಜನರು ಗಿಬೆಯದಲ್ಲಿದ್ದ ಸೌಲನ ಬಳಿಗೆ ಬಂದು, “ದಾವೀದನು ನಮ್ಮ ಪ್ರಾಂತ್ಯದಲ್ಲಿ ಅಡಗಿಕೊಂಡಿದ್ದಾನೆ. ಅವನು ಹೋರೆಷಿನ ಕೋಟೆಯಲ್ಲಿದ್ದಾನೆ. ಅವನು ಜೆಸಿಮೋನಿನ ದಕ್ಷಿಣಕ್ಕಿರುವ ಹಕೀಲಾ ಬೆಟ್ಟದ ಮೇಲಿದ್ದಾನೆ.


ಜೀಫ್, ಟೆಲೆಮ್, ಬೆಯಾಲೋತ್,


“ರೂಬೇನನೇ, ನೀನು ನನ್ನ ಚೊಚ್ಚಲು ಮಗ. ನೀನೇ ನನ್ನ ಮೊದಲನೆಯ ಮಗ. ನೀನು ನನ್ನ ಇತರ ಎಲ್ಲಾ ಗಂಡುಮಕ್ಕಳಿಗಿಂತ ಶಕ್ತಿಶಾಲಿಯೂ ಗೌರವಯುತನೂ ಆಗಿರುವೆ.


ಶಲ್ಲೂಮನು ಯೆಕಮ್ಯಾಹನ ತಂದೆ. ಯೆಕಮ್ಯಾಹನು ಎಲೀಷಾಮನ ತಂದೆ.


ಹೆಬ್ರೋನನ ಗಂಡುಮಕ್ಕಳು ಯಾರೆಂದರೆ: ಕೋರಹ, ತಪ್ಪೂಹ, ರೆಕೆಮ್ ಮತ್ತು ಶೆಮ.


ಕೆಯೀಲಾ, ಅಕ್ಜೀಬ್, ಮಾರೇಷಾ ಎಂಬ ಒಂಭತ್ತು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.


ಯೆಹೂದದ ಜನರಿಗೆ ಈ ಊರುಗಳನ್ನೂ ಕೊಡಲಾಯಿತು: ಮಾವೋನ್, ಕರ್ಮೆಲ್, ಜೀಫ್, ಯುಟ್ಟಾ,


ಹೆಚ್ರೋನನ ಗಂಡುಮಕ್ಕಳು ಯಾರೆಂದರೆ: ಯೆರಹ್ಮೇಲ್, ರಾಮ್ ಮತ್ತು ಕಾಲೇಬ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು