Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 2:24 - ಪರಿಶುದ್ದ ಬೈಬಲ್‌

24 (ಹೆಚ್ರೋನನ ಹೆಂಡತಿ ಅಬೀಯ.) ಹೆಚ್ರೋನನು ಕಾಲೇಬ್ ಎಫ್ರಾತದಲ್ಲಿ ಸತ್ತನು. ಅವನ ಮರಣದನಂತರ ಅಬೀಯಳು ಅವನಿಗೆ ಅಷ್ಹೂರ್ ಎಂಬ ಮಗನನ್ನು ಹೆತ್ತಳು. ಅಷ್ಹೂರನು ತೆಕೋವನ ತಂದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಹೆಚ್ರೋನನು ಕಾಲೇಬನ ಎಫ್ರಾತದಲ್ಲಿ ಮರಣಹೊಂದಿದ ನಂತರ ಅವನ ಹೆಂಡತಿಯಾದ ಅಬೀಯ ಎಂಬಾಕೆಯು ಅಷ್ಹೂರನನ್ನು ಹೆತ್ತಳು. ಇವನು ತೆಕೋವದವರ ಮೂಲಪುರುಷನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಹೆಚ್ರೋನನು ಮರಣ ಹೊಂದಿದ ನಂತರ ಅವನ ಮಗ ಕಾಲೇಬ್ ತನ್ನ ತಂದೆಯ ವಿಧವೆ ಎಫ್ರಾತಳನ್ನು ಮದುವೆಯಾದನು. ಅವರಿಗೆ ಅಷ್ಹೂರ ಎಂಬ ಮಗ ಜನಿಸಿದ. ತೆಕೋವ ಪಟ್ಟಣವನ್ನು ಕಟ್ಟಿದವನು ಇವನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಹೆಚ್ರೋನನು ಕಾಲೇಬ್ ಎಫ್ರಾತದಲ್ಲಿ ಸತ್ತನಂತರ ಅವನ ಹೆಂಡತಿಯಾದ ಅಬೀಯ ಎಂಬಾಕೆಯು ಅಷ್ಹೂರನನ್ನು ಹೆತ್ತಳು. ಇವನು ತೆಕೋವದವರ ಮೂಲ ಪುರುಷನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಹೆಚ್ರೋನನು ಕಾಲೇಬ್ ಎಫ್ರಾತದಲ್ಲಿ ಸತ್ತ ತರುವಾಯ ಹೆಚ್ರೋನನ ಹೆಂಡತಿಯಾದ ಅಬೀಯಳು ಅವನಿಗೆ ಅಷ್ಹೂರನನ್ನು ಹೆತ್ತಳು. ಇವನು ತೆಕೋವನ ತಂದೆಯು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 2:24
8 ತಿಳಿವುಗಳ ಹೋಲಿಕೆ  

ತೆಕೋವನ ತಂದೆಯಾದ ಅಷ್ಹೂರನಿಗೆ ಇಬ್ಬರು ಹೆಂಡತಿಯರು. ಇವರ ಹೆಸರು ಹೆಲಾಹ ಮತ್ತು ನಾರ.


ಇದು ಆಮೋಸನ ಸಂದೇಶ. ಇವನು ತೆಕೋವ ಎಂಬ ಪಟ್ಟಣದ ಕುರುಬರಲ್ಲೊಬ್ಬನು. ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಸಮಯದಲ್ಲಿ ಮತ್ತು ಅದೇ ಸಮಯದಲ್ಲಿ ಯೋವಾಷನ ಮಗನಾದ ಯಾರೊಬ್ಬಾಮನು ಇಸ್ರೇಲನ್ನು ಆಳುತ್ತಿರುವಾಗ ಆಮೋಸನಿಗೆ ದೈವದರ್ಶನಗಳುಂಟಾದವು. ಭೂಕಂಪವಾಗುವುದಕ್ಕಿಂತ ಎರಡು ವರ್ಷಗಳಿಗೆ ಮೊದಲು ಈ ದರ್ಶನಗಳಾದವು.


ಹೆಚ್ರೋನನ ಗಂಡುಮಕ್ಕಳು ಯಾರೆಂದರೆ: ಯೆರಹ್ಮೇಲ್, ರಾಮ್ ಮತ್ತು ಕಾಲೇಬ್.


ಆದ್ದರಿಂದ ಯೋವಾಬನು ಒಬ್ಬ ಬುದ್ಧಿವಂತ ಸ್ತ್ರೀಯನ್ನು ತೆಕೋವದಿಂದ ಕರೆತರಲು ಸಂದೇಶಕರನ್ನು ಅಲ್ಲಿಗೆ ಕಳುಹಿಸಿದನು. ಈ ಬುದ್ಧಿವಂತಳಾದ ಸ್ತ್ರೀಗೆ ಯೋವಾಬನು, “ದಯವಿಟ್ಟು ನಿನ್ನ ಚರ್ಮಕ್ಕಾಗಲಿ ತಲೆಕೂದಲಿಗಾಗಲಿ ಎಣ್ಣೆಯನ್ನು ಹಚ್ಚಿಕೊಳ್ಳಬೇಡ; ಚೆನ್ನಾಗಿರುವ ವಸ್ತ್ರಗಳನ್ನು ತೊಟ್ಟುಕೊಳ್ಳದೆ ಶೋಕಸೂಚಕ ವಸ್ತ್ರಗಳನ್ನು ಧರಿಸಿಕೋ. ಸತ್ತವನಿಗಾಗಿ ಅನೇಕ ದಿನಗಳಿಂದ ರೋಧಿಸುತ್ತಿರುವ ಸ್ತ್ರೀಯಂತೆ ನಟಿಸು.


ಕೆರೇತ್ಯರು ವಾಸಿಸುವ ನೆಗೆವ್ ಮೇಲೆ ನಾವು ಆಕ್ರಮಣ ಮಾಡಿದೆವು. ನಾವು ಯೆಹೂದ ದೇಶದ ಮೇಲೆ ಮತ್ತು ಕಾಲೇಬ್ಯರು ವಾಸಿಸುವ ನೆಗೆವ್ ಪ್ರಾಂತ್ಯಗಳ ಮೇಲೆ ಆಕ್ರಮಣ ಮಾಡಿದೆವು. ನಾವು ಚಿಕ್ಲಗನ್ನು ಸುಟ್ಟುಹಾಕಿದೆವು” ಎಂದು ಹೇಳಿದನು.


ಆದರೆ ಗೆಷೂರ್ ಮತ್ತು ಅರಾಮನು ಯಾಯೀರನ ಊರುಗಳನ್ನು ವಶಪಡಿಸಿಕೊಂಡರು. ಅದರಲ್ಲಿ ಕೆನತ್ ಮತ್ತು ಅದರ ಸುತ್ತಮುತ್ತಲಿದ್ದ ಕೆಲವು ಹಳ್ಳಿಗಳು ಸೇರಿದ್ದವು. ಒಟ್ಟು ಅರವತ್ತು ಸಣ್ಣ ಪಟ್ಟಣಗಳಿದ್ದವು. ಇವೆಲ್ಲವೂ ಗಿಲ್ಯಾದನ ತಂದೆಯಾದ ಮಾಕೀರನಿಗೆ ಸೇರಿದವುಗಳಾಗಿದ್ದವು.


ಹೆಚ್ರೋನನ ಚೊಚ್ಚಲಮಗನು ಯೆರಹ್ಮೇಲ. ಇವನ ಗಂಡುಮಕ್ಕಳು ಯಾರೆಂದರೆ: ರಾಮ್, ಬೂನ, ಓರೆನ್, ಓಚೆಮ್ ಮತ್ತು ಅಹೀಯ. ರಾಮನು ಯೆರಹ್ಮೇಲನ ಚೊಚ್ಚಲಮಗನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು