1 ಪೂರ್ವಕಾಲ ವೃತ್ತಾಂತ 16:36 - ಪರಿಶುದ್ದ ಬೈಬಲ್36 ಇಸ್ರೇಲರ ದೇವರಾದ ಯೆಹೋವನು ಸದಾಕಾಲವೂ ಘನಹೊಂದಲಿ; ನಿರಂತರವೂ ಕೊಂಡಾಡಲ್ಪಡಲಿ! ಇಸ್ರೇಲರೆಲ್ಲರೂ ಯೆಹೋವನನ್ನು ಸ್ತುತಿಸಿ “ಆಮೆನ್” ಅಂದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201936 ಇಸ್ರಾಯೇಲ್ ದೇವರಾದ ಯೆಹೋವನಿಗೆ ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ” ಎಂದು ಹಾಡಿದರು. ಅವರು ಹೀಗೆ ಹಾಡಿದಾಗ ಸರ್ವಜನರೂ ಆಮೆನ್ ಎಂದು ಯೆಹೋವನನ್ನು ಸ್ತುತಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)36 ಇಸ್ರಯೇಲಿನ ದೇವನಾದ ಸರ್ವೇಶಗೆ ಸ್ತೋತ್ರ I ಅನಾದಿಯಿಂದ ಯುಗಯುಗಾಂತರಕು ಸ್ತೋತ್ರ I ಜನರೆಲ್ಲರು ಹೇಳಲಿ ‘ಆಮೆನ್,’ ಸರ್ವೇಶ್ವರನಿಗೆ ಸ್ತೋತ್ರ II ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)36 ಇಸ್ರಾಯೇಲ್‍ದೇವರಾದ ಯೆಹೋವನಿಗೆ ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ ಎಂಬದೇ. ಅವರು ಹೀಗೆ ಹಾಡಿದ್ದಕ್ಕೆ ಸರ್ವಜನರೂ ಆಮೆನ್ ಎಂದು ಯೆಹೋವನನ್ನು ಸ್ತುತಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ36 ಇಸ್ರಾಯೇಲ್ ದೇವರಾದ ಯೆಹೋವ ದೇವರಿಗೆ ಯುಗಯುಗಕ್ಕೂ ಸ್ತುತಿಯುಂಟಾಗಲಿ, ಜನರೆಲ್ಲರೂ, “ಆಮೆನ್,” ಎಂದು ಹೇಳಲಿ. ನೀವು, “ಯೆಹೋವ ದೇವರನ್ನು ಸ್ತುತಿಸಿರಿ,” ಎಂದು ಹೇಳಿದರು. ಅಧ್ಯಾಯವನ್ನು ನೋಡಿ |
ಯೆರೆಮೀಯನು ಹನನ್ಯನಿಗೆ, “ಹಾಗೆಯೇ ಆಗಲಿ, ನೀನು ಹೇಳಿದಂತೆ ಯೆಹೋವನು ಮಾಡಲಿ. ನೀನು ಪ್ರವಾದಿಸಿದ ಸಂದೇಶವನ್ನು ಯೆಹೋವನು ನಿಜವಾಗುವಂತೆ ಮಾಡುವನೆಂದು ನಾನು ಆಶಿಸುತ್ತೇನೆ. ಯೆಹೋವನು ಬಾಬಿಲೋನಿನಿಂದ ತನ್ನ ಆಲಯದ ವಸ್ತುಗಳನ್ನು ಇಲ್ಲಿಗೆ ತರುವನೆಂದು ನಾನು ಆಶಿಸುವೆ. ತಮ್ಮ ಮನೆಗಳನ್ನು ಬಿಟ್ಟುಹೋಗಲು ಒತ್ತಾಯಿಸಲ್ಪಟ್ಟ ಜನರನ್ನು ಮತ್ತೆ ಯೆಹೋವನು ಇಲ್ಲಿಗೆ ಕರೆತರುವನೆಂದು ನಾನು ಆಶಿಸುವೆ.
ಆ ಬಳಿಕ, ಲೇವಿಯರಾದ ಯೇಷೂವ, ಕದ್ಮೀಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ ಮತ್ತು ಪೆತಹ್ಯ ಎಂಬವರು, “ಎದ್ದುನಿಂತುಕೊಂಡು ನಿಮ್ಮ ದೇವರಾದ ಯೆಹೋವನನ್ನು ಸ್ತುತಿಸಿರಿ” ಎಂದು ಹೇಳಿದರು. “ದೇವರು ಯಾವಾಗಲೂ ಇದ್ದಾತನಾಗಿದ್ದಾನೆ ಮತ್ತು ಯಾವಾಗಲೂ ಇರುವಾತನಾಗಿದ್ದಾನೆ. ನಿನ್ನ ಮಹಿಮಾಪೂರ್ಣವಾದ ಹೆಸರನ್ನು ಜನರು ಕೊಂಡಾಡಲಿ; ನಿನ್ನ ಹೆಸರು ಎಲ್ಲಾ ಸ್ತುತಿಕೀರ್ತನೆಗಳಿಗೆ ಮಿಗಿಲಾಗಿ ಎತ್ತಲ್ಪಡಲಿ.