1 ಪೂರ್ವಕಾಲ ವೃತ್ತಾಂತ 12:32 - ಪರಿಶುದ್ದ ಬೈಬಲ್32 ಇಸ್ಸಾಕಾರ್ ಕುಲದಿಂದ ಇನ್ನೂರು ಮಂದಿ ಜ್ಞಾನಿಗಳು ಬಂದಿದ್ದರು. ಇವರು ಸಮಯೋಚಿತ ಜ್ಞಾನವುಳ್ಳವರಾಗಿದ್ದರು ಮತ್ತು ಇಸ್ರೇಲರಿಗೆ ಯೋಗ್ಯವಾದದ್ದನ್ನು ತಿಳಿದವರಾಗಿದ್ದರು; ಇವರ ಸಂಬಂಧಿಕರೂ ಇವರೊಂದಿಗಿದ್ದರು ಮತ್ತು ಇವರ ಆಜ್ಞೆಗೆ ಒಳಪಟ್ಟವರೂ ಆಗಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201932 ಇಸ್ಸಾಕಾರ್ಯರಿಂದ ಇನ್ನೂರು ಮುಖ್ಯಸ್ಥರು. ಇವರು ಸಮಯೋಚಿತಜ್ಞಾನವುಳ್ಳವರಾಗಿ ಇಸ್ರಾಯೇಲರು ಮಾಡತಕ್ಕದ್ದನ್ನು ಅರಿತವರಾಗಿದ್ದರು. ಇವರ ಸಹೋದರರೆಲ್ಲರೂ ಇವರ ಆಜ್ಞೆಗೆ ಬದ್ಧರಾಗಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)32 ಇಸ್ಸಾಕಾರ ಗೋತ್ರದಿಂದ: 200 ಜನ ನಾಯಕರು ಹಾಗೂ ಅವರೊಂದಿಗಿದ್ದ ಸೈನಿಕರು; (ಇಸ್ರಯೇಲರು ಏನು ಮಾಡಬೇಕು, ಅದನ್ನು ಮಾಡಲು ಯಾವುದು ಉತ್ತಮ ಸಮಯ ಎಂಬುದನ್ನು ಈ ನಾಯಕರು ತಿಳಿದಿದ್ದರು); ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)32 ಇಸ್ಸಾಕಾರ್ಯರಿಂದ ಇನ್ನೂರು ಮಂದಿ ಮುಖ್ಯಸ್ಥರು; ಇವರು ಸಮಯೋಚಿತ ಜ್ಞಾನವುಳ್ಳವರಾಗಿ ಇಸ್ರಾಯೇಲ್ಯರು ಮಾಡತಕ್ಕದ್ದನ್ನು ಅರಿತವರು; ಇವರ ಸಹೋದರರೆಲ್ಲರೂ ಇವರ ಆಜ್ಞೆಗೆ ಒಳಗಾಗಿದ್ದರು; ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ32 ಇಸ್ಸಾಕಾರನ ಮಕ್ಕಳಲ್ಲಿ ಇಸ್ರಾಯೇಲರು ಮಾಡತಕ್ಕದ್ದು ಯಾವುದೆಂದು ತಿಳಿಯತಕ್ಕಂಥ ಕಾಲಗಳನ್ನು ಪರೀಕ್ಷಿಸಿ ತಿಳಿದವರು ಬಂದರು. ಅವರ ಯಜಮಾನರು 200 ಮಂದಿಯಾಗಿದ್ದರು. ಅವರ ಸಹೋದರರೆಲ್ಲರು ಇವರ ಆಜ್ಞಾಧೀನರಾಗಿದ್ದರು. ಅಧ್ಯಾಯವನ್ನು ನೋಡಿ |
ಕಾನೂನು ಮತ್ತು ದಂಡನೆಗಳ ಬಗ್ಗೆ ಪರಿಣಿತರಾಗಿದ್ದ ಮಂತ್ರಿಗಳ ಸಲಹೆ ಕೇಳುವುದು ರಾಜನ ವಾಡಿಕೆಯಾಗಿತ್ತು. ಅದೇ ಪ್ರಕಾರ ರಾಜನು ತನ್ನ ಸಲಹೆಗಾರರೊಂದಿಗೆ ಈ ವಿಷಯವನ್ನು ಆಲೋಚಿಸಿದನು. ಇವರು ರಾಜನಿಗೆ ನಿಕಟವರ್ತಿಗಳಾಗಿದ್ದರು. ಅವರು ಯಾರೆಂದರೆ ಕರ್ಷೆನಾ, ಶೇತಾರ್, ಅದ್ಮಾತಾ, ತರ್ಷಿಷ್, ಮೆರೆಸ್, ಮರ್ಸೆನಾ, ಮೆಮೂಕಾನ್ ಎಂಬ ಏಳು ಮಂದಿ ಮೇದ್ಯ, ಪಾರಸಿಯ ಪ್ರಮುಖ ಅಧಿಕಾರಿಗಳು.
ಬೆಳಿಗ್ಗೆ ಸೂರ್ಯೋದಯವನ್ನು ಗಮನಿಸುತ್ತೀರಿ. ಆಕಾಶವು ಕಪ್ಪಾಗಿದ್ದರೆ ಅಥವಾ ಕೆಂಪಾಗಿದ್ದರೆ, ಈ ದಿನ ಮಳೆ ಬರುತ್ತದೆ ಎಂದು ಹೇಳುತ್ತೀರಿ. ಇವುಗಳು ಹವಾಮಾನದ ಗುರುತುಗಳಾಗಿವೆ. ನೀವು ಈ ಗುರುತುಗಳನ್ನು ಕಂಡು ಅವುಗಳ ಅರ್ಥವನ್ನು ತಿಳಿದುಕೊಳ್ಳುತ್ತೀರಿ. ಅದೇ ರೀತಿಯಲ್ಲಿ ಈಗ ನೀವು ನೋಡುತ್ತಿರುವ ಇಂದಿನ ಸಂಗತಿಗಳು ಸಹ ಗುರುತುಗಳಾಗಿವೆ. ಆದರೆ ನಿಮಗೆ ಈ ಗುರುತುಗಳ ಅರ್ಥವು ಗೊತ್ತಿಲ್ಲ.