Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 12:29 - ಪರಿಶುದ್ದ ಬೈಬಲ್‌

29 ಬೆನ್ಯಾಮೀನ್ ಕುಲದಿಂದ ಮೂರು ಸಾವಿರ ಮಂದಿ ಇದ್ದರು. ಇವರೆಲ್ಲಾ ಸೌಲನ ಸಂಬಂಧಿಕರು. ಇವರಲ್ಲಿ ಬಹು ಮಂದಿ ಸೌಲನು ಜೀವಿಸಿರುವಾಗ ಅವನೊಂದಿಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಸೌಲನ ಸಂಬಂಧಿಕರಾದ ಬೆನ್ಯಾಮೀನ್ಯರಲ್ಲಿ ಮೂರು ಸಾವಿರ ಸೈನಿಕರು ಬಂದರು. ಬೆನ್ಯಾಮೀನ್ಯರಲ್ಲಿ ಹೆಚ್ಚಿನ ಭಾಗದವರು ಸೌಲನ ಮನೆಯವರೊಂದಿಗೆ ಸೇರಿಕೊಂಡಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಸೌಲನ ಸಂಬಂಧಿಕರಾದ ಬೆನ್ಯಾಮೀನ್ ಗೋತ್ರದಿಂದ: 3,000 ಸೈನಿಕರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಸೌಲನ ಸಂಬಂಧಿಕರಾದ ಬೆನ್ಯಾಮೀನ್ಯರಲ್ಲಿ ಮೂರು ಸಾವಿರ ಮಂದಿ; ಆವರೆಗೆ ಬೆನ್ಯಾಮೀನ್ಯರಲ್ಲಿ ಹೆಚ್ಚಿನ ಭಾಗದವರು ಸೌಲನ ಮನೆಯವರೊಂದಿಗೆ ಹೊಂದಿಕೊಂಡಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಸೌಲನ ಸಹೋದರರಾಗಿರುವ ಬೆನ್ಯಾಮೀನನ ಮಕ್ಕಳಲ್ಲಿ 3,000 ಮಂದಿ. ಇಂದಿನವರೆಗೂ ಅವರಲ್ಲಿ ಅನೇಕರು ಸೌಲನ ಮನೆಯ ವಿಚಾರಣೆಯನ್ನು ಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 12:29
7 ತಿಳಿವುಗಳ ಹೋಲಿಕೆ  

ಇವರು ತಮ್ಮ ಎಡಗೈಯಿಂದಲೂ ಬಲಗೈಯಿಂದಲೂ ಬಿಲ್ಲುಗಳಿಂದ ಬಾಣಗಳನ್ನೂ ಕವಣೆಗಳಿಂದ ಕಲ್ಲುಗಳನ್ನೂ ಗುರಿಯಿಟ್ಟು ಹೊಡೆಯಬಲ್ಲವರಾಗಿದ್ದರು. ಇವರೆಲ್ಲರೂ ಬೆನ್ಯಾಮೀನನ ಕುಲದವನಾದ ಸೌಲನ ಕುಟುಂಬದವರು. ಅವರ ಹೆಸರುಗಳು ಇಂತಿವೆ:


ಆದ್ದರಿಂದ ಲಾಬಾನನು ತನ್ನ ಜನರನ್ನು ಕರೆದುಕೊಂಡು ಯಾಕೋಬನನ್ನು ಬೆನ್ನಟ್ಟಿದನು. ಏಳು ದಿನಗಳಾದ ಮೇಲೆ ಲಾಬಾನನು ಯಾಕೋಬನನ್ನು ಬೆಟ್ಟದ ಸೀಮೆಯಾದ ಗಿಲ್ಯಾದಿನಲ್ಲಿ ಕಂಡನು.


ಅಬ್ನೇರನು ಹೆಬ್ರೋನಿನಲ್ಲಿ ದಾವೀದನಿಗೆ ಈ ಮಾತುಗಳನ್ನು ಹೇಳಿದನು. ಬೆನ್ಯಾಮೀನ್ ವಂಶದವರಿಗೂ ಅವನು ಈ ಮಾತುಗಳನ್ನು ಹೇಳಿದನು. ಅಬ್ನೇರನ ಮಾತುಗಳು ಬೆನ್ಯಾಮೀನ್ ವಂಶದವರಿಗೆ ಮತ್ತು ಇಸ್ರೇಲಿನ ಜನರಿಗೆಲ್ಲರಿಗೂ ಒಳ್ಳೆಯ ಮಾತುಗಳೆಂದು ಕಂಡುಬಂದವು.


ಎಫ್ರಾಯೀಮ್ ಕುಲದಿಂದ ಇಪ್ಪತ್ತು ಸಾವಿರದ ಎಂಟನೂರು ಮಂದಿ ಇದ್ದರು. ಇವರೆಲ್ಲರೂ ಧೈರ್ಯಶಾಲಿ ಸೈನಿಕರು ಮತ್ತು ತಮ್ಮ ಕುಲದವರಿಗೆ ನಾಯಕರಾಗಿದ್ದರು.


ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಹೀಮೆಲೆಕನೂ ಯಾಜಕರಾಗಿದ್ದರು. ಸೆರಾಯನು ಕಾರ್ಯದರ್ಶಿಯಾಗಿದ್ದನು.


ಲೇವಿಯರಲ್ಲಿ ಕೆಮುವೇಲನ ಮಗನಾದ ಹಷಬ್ಯ. ಆರೋನ್ಯರಲ್ಲಿ ಚಾದೋಕ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು