Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 12:21 - ಪರಿಶುದ್ದ ಬೈಬಲ್‌

21 ದಾವೀದನು ದುಷ್ಟ ಜನರ ವಿರುದ್ಧವಾಗಿ ಮಾಡಿದ ಯುದ್ಧದಲ್ಲಿ ಅವರು ಸಹಾಯಮಾಡಿದರು. ಈ ದುಷ್ಟ ಜನರು ದೇಶದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಾ ದರೋಡೆ ಮಾಡುತ್ತಿದ್ದರು. ಮನಸ್ಸೆಕುಲದಿಂದ ಸೇರಿದ ಜನರೆಲ್ಲಾ ಧೈರ್ಯಶಾಲಿಗಳಾಗಿದ್ದರು. ಅವರು ದಾವೀದನ ಸೈನ್ಯದಲ್ಲಿ ಅಧಿಕಾರಿಗಳಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಯುದ್ಧವೀರರೂ, ಸೇನಾಧಿಪತಿಗಳೂ ಆದ ಇವರೆಲ್ಲರೂ ಸುಲಿಗೆ ಗುಂಪುಗಳಿಗೆ ವಿರೋಧವಾಗಿ ದಾವೀದನಿಗೆ ಸಹಾಯಮಾಡುವವರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಇವರು ಪ್ರಖ್ಯಾತ ಯುದ್ಧವೀರರಾಗಿದ್ದು ದಾವೀದನ ಸೇನಾಪಡೆಗಳ ಮುಖ್ಯಸ್ಥರಾಗಿ ಸೇವೆಸಲ್ಲಿಸಿದರು. ಅನಂತರ ಇಸ್ರಯೇಲಿನ ಸೇನೆಯಲ್ಲಿಯೂ ಮುಖ್ಯಸ್ಥರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ರಣವೀರರೂ ಸೇನಾಧಿಪತಿಗಳೂ ಆದ ಇವರೆಲ್ಲರೂ ಸುಲಿಗೆಗುಂಪುಗಳಿಗೆ ವಿರೋಧವಾಗಿ ದಾವೀದನಿಗೆ ಸಹಾಯಮಾಡುವವರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಇವರು ಗುಂಪಿಗೆ ವಿರೋಧವಾಗಿ ದಾವೀದನಿಗೆ ಸಹಾಯಕರಾಗಿದ್ದರು; ಅವರೆಲ್ಲರೂ ಬಲವುಳ್ಳ ಪರಾಕ್ರಮಶಾಲಿಗಳಾಗಿಯೂ ದಂಡಿನ ಪ್ರಧಾನರಾಗಿಯೂ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 12:21
5 ತಿಳಿವುಗಳ ಹೋಲಿಕೆ  

ದಾವೀದನು ಚಿಕ್ಲಗಿನಲ್ಲಿ ವಾಸವಾಗಿದ್ದಾಗ ಅವನೊಂದಿಗೆ ಸೇರಿದ ಮನಸ್ಸೆಕುಲದವರು ಯಾರೆಂದರೆ: ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹೂ ಮತ್ತು ಚಿಲ್ಲತೈ. ಇವರೆಲ್ಲರೂ ಮನಸ್ಸೆಕುಲದ ಮುಖ್ಯಾಧಿಕಾರಿಗಳಾಗಿದ್ದರು.


ದಾವೀದನ ಸೈನ್ಯದಲ್ಲಿ ಪರಾಕ್ರಮಿಗಳಿದ್ದರು. ಈ ಪರಾಕ್ರಮಿಗಳು ದಾವೀದನ ರಾಜ್ಯದಲ್ಲಿ ದಾವೀದನೊಂದಿಗೆ ಮಹಾಬಲಿಷ್ಠರಾದರು. ಅವರು ಮತ್ತು ಎಲ್ಲಾ ಇಸ್ರೇಲರು ದಾವೀದನಿಗೆ ಬೆಂಬಲ ನೀಡಿ ಅವನನ್ನು ರಾಜನನ್ನಾಗಿ ಮಾಡಿದರು. ಇದು ಯೆಹೋವನ ವಾಗ್ದಾನದ ಪ್ರಕಾರವೇ ನಡೆಯಿತು.


ಮನಸ್ಸೆಯ ಅರ್ಧಕುಲದ ಅಧಿಪತಿಗಳು ಯಾರೆಂದರೆ: ಏಫೆರ್, ಇಷ್ಷೀ, ಎಲೀಯೇಲ್, ಅಜ್ರೀಯೇಲ್, ಯೆರೆಮೀಯ, ಹೋದವ್ಯ ಮತ್ತು ಯೆಹ್ತೀಯೇಲ್, ಇವರೆಲ್ಲಾ ಬಲಾಢ್ಯರೂ ಧೈರ್ಯಶಾಲಿಗಳೂ ಆದ ವೀರರಾಗಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು