Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 12:2 - ಪರಿಶುದ್ದ ಬೈಬಲ್‌

2 ಇವರು ತಮ್ಮ ಎಡಗೈಯಿಂದಲೂ ಬಲಗೈಯಿಂದಲೂ ಬಿಲ್ಲುಗಳಿಂದ ಬಾಣಗಳನ್ನೂ ಕವಣೆಗಳಿಂದ ಕಲ್ಲುಗಳನ್ನೂ ಗುರಿಯಿಟ್ಟು ಹೊಡೆಯಬಲ್ಲವರಾಗಿದ್ದರು. ಇವರೆಲ್ಲರೂ ಬೆನ್ಯಾಮೀನನ ಕುಲದವನಾದ ಸೌಲನ ಕುಟುಂಬದವರು. ಅವರ ಹೆಸರುಗಳು ಇಂತಿವೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಬಿಲ್ಲುಗಾರರೂ, ಎಡಗೈ ಬಲಗೈಗಳಿಂದ ಕಲ್ಲುಗಳನ್ನೂ ಮತ್ತು ಬಾಣಗಳನ್ನೂ ಎಸೆಯಬಲ್ಲವರೂ ಆಗಿದ್ದು ಯುದ್ಧದಲ್ಲಿ ಸಹಾಯಮಾಡುವುದಕ್ಕಾಗಿ ಅವನ ಬಳಿಗೆ ಬಂದ ಯುದ್ಧವೀರರ ಪಟ್ಟಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಸೌಲನೂ ಬೆನ್ಯಾಮೀನ್ ಗೋತ್ರಕ್ಕೆ ಸೇರಿದವನೇ. ದಾವೀದನನ್ನು ಹಿಂಬಾಲಿಸಿದವರು ಎಡಗೈಯಿಂದಾಗಲೀ ಬಲಗೈಯಿಂದಾಗಲೀ ಬಾಣಗಳನ್ನೆಸೆಯುವವರೂ ಕವಣೆಗಳಲ್ಲಿ ಕಲ್ಲುಗಳನ್ನಿಟ್ಟು ಎಸೆಯಲು ಶಕ್ತರೂ ಆಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಬಿಲ್ಲುಗಾರರೂ ಎಡಬಲ ಕೈಗಳಿಂದ ಕಲ್ಲುಗಳನ್ನೂ ಬಾಣಗಳನ್ನೂ ಎಸೆಯಬಲ್ಲವರೂ ಆಗಿದ್ದು ಯುದ್ಧದಲ್ಲಿ ಸಹಾಯಮಾಡುವದಕ್ಕಾಗಿ ಅವನ ಬಳಿಗೆ ಬಂದ ರಣವೀರರ ಪಟ್ಟಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಎಡಬಲ ಕೈಗಳಿಂದ ಕಲ್ಲುಗಳನ್ನು ಎಸೆಯಲೂ, ಬಿಲ್ಲುಗಳಿಂದ ಬಾಣಗಳನ್ನು ಎಸೆಯಲೂ, ಇವರು ಬೆನ್ಯಾಮೀನನ ಗೋತ್ರದ ಸೌಲನ ಸಂಬಂಧಿಕರೂ ಆಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 12:2
7 ತಿಳಿವುಗಳ ಹೋಲಿಕೆ  

ಇದಲ್ಲದೆ ಎಡಚರಾಗಿದ್ದ ಏಳುನೂರು ಮಂದಿ ಸೈನಿಕರು ಸಹ ಅಲ್ಲಿದ್ದರು. ಅವರು ಸಹ ತರಬೇತಿ ಪಡೆದವರಾಗಿದ್ದರು. ಅವರಲ್ಲಿ ಪ್ರತಿಯೊಬ್ಬನೂ ಕೂದಲೆಳೆಯಷ್ಟೂ ಗುರಿತಪ್ಪದೆ ಕವಣೆಯನ್ನು ಹೊಡೆಯುವದರಲ್ಲಿ ನಿಪುಣನಾಗಿದ್ದನು.


ಜನರು ಯೆಹೋವನಿಗೆ ಮೊರೆಯಿಟ್ಟರು. ಇಸ್ರೇಲರನ್ನು ರಕ್ಷಿಸಲು ಯೆಹೋವನು ಒಬ್ಬ ಮನುಷ್ಯನನ್ನು ಕಳುಹಿಸಿದನು. ಆ ಮನುಷ್ಯನ ಹೆಸರು ಏಹೂದ. ಅವನು ಎಡಚನಾಗಿದ್ದನು. ಅವನು ಬೆನ್ಯಾಮೀನ್ ಕುಲದ ಗೇರ ಎಂಬವನ ಮಗನಾಗಿದ್ದನು. ಇಸ್ರೇಲರು ಮೋವಾಬ್ಯರ ಅರಸನಾದ ಎಗ್ಲೋನನಿಗೆ ಕಪ್ಪಕಾಣಿಕೆಯನ್ನು ಕೊಡಲು ಏಹೂದನನ್ನು ಕಳುಹಿಸಿದರು.


ಬೆನ್ಯಾಮೀನ್ ಕುಲದಿಂದ ಮೂರು ಸಾವಿರ ಮಂದಿ ಇದ್ದರು. ಇವರೆಲ್ಲಾ ಸೌಲನ ಸಂಬಂಧಿಕರು. ಇವರಲ್ಲಿ ಬಹು ಮಂದಿ ಸೌಲನು ಜೀವಿಸಿರುವಾಗ ಅವನೊಂದಿಗಿದ್ದರು.


ದಾವೀದನು ತನ್ನ ಚೀಲದಿಂದ ಒಂದು ಕಲ್ಲನ್ನು ಹೊರತೆಗೆದನು. ಅದನ್ನು ಅವನು ಕವಣೆಯಲ್ಲಿ ಸಿಕ್ಕಿಸಿ ಬೀಸಿ ಹೊಡೆದನು. ಕವಣೆಯಿಂದ ಅವನು ಬೀಸಿದ ಕಲ್ಲು ಗೊಲ್ಯಾತನ ಹಣೆಗೆ ಬಡಿಯಿತು. ಆ ಕಲ್ಲು ಅವನ ಹಣೆಯಲ್ಲಿ ಆಳವಾದ ಗಾಯವನ್ನು ಮಾಡಿತು. ಕೂಡಲೇ ಗೊಲ್ಯಾತನು ಬೋರಲಾಗಿ ನೆಲದ ಮೇಲೆ ಬಿದ್ದನು.


ಅವರ ನಾಯಕರು ಅಹೀಯೆಜೆರ್ ಮತ್ತು ಯೋವಾಷ್ (ಇವರಿಬ್ಬರೂ ಗಿಬೆಯದವನಾದ ಹಷ್ಷೆಮಾಹನ ಗಂಡುಮಕ್ಕಳು); ಅಜ್ಮಾವೆತನ ಗಂಡುಮಕ್ಕಳಾದ ಯೆಜೀಯೇಲ್ ಮತ್ತು ಪೆಲೆಟ; ಅನತೋತ್ ಊರಿನವರಾದ ಬೆರಾಕಾ ಮತ್ತು ಯೇಹು.


ಎಫ್ರಾಯೀಮ್ ಕುಲದವರು ಬಿಲ್ಲುಗಳಿಂದ ಸುಸಜ್ಜಿತರಾಗಿದ್ದರು. ಆದರೆ ಅವರು ಯುದ್ಧದಿಂದ ಓಡಿಹೋದರು.


ಊಲಾಮನ ಗಂಡುಮಕ್ಕಳೆಲ್ಲರೂ ರಣವೀರರು; ಬಿಲ್ಲುಬಾಣಗಳನ್ನು ಉಪಯೋಗಿಸುವುದರಲ್ಲಿ ನಿಪುಣರು. ಅವರಿಗೆ ಅನೇಕ ಗಂಡುಮಕ್ಕಳು ಮತ್ತು ಗಂಡುಮೊಮ್ಮಕ್ಕಳಿದ್ದರು. ಅವರಿಗೆ ಒಟ್ಟು ನೂರೈವತ್ತು ಮಂದಿ ಗಂಡುಮಕ್ಕಳು ಮತ್ತು ಗಂಡುಮೊಮ್ಮಕ್ಕಳು ಇದ್ದರು. ಇವರೆಲ್ಲಾ ಬೆನ್ಯಾಮೀನನ ಸಂತತಿಯವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು