Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 12:17 - ಪರಿಶುದ್ದ ಬೈಬಲ್‌

17 ಅವರನ್ನು ಎದುರುಗೊಳ್ಳಲು ದಾವೀದನು ಹೊರಬಂದು, “ನೀವು ಸಮಾಧಾನದಿಂದ ನನಗೆ ಸಹಾಯ ಮಾಡಲು ಬಂದಿದ್ದರೆ ನಿಮ್ಮನ್ನು ಸ್ವಾಗತಿಸುತ್ತೇನೆ. ಆದರೆ ನೀವು ನನ್ನ ಮೇಲೆ ಹೊಂಚುಹಾಕಲು ಬಂದಿರುವುದಾದರೆ ನಾನು ನಿರಪರಾಧಿಯಾಗಿರುವ ಕಾರಣ ನಮ್ಮ ಪೂರ್ವಿಕರ ದೇವರು ನಿಮ್ಮನ್ನು ಶಿಕ್ಷಿಸಲಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 “ನೀವು ಸ್ನೇಹಭಾವದಿಂದ ಸಹಾಯ ಮಾಡುವುದಕ್ಕಾಗಿ ನನ್ನ ಬಳಿಗೆ ಬಂದಿರುವುದಾದರೆ ನಿಮ್ಮೊಡನೆ ನನಗೆ ಐಕ್ಯಭಾವವಿರುವುದು. ನಿರಪರಾಧಿಯಾದ ನನ್ನನ್ನು ನನ್ನ ವಿರೋಧಿಗಳಿಗೆ ಒಪ್ಪಿಸುವ ಕುಯುಕ್ತಿಯಿಂದ ಬಂದಿರುವುದಾದರೆ ನಮ್ಮ ಪೂರ್ವಿಕರ ದೇವರು ನಿಮ್ಮನ್ನು ನೋಡಿ ದಂಡಿಸಲಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ದಾವೀದನು ಅವರನ್ನು ಎದುರುಗೊಂಡು “ಸ್ನೇಹಿತರಂತೆ ನನಗೆ ಸಹಾಯ ಮಾಡಲು ಬಂದಿದ್ದರೆ ನಿಮಗೆ ಇಲ್ಲಿ ಸ್ವಾಗತ. ನಮ್ಮೊಂದಿಗೆ ಸೇರಿಕೊಳ್ಳಿ, ನಾನು ನಿಮಗೆ ಯಾವ ತೊಂದರೆಯನ್ನು ಕೊಟ್ಟಿಲ್ಲ. ಆದರೆ ನೀವು ನನ್ನನ್ನು ನನ್ನ ವೈರಿಗಳಿಗೆ ಹಿಡಿದುಕೊಡಲು ಬಂದಿದ್ದರೆ ನಮ್ಮ ಪಿತೃಗಳ ದೇವರು ಅದನ್ನು ಬಲ್ಲವರಾಗಿದ್ದು ನಿಮ್ಮನ್ನು ದಂಡಿಸುವರು,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ನೀವು ಸ್ನೇಹಭಾವದಿಂದ ಸಹಾಯಮಾಡುವದಕ್ಕಾಗಿ ನನ್ನ ಬಳಿಗೆ ಬಂದಿರುವದಾದರೆ ನಿಮ್ಮೊಡನೆ ನನಗೆ ಐಕ್ಯಭಾವವಿರುವದು; ನಿರಪರಾಧಿಯಾದ ನನ್ನನ್ನು ನನ್ನ ವಿರೋಧಿಗಳಿಗೆ ಒಪ್ಪಿಸುವ ಕುಯುಕ್ತಿಯಿಂದ ಬಂದಿರುವದಾದರೆ ನಮ್ಮ ಪಿತೃಗಳ ದೇವರು ನಿಮ್ಮನ್ನು ನೋಡಿ ದಂಡಿಸಲಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಆಗ ದಾವೀದನು ಅವರನ್ನು ಎದುರುಗೊಳ್ಳಲು ಹೊರಟುಹೋಗಿ ಅವರಿಗೆ ಉತ್ತರವಾಗಿ, “ನನಗೆ ಸಹಾಯವಾಗಿ ನನ್ನ ಬಳಿಗೆ ನೀವು ಸಮಾಧಾನವಾಗಿ ಬಂದರೆ, ನನ್ನ ಹೃದಯವು ನಿಮ್ಮ ಸಂಗಡ ಒಂದಾಗಿರುವುದು. ಆದರೆ ದೋಷವು ನನ್ನ ಕೈಯಲ್ಲಿ ಇಲ್ಲದಿರುವಾಗ, ನೀವು ನನ್ನ ವೈರಿಗಳಿಗೆ ನನ್ನನ್ನು ಮೋಸದಿಂದ ಒಪ್ಪಿಸಿಕೊಡಲು ಬಂದರೆ, ನಮ್ಮ ಪಿತೃಗಳ ದೇವರು ನೋಡಿ ನ್ಯಾಯತೀರಿಸಲಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 12:17
24 ತಿಳಿವುಗಳ ಹೋಲಿಕೆ  

ಪ್ರಧಾನ ದೇವದೂತನಾದ ಮಿಕಾಯೇಲನೂ ಸಹ ಹೀಗೆ ಮಾಡಲಿಲ್ಲ. ಮೋಶೆಯ ದೇಹವು ಯಾರಿಗೆ ಸೇರಬೇಕೆಂಬುದರ ಬಗ್ಗೆ ಮಿಕಾಯೇಲನು ಸೈತಾನನ ಬಗ್ಗೆ ದೂಷಣೆ ಮಾಡಲು ಧೈರ್ಯಗೊಳ್ಳದೆ, “ಪ್ರಭುವು ನಿನ್ನನ್ನು ದಂಡಿಸುತ್ತಾನೆ” ಎಂದು ಹೇಳಿದನು.


ಜನರು ಕ್ರಿಸ್ತನನ್ನು ಬಯ್ದರೂ ಆತನು ಅವರನ್ನು ಬಯ್ಯಲಿಲ್ಲ. ಆತನು ಸಂಕಟವನ್ನು ಅನುಭವಿಸಿದರೂ ಜನರನ್ನು ಹೆದರಿಸಲಿಲ್ಲ. ಆತನು ತನ್ನ ಕಾರ್ಯವನ್ನು ದೇವರಿಗೆ ವಹಿಸಿದನು. ಸರಿಯಾದ ನ್ಯಾಯತೀರ್ಪು ನೀಡುವಾತನು ದೇವರೊಬ್ಬನೇ.


ಅದೇನೇ ಇರಲಿ, ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ಬಾಳಿರಿ. ಆಗ ನಾನು ನಿಮ್ಮ ಬಳಿಗೆ ಬಂದರೂ ಸರಿ, ನಿಮ್ಮಿಂದ ದೂರದಲ್ಲಿದ್ದರೂ ಸರಿ, ನಿಮ್ಮ ವಿಷಯದಲ್ಲಿ ಒಳ್ಳೆಯ ಸಂಗತಿಗಳನ್ನು ಕೇಳುತ್ತೇನೆ. ನೀವು ಒಂದೇ ಉದ್ದೇಶದಿಂದ ದೃಢವಾಗಿದ್ದೀರೆಂದೂ ಸುವಾರ್ತೆಯಿಂದ ಉಂಟಾದ ನಂಬಿಕೆಗೋಸ್ಕರ ಏಕಮನಸ್ಸಿನಿಂದ ಕೆಲಸ ಮಾಡುತ್ತಿದ್ದೀರೆಂದೂ ಕೇಳುತ್ತಲೇ ಇರುತ್ತೇನೆ.


ಸಹೋದರ ಸಹೋದರಿಯರೇ, ನಿಮಗೆ ವಂದನೆಗಳು. ಪರಿಪೂರ್ಣರಾಗಿರಲು ಪ್ರಯತ್ನಿಸಿ. ನಾನು ಕೇಳಿಕೊಂಡ ಕಾರ್ಯಗಳನ್ನು ಮಾಡಿರಿ. ಒಂದೇ ಮನಸ್ಸು ಉಳ್ಳವರಾಗಿದ್ದು ಸಮಾಧಾನದಿಂದ ಜೀವಿಸಿರಿ. ಆಗ ಪ್ರೀತಿಸ್ವರೂಪನೂ ಶಾಂತಿದಾಯಕನೂ ಆದ ದೇವರು ನಿಮ್ಮೊಂದಿಗೆ ಇರುವನು.


ಸಹೋದರ ಸಹೋದರಿಯರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ವಾದವಿವಾದವಿಲ್ಲದೆ ಭಿನ್ನಭೇದಗಳಿಲ್ಲದೆ ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕ್ಯಮತ್ಯದಿಂದ ಬಾಳಿರಿ.


ವಿಶ್ವಾಸಿಗಳ ಹೃದಯವೂ ಪ್ರಾಣವೂ ಒಂದೇ ಆಗಿತ್ತು. ಸಮುದಾಯದಲ್ಲಿದ್ದ ಯಾವನಾಗಲಿ ತನ್ನಲ್ಲಿರುವವುಗಳನ್ನು ತನ್ನದೆಂದು ಹೇಳುತ್ತಿರಲಿಲ್ಲ. ಬದಲಾಗಿ, ಅವರು ಪ್ರತಿಯೊಂದನ್ನು ಹಂಚಿಕೊಳ್ಳುತ್ತಿದ್ದರು.


ಆಗ ಯೆಹೋವನ ದೂತನು ಹೇಳಿದ್ದೇನೆಂದರೆ, “ಯೆಹೋವನು ನಿನ್ನನ್ನು ಖಂಡಿಸಲಿ ಮತ್ತು ಟೀಕೆ ಮಾಡಲಿ. ಯೆಹೋವನು ತನ್ನ ವಿಶೇಷ ನಗರವನ್ನಾಗಿ ಜೆರುಸಲೇಮನ್ನು ಆರಿಸಿಕೊಂಡಿದ್ದಾನೆ. ಆ ನಗರವನ್ನು ಆತನೇ ಕಾಪಾಡಿದನು. ಬೆಂಕಿಯಿಂದ ಎಳೆದುತೆಗೆದ ಕೊಳ್ಳಿಯಂತೆ ಆತನು ಅದನ್ನು ಕಾಪಾಡಿದನು.”


ಒಂದೇ ಜನಾಂಗವಾಗುವ ಬಯಕೆಯನ್ನು ನಾನು ಅವರಲ್ಲಿ ಉಂಟುಮಾಡುವೆನು. ಅವರು ತಮ್ಮ ಜೀವಮಾನವೆಲ್ಲಾ ನನ್ನನ್ನು ಆರಾಧಿಸಬೇಕೆಂಬ ಬಯಕೆಯನ್ನು ಹೊಂದಿರುವರು. ಹೌದು, ಅವರ ಬಯಕೆಯೂ ಅವರ ಮಕ್ಕಳ ಬಯಕೆಯೂ ಇದೇ ಆಗಿರುವುದು.


ಯೆಹೋವನೇ, ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು. ನಾನು ಜೀವಿಸುತ್ತಾ ನಿನ್ನ ಸತ್ಯತೆಗಳಿಗೆ ವಿಧೇಯನಾಗುವೆನು. ನಿನ್ನ ಹೆಸರನ್ನು ಆರಾಧಿಸಲು ನನಗೆ ಸಹಾಯಮಾಡು. ನನ್ನ ಜೀವನದಲ್ಲಿ ಅದೇ ಅತ್ಯಂತ ಮುಖ್ಯವಾದದ್ದು.


ಯೆಹೋವನೇ, ಎದ್ದೇಳು, ನಿನ್ನ ಕೋಪವನ್ನು ತೋರು! ನನ್ನ ವೈರಿಯು ಕೋಪಗೊಂಡಿದ್ದಾನೆ. ಅವನಿಗೆ ವಿರೋಧವಾಗಿ ಎದ್ದುನಿಂತು ಹೋರಾಡು. ನನ್ನ ದೇವರೇ, ಎದ್ದೇಳು, ನ್ಯಾಯಕ್ಕಾಗಿ ಒತ್ತಾಯಿಸು!


ಯೇಹುವು ಅಲ್ಲಿಂದ ಹೋದ ಮೇಲೆ, ರೇಕಾಬನ ಮಗನಾದ ಯೆಹೋನಾದಾಬನನ್ನು ಸಂಧಿಸಿದನು. ಯೆಹೋನಾದಾಬನು ಯೇಹುವನ್ನು ಸಂಧಿಸಲು ಬರುತ್ತಿದ್ದನು. ಯೇಹು ಯೆಹೋನಾದಾಬನನ್ನು ಅಭಿನಂದಿಸಿ ಅವನಿಗೆ, “ನಾನು ನಿನಗೆ ನಂಬಿಗಸ್ತನಾಗಿರುವಂತೆ ನೀನು ನನಗೆ ನಂಬಿಗಸ್ಥನಾದ ಸ್ನೇಹಿತನಾಗಿರುವಿಯಾ?” ಎಂದು ಕೇಳಿದನು. ಯೆಹೋನಾದಾಬನು, “ಹೌದು, ನಾನು ನಿನಗೆ ನಂಬಿಗಸ್ಥನಾದ ಸ್ನೇಹಿತನು” ಎಂದು ಉತ್ತರಿಸಿದನು. ಯೇಹು, “ನೀನು ನಂಬಿಗಸ್ಥನಾದರೆ, ನಿನ್ನ ಕೈಯನ್ನು ಕೊಡು” ಎಂದನು. ನಂತರ ಯೇಹು ಹೊರಬಂದು, ಯೆಹೋನಾದಾಬನನ್ನು ರಥದೊಳಕ್ಕೆ ಎಳೆದುಕೊಂಡನು.


ಯೋರಾಮನು ಯೇಹುವನ್ನು, “ಶುಭವಾರ್ತೆಯುಂಟೋ?” ಎಂದು ಕೇಳಿದನು. ಯೇಹುವು, “ನಿನ್ನ ತಾಯಿಯಾದ ಈಜೆಬೆಲಳು ಅನೇಕ ಅನೈತಿಕ ಮತ್ತು ಮಾಂತ್ರಿಕ ಕಾರ್ಯಗಳನ್ನು ಮಾಡುತ್ತಿರುವ ತನಕ ಶುಭವಿರುವುದಿಲ್ಲ” ಎಂದು ಉತ್ತರಿಸಿದನು.


ಆ ಸಮಯದಲ್ಲಿ ಹಗ್ಗೀತಳ ಮಗನಾದ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಳ ಹತ್ತಿರಕ್ಕೆ ಹೋದನು. ಬತ್ಷೆಬೆಳು, “ನೀನು ಸಮಾಧಾನದಿಂದ ಬಂದೆಯಾ?” ಎಂದು ಅವನನ್ನು ಕೇಳಿದಳು. ಅದೋನೀಯನು, “ಹೌದು, ಇದು ಸಮಾಧಾನದ ಭೇಟಿಯಾಗಿದೆ.


ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಅವನು ದಾವೀದನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು.


ದಾವೀದನು ಸೌಲನೊಂದಿಗೆ ಮಾತನಾಡಿದ ಬಳಿಕ ಯೋನಾತಾನನು ದಾವೀದನೊಂದಿಗೆ ಒಂದಾದನು. ಯೋನಾತಾನನು ತನ್ನನ್ನು ಪ್ರೀತಿಸುವಷ್ಟೇ ದಾವೀದನನ್ನು ಪ್ರೀತಿಸಲಾರಂಭಿಸಿದನು.


ಸಮುವೇಲನು ತನಗೆ ಯೆಹೋವನು ಹೇಳಿದಂತೆ ಮಾಡಿದನು. ಸಮುವೇಲನು ಬೆತ್ಲೆಹೇಮಿಗೆ ಹೋದನು. ಬೆತ್ಲೆಹೇಮಿನ ಹಿರಿಯರು ಭಯದಿಂದ ನಡುಗಿದರು. ಅವರು ಸಮುವೇಲನನ್ನು ಕಂಡು, “ನಿನ್ನ ಆಗಮನವು ಶುಭಕರವಾಗಿದೆಯೇ?” ಎಂದು ಕೇಳಿದರು.


ನಾವು ಈ ಒಪ್ಪಂದವನ್ನು ಮುರಿದುಹಾಕಿದರೆ, ನಮ್ಮಲ್ಲಿ ಅಪರಾಧಿಯಾದವನಿಗೆ ಅಬ್ರಹಾಮನ ದೇವರು, ನಾಹೋರನ ದೇವರು ಮತ್ತು ಅವರ ಪೂರ್ವಿಕರ ದೇವರು ನ್ಯಾಯತೀರಿಸಲಿ” ಎಂದು ಹೇಳಿದನು. ಅದೇ ರೀತಿಯಲ್ಲಿ ಯಾಕೋಬನು ತನ್ನ ತಂದೆಯಾದ ಇಸಾಕನು ಭಯಭಕ್ತಿಯಿಂದ ಸೇವೆಮಾಡುವ ದೇವರ ಮೇಲೆ ಆಣೆಯಿಟ್ಟು ಪ್ರಮಾಣಮಾಡಿದನು.


ಆದರೆ ನನ್ನ ಪೂರ್ವಿಕರ ದೇವರೂ ಅಬ್ರಹಾಮನ ದೇವರೂ ಇಸಾಕನು ಭಯಪಡುವ ದೇವರೂ ನನ್ನ ಸಂಗಡವಿದ್ದನು. ದೇವರು ನನ್ನ ಜೊತೆಯಲ್ಲಿ ಇಲ್ಲದಿದ್ದರೆ ನೀನು ನನ್ನನ್ನು ಬರಿಗೈಲಿ ಕಳುಹಿಸಿಬಿಡುತ್ತಿದ್ದೆ. ಆದರೆ ನನ್ನ ಕಷ್ಟವನ್ನೂ ನಾನು ಮಾಡಿದ ಕೆಲಸವನ್ನೂ ದೇವರು ನೋಡಿದನು. ನಿನ್ನೆಯ ರಾತ್ರಿ ನಾನು ತಪ್ಪಿತಸ್ಥನಲ್ಲವೆಂದು ದೇವರು ನಿನಗೆ ತೋರಿಸಿಕೊಟ್ಟಿದ್ದಾನೆ” ಎಂದು ಹೇಳಿದನು.


ಬೆನ್ಯಾಮೀನ್ ಮತ್ತು ಯೆಹೂದ ಕುಲದ ಇತರ ಜನರೂ ದಾವೀದನು ಕೋಟೆಯಲ್ಲಿ ದಾವೀದನೊಂದಿಗೆ ಸೇರಿಕೊಂಡರು.


ಮೂವತ್ತು ಮಂದಿ ಶೂರರ ನಾಯಕನಾದ ಅಮಾಸೈಯು ಆತ್ಮನಿಂದ ತುಂಬಿದವನಾಗಿ ಹೇಳಿದ್ದೇನೆಂದರೆ: “ದಾವೀದನೇ, ನಾವು ನಿನ್ನವರು. ಇಷಯನ ಮಗನೇ, ನಾವು ನಿನಗೆ ಸೇರಿದವರು; ನಿನಗೆ ಸಮಾಧಾನ ಕೋರುವವರು; ನಿನಗೆ ಸಹಾಯ ಮಾಡುವವರಿಗೆ ಸಮಾಧಾನ ಕೋರುವೆವು; ಯಾಕೆಂದರೆ ನಿನ್ನ ದೇವರು ನಿನಗೆ ಸಹಾಯಮಾಡುತ್ತಿದ್ದಾನೆ.” ದಾವೀದನು ಇವರನ್ನು ಸ್ವಾಗತಿಸಿ ತನ್ನ ಸೈನ್ಯಾಧಿಪತಿಗಳನ್ನಾಗಿ ಮಾಡಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು