1 ಪೂರ್ವಕಾಲ ವೃತ್ತಾಂತ 12:15 - ಪರಿಶುದ್ದ ಬೈಬಲ್15 ಜೋರ್ಡನ್ ನದಿಯು ದಡಮೀರಿ ಹರಿಯುತ್ತಿರುವಾಗ ಗಾದ್ ಕುಲದವರು ಅದನ್ನು ದಾಟಿ ಆಚೆಪ್ರದೇಶದಲ್ಲಿ ವಾಸವಾಗಿದ್ದ ಜನರನ್ನೆಲ್ಲಾ ಪೂರ್ವಕ್ಕೂ ಪಶ್ಚಿಮಕ್ಕೂ ಓಡಿಸಿ ಅವರ ಸ್ಥಳವನ್ನು ಆಕ್ರಮಿಸಿಕೊಂಡರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ಯೊರ್ದನ್ ನದಿಯು ಮೊದಲನೆಯ ತಿಂಗಳಿನಲ್ಲಿ ದಡ ತುಂಬಿ ಹರಿಯುತ್ತಿರುವಾಗ, ಇವರು ಅದನ್ನು ದಾಟಿ ನದಿಯ ತಗ್ಗಿನ ಪೂರ್ವ ಮತ್ತು ಪಶ್ಚಿಮ ಪ್ರದೇಶದಲ್ಲಿರವ ಎಲ್ಲರನ್ನೂ ಓಡಿಸಿಬಿಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ಜೋರ್ಡನ್ ನದಿಯು ಪ್ರಥಮ ಮಾಸದಲ್ಲಿ ದಡತುಂಬಿ ಹರಿಯುತ್ತ ಇದ್ದಾಗ ಅದನ್ನು ದಾಟಿ ನದಿಯ ತಗ್ಗಿನ ಪೂರ್ವಪಶ್ಚಿಮ ಪ್ರದೇಶದಲ್ಲಿದ್ದವರೆಲ್ಲರನ್ನು ಓಡಿಸಿಬಿಟ್ಟವರು ಇವರೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ಯೊರ್ದನ್ ನದಿಯು ಪ್ರಥಮ ಮಾಸದಲ್ಲಿ ದಡತುಂಬಿ ಹರಿಯುತ್ತಿರುವಾಗ ಅದನ್ನು ದಾಟಿ ನದಿಯ ತಗ್ಗಿನ ಪೂರ್ವ ಪಶ್ಚಿಮ ಪ್ರದೇಶಗಳವರೆಲ್ಲರನ್ನೂ ಓಡಿಸಿಬಿಟ್ಟವರು ಇವರೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಇವರು ಮೊದಲನೆಯ ತಿಂಗಳಲ್ಲಿ ಯೊರ್ದನ್ ಹೊಳೆ ದಡಮೀರಿ ಹರಿಯುತ್ತಿದ್ದಾಗ, ಅದನ್ನು ದಾಟಿ ಪೂರ್ವ ಕಡೆಯಲ್ಲಿಯೂ, ಪಶ್ಚಿಮ ಕಡೆಯಲ್ಲಿಯೂ ತಗ್ಗುಗಳಲ್ಲಿ ಇರುವವರೆಲ್ಲರನ್ನು ಓಡಿಸಿಬಿಟ್ಟರು. ಅಧ್ಯಾಯವನ್ನು ನೋಡಿ |
“ಜೋರ್ಡನ್ ನದಿಯ ಸಮೀಪದ ದಟ್ಟವಾದ ಕಾಡಿನಿಂದ ಫಕ್ಕನೆ ಒಂದು ಸಿಂಹ ಬರುವದು. ಅದು ಹೊಲಗಳಲ್ಲಿದ್ದ ಜನರ ದನಕುರಿಗಳ ಹಟ್ಟಿಗಳಿಗೆ ನುಗ್ಗುವುದು. ನಾನು ಆ ಸಿಂಹದಂತೆ ಇದ್ದೇನೆ. ನಾನು ಎದೋಮ್ ನಗರಕ್ಕೆ ಹೋಗಿ ಆ ಜನರನ್ನು ಹೆದರಿಸುವೆನು; ಅವರು ಓಡಿಹೋಗುವಂತೆ ಮಾಡುವೆನು. ಅವರ ತರುಣರಲ್ಲಿ ಯಾರೂ ನನ್ನನ್ನು ತಡೆಯಲಾರರು. ನನ್ನತೆ ಯಾರೂ ಇಲ್ಲ. ಯಾರೂ ನನ್ನನ್ನು ಪ್ರತಿಭಟಿಸುವದಿಲ್ಲ. ಅವರ ನಾಯಕರಲ್ಲಿ ಯಾರೂ ನನ್ನ ವಿರುದ್ಧ ನಿಲ್ಲುವದಿಲ್ಲ.”