Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 12:1 - ಪರಿಶುದ್ದ ಬೈಬಲ್‌

1 ದಾವೀದನು ಚಿಕ್ಲಗಿನಲ್ಲಿದ್ದಾಗ ಕೆಲವು ಪರಾಕ್ರಮಶಾಲಿಗಳು ಬಂದು ದಾವೀದನೊಂದಿಗೆ ಸೇರಿಕೊಂಡರು. ಕೀಷನ ಮಗನಾದ ಸೌಲನಿಂದ ತಪ್ಪಿಸಿಕೊಳ್ಳಲು ದಾವೀದನು ಚಿಕ್ಲಗಿನಲ್ಲಿ ಅಡಗಿಕೊಂಡಿದ್ದನು. ಇವರು ಯುದ್ಧದಲ್ಲಿ ದಾವೀದನಿಗೆ ನೆರವಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ದಾವೀದನು ಕೀಷನ ಮಗನಾದ ಸೌಲನಿಗೆ ಹೆದರಿ ಚಿಕ್ಲಗಿನಲ್ಲಿ ಅಡಗಿಕೊಂಡಿದ್ದಾಗ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ದಾವೀದನು ಅರಸ ಸೌಲನಿಂದ ತಪ್ಪಿಸಿಕೊಂಡು ಚಿಕ್ಲಗ್ ಎಂಬಲ್ಲಿಗೆ ಹೋಗಿ ವಾಸಿಸಿದ್ದನು. ಅಲ್ಲಿ ಬೆನ್ಯಾಮೀನ್ ಗೋತ್ರದ ಅನೇಕ ಅನುಭವಶಾಲಿಗಳೂ ನಂಬಿಗಸ್ಥರೂ ಆದ ಸೈನಿಕರು ಬಂದು ಅವನನ್ನು ಸೇರಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ದಾವೀದನು ಕೀಷನ ಮಗನಾದ ಸೌಲನಿಗೆ ಹೆದರಿ ಚಿಕ್ಲಗಿನಲ್ಲಿ ಅಡಗಿಕೊಂಡಿದ್ದಾಗ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಕೀಷನ ಮಗ ಸೌಲನ ನಿಮಿತ್ತ ದಾವೀದನು ಇನ್ನೂ ಬಚ್ಚಿಟ್ಟುಕೊಂಡಿರುವಾಗ, ಚಿಕ್ಲಗಿನಲ್ಲಿರುವ ದಾವೀದನ ಬಳಿಗೆ ಬಂದವರು ಇವರೇ. ಅವರು ಪರಾಕ್ರಮಶಾಲಿಗಳಲ್ಲಿ ಸೇರಿದವರೂ, ಯುದ್ಧಕ್ಕೆ ಸಹಾಯಕರೂ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 12:1
10 ತಿಳಿವುಗಳ ಹೋಲಿಕೆ  

“ದೇವರೇ, ನಾನು ಈ ನೀರನ್ನು ಕುಡಿಯಲಾರೆನು. ಯಾಕೆಂದರೆ ನನಗಾಗಿ ತಮ್ಮ ಪ್ರಾಣ ಕೊಡಲು ಹೆದರದೆ ನೀರನ್ನು ತಂದವರ ರಕ್ತವಿದು” ಎಂದು ದಾವೀದನು ಅರಿಕೆಮಾಡಿ ಆ ನೀರನ್ನು ಕುಡಿಯಲು ನಿರಾಕರಿಸಿದನು. ಈ ರೀತಿಯಾಗಿ ಅನೇಕ ಪರಾಕ್ರಮದ ಕಾರ್ಯಗಳನ್ನು ಈ ಮೂರು ಮಂದಿ ವೀರರು ಮಾಡಿದರು.


ದಾವೀದನ ಸೈನ್ಯದಲ್ಲಿ ಪರಾಕ್ರಮಿಗಳಿದ್ದರು. ಈ ಪರಾಕ್ರಮಿಗಳು ದಾವೀದನ ರಾಜ್ಯದಲ್ಲಿ ದಾವೀದನೊಂದಿಗೆ ಮಹಾಬಲಿಷ್ಠರಾದರು. ಅವರು ಮತ್ತು ಎಲ್ಲಾ ಇಸ್ರೇಲರು ದಾವೀದನಿಗೆ ಬೆಂಬಲ ನೀಡಿ ಅವನನ್ನು ರಾಜನನ್ನಾಗಿ ಮಾಡಿದರು. ಇದು ಯೆಹೋವನ ವಾಗ್ದಾನದ ಪ್ರಕಾರವೇ ನಡೆಯಿತು.


ನೇರನು ಕೀಷನ ತಂದೆ. ಕೀಷನು ಸೌಲನ ತಂದೆ. ಸೌಲನ ಗಂಡುಮಕ್ಕಳು ಯಾರೆಂದರೆ: ಯೋನಾತಾನ್, ಮಲ್ಕೀಷೂವ, ಅಬೀನಾದಾಬ್ ಮತ್ತು ಎಷ್ಬಾಳ್.


ನೇರನು ಕೀಷನ ತಂದೆ. ಕೀಷನು ಸೌಲನ ತಂದೆ. ಸೌಲನು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್ ಮತ್ತು ಎಷ್ಬಾಳರ ತಂದೆ.


ಆದರೆ ಒಮ್ಮೆ ಒಬ್ಬ ವ್ಯಕ್ತಿಯು ತಾನು ಶುಭ ಸುದ್ದಿಯನ್ನು ನನಗೆ ತರುತ್ತಿದ್ದೇನೆಂದು ಯೋಚಿಸಿದನು. ಅವನು, ‘ನೋಡು, ಸೌಲನು ಸತ್ತನು’ ಎಂದು ನನಗೆ ಹೇಳಿದನು. ಈ ಸುದ್ದಿಯನ್ನು ನನಗೆ ತಿಳಿಸಿದ್ದರಿಂದ ನಾನು ಅವನಿಗೆ ಕೊಡುಗೆಗಳನ್ನು ಕೊಡಬಹುದೆಂದು ಅವನು ಭಾವಿಸಿದನು. ಆದರೆ ನಾನು ಅವನನ್ನು ಚಿಕ್ಲಗಿನಲ್ಲಿ ಕೊಂದೆನು.


ದಾವೀದನು ಅಮಾಲೇಕ್ಯರನ್ನು ಸೋಲಿಸಿದ ಬಳಿಕ, ಚಿಕ್ಲಗಿಗೆ ಹಿಂದಿರುಗಿಬಂದು, ಅಲ್ಲಿ ಎರಡು ದಿವಸ ಇದ್ದನು. ಸೌಲನ ಮರಣಾನಂತರ ಇದು ಸಂಭವಿಸಿತು.


ದಾವೀದನು ತನ್ನ ಜನರನ್ನು ಮತ್ತು ಅವರ ಕುಟುಂಬಗಳನ್ನು ಸಹ ಕರೆತಂದನು. ಅವರೆಲ್ಲರೂ ಹೆಬ್ರೋನ್ ಮತ್ತು ಅದರ ಸಮೀಪದ ನಗರಗಳಲ್ಲಿ ನೆಲೆಸಿದರು.


ಎಲೀಯೇಲ್, ಓಬೇದ್, ಮೆಚೋಬಾಯನಾದ ಯಾಸೀಯೇಲ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು