1 ಪೂರ್ವಕಾಲ ವೃತ್ತಾಂತ 11:15 - ಪರಿಶುದ್ದ ಬೈಬಲ್15 ಒಂದು ಸಲ ದಾವೀದನು ಅದುಲ್ಲಾಮ್ ಗವಿಯೊಳಗಿದ್ದಾಗ, ರೆಫಾಯಿಮ್ ತಗ್ಗಿನಲ್ಲಿ ಫಿಲಿಷ್ಟಿಯರು ಪಾಳೆಯಮಾಡಿದ್ದರು. ಮೂವತ್ತು ಮಂದಿ ಪರಾಕ್ರಮಿಗಳಲ್ಲಿ ಈ ಮೂರು ಮಂದಿ ಗುಹೆಯಲ್ಲಿದ್ದ ದಾವೀದನೊಂದಿಗೆ ಸೇರಿಕೊಳ್ಳಲು ಹೊಟ್ಟೆಯ ಮೇಲೆ ತೆವಳಿಕೊಂಡೇ ಅವನ ಬಳಿಗೆ ಬಂದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ದಾವೀದನು ಅದುಲ್ಲಾಮ್ ಗಿರಿಯ ಗವಿಯಲ್ಲಿದ್ದಾಗ ಅವನ ಮೂವತ್ತು ಜನ ಪ್ರಸಿದ್ಧಶೂರರಲ್ಲಿ ಮೂವರು ಅವನ ಬಳಿಗೆ ಬಂದರು. ಫಿಲಿಷ್ಟಿಯರು ದಂಡೆತ್ತಿ ಬಂದು ರೆಫಾಯೀಮ್ ತಗ್ಗಿನಲ್ಲಿ ಪಾಳೆಯಮಾಡಿಕೊಂಡಿರುವುದನ್ನು ಕಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ಅದುಲ್ಲಾಮ್ ಗವಿಯ ಹತ್ತಿರ ದಾವೀದನು ವಾಸಿಸುತ್ತಿದ್ದಾಗ, ಮೂವತ್ತು ಪ್ರಮುಖ ರಣವೀರರಲ್ಲಿ ಮೂವರು ಒಂದು ದಿನ ಒಂದು ಬಂಡೆಯ ಬಳಿಗೆ ಹೋದರು. ಅಲ್ಲಿ ಫಿಲಿಷ್ಟಿಯರ ಸೈನ್ಯವು ರೆಫಾಯಿಮ್ ಕೊಳ್ಳದಲ್ಲಿ ಬೀಡುಬಿಟ್ಟದ್ದನ್ನು ಕಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ದಾವೀದನು ಅದುಲ್ಲಾಮ್‍ಗಿರಿಯ ಗವಿಯಲ್ಲಿದ್ದಾಗ ಅವನ ಮೂವತ್ತು ಮಂದಿ ಪ್ರಸಿದ್ಧ ಶೂರರಲ್ಲಿ ಮೂವರು ಅವನ ಬಳಿಗೆ ಬಂದರು. ಫಿಲಿಷ್ಟಿಯರು ದಂಡೆತ್ತಿ ಬಂದು ರೆಫಾಯಿಮ್ ತಗ್ಗಿನಲ್ಲಿ ಪಾಳೆಯ ಮಾಡಿಕೊಂಡಿದ್ದು ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಮೂವತ್ತು ಮಂದಿ ಪರಾಕ್ರಮಶಾಲಿಗಳ ಮುಖ್ಯಸ್ಥರಲ್ಲಿ ಮೂರು ಮಂದಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿಗೆ ಗುಡ್ಡಕ್ಕೆ ಬಂದರು. ಅದೇ ವೇಳೆಯಲ್ಲಿ ಫಿಲಿಷ್ಟಿಯರ ಸೈನ್ಯವು ರೆಫಾಯಿಮ್ ತಗ್ಗಿನಲ್ಲಿ ಪಾಳೆಯ ಮಾಡಿಕೊಂಡಿತ್ತು. ಅಧ್ಯಾಯವನ್ನು ನೋಡಿ |