Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 1:36 - ಪರಿಶುದ್ದ ಬೈಬಲ್‌

36 ಎಲೀಫಜನ ಗಂಡುಮಕ್ಕಳು ಯಾರೆಂದರೆ: ತೇಮಾನ್, ಓಮಾರ್, ಚೆಫೀ, ಗತಾಮ್ ಮತ್ತು ಕೆನಜ್. ಅವನಿಗೆ ತಿಮ್ನಳಲ್ಲಿ ಹುಟ್ಟಿದ ಅಮಾಲೇಕ್ ಎಂಬ ಒಬ್ಬ ಮಗನಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಎಲೀಫಜನ ಮಕ್ಕಳು: ತೇಮಾನ್, ಓಮಾರ್, ಜೆಫೀ, ಗತಾಮ್, ಕೆನಜ್; ತಿಮ್ನ ಮತ್ತು ಅಮಾಲೇಕ್ ಎಂಬವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ಎಲೀಫಜ್ ನ ಮಕ್ಕಳು ತೇಮಾನ್, ಓಮಾರ್, ಜೆಫೀ, ಗತಾಮ್, ಕೆನಜ್ ಹಾಗೂ ತಿಮ್ನ ಎಂಬುವಳಿಂದ ಜನಿಸಿದ ಅಮಾಲೇಕ್ ಎಂಬವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಎಲೀಫಜನ ಮಕ್ಕಳು - ತೇಮಾನ್, ಓಮಾರ್, ಚೆಫೀ, ಗತಾಮ್, ಕೆನಜ್, ತಿಮ್ನ, ಅಮಾಲೇಕ್ ಎಂಬವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಎಲೀಫಜನ ಮಕ್ಕಳು ತೇಮಾನ್, ಓಮಾರ್, ಚೆಫೀ, ಗತಾಮ್, ಕೆನಜ್; ತಿಮ್ನಾ ಅವಳಿಂದ ಜನಿಸಿದ ಅಮಾಲೇಕ್ ಎಂಬವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 1:36
9 ತಿಳಿವುಗಳ ಹೋಲಿಕೆ  

ತೇಮಾನಿನಿಂದ ಯೆಹೋವನು ಬರುತ್ತಿದ್ದಾನೆ. ಪರಿಶುದ್ಧನಾದವನು ಪಾರಾನ್ ಪರ್ವತದಿಂದ ಬರುತ್ತಿದ್ದಾನೆ. ಯೆಹೋವನ ಮಹಿಮೆಯು ಆಕಾಶಮಂಡಲವನ್ನು ಮುಚ್ಚುತ್ತದೆ. ಅವನ ಸ್ತೋತ್ರವು ಭೂಲೋಕವನ್ನು ತುಂಬುತ್ತದೆ.


ತೇಮಾನನೇ, ನಿನ್ನ ಯುದ್ಧವೀರರು ಭಯಪಡುವರು. ಏಸಾವಿನ ಪರ್ವತದಲ್ಲಿರುವ ಪ್ರತಿಯೊಬ್ಬನು ನಾಶವಾಗುವನು. ಎಷ್ಟೋ ಮಂದಿ ಹತರಾಗುವರು.


ಆದ್ದರಿಂದ ನಾನು ತೇಮಾನಿನಲ್ಲಿ ಬೆಂಕಿಯನ್ನು ಹಾಕುವೆನು. ಆ ಬೆಂಕಿಯು ಬೋಚ್ರದ ಉನ್ನತ ಗೋಪುರಗಳನ್ನು ನಾಶಮಾಡುವದು.”


ಎದೋಮ್ಯರಿಗೆ ಯೆಹೋವನು ಮಾಡಬೇಕೆಂದಿರುವುದನ್ನು ಕೇಳಿರಿ. ತೇಮಾನ್ಯರ ಬಗ್ಗೆ ಯೆಹೋವನು ಏನು ನಿರ್ಧರಿಸಿದ್ದಾನೆಂಬುದನ್ನು ಕೇಳಿರಿ. ಎದೋಮಿನ ಕುರಿಮರಿಗಳನ್ನು (ಜನರನ್ನು) ಶತ್ರು ಎಳೆದುಕೊಂಡು ಹೋಗುವನು. ಸಂಭವಿಸಿದ ಸಂಗತಿಯನ್ನು ನೋಡಿ ಎದೋಮಿನ ಹುಲ್ಲುಗಾವಲುಗಳು ಬೆದರುವವು.


ಈ ಸಂದೇಶ ಎದೋಮನ್ನು ಕುರಿತದ್ದು. ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ತೇಮಾನ್ ಪಟ್ಟಣನಿವಾಸಿಗಳಲ್ಲಿ ಈಗ ಬುದ್ಧಿ ಉಳಿದಿಲ್ಲವೇ? ಎದೋಮಿನ ವಿವೇಕಿಗಳು ಒಳ್ಳೆಯ ಸಲಹೆಗಳನ್ನು ಕೊಡಲು ಸಮರ್ಥರಾಗಿಲ್ಲವೇ? ಅವರು ತಮ್ಮ ಜ್ಞಾನವನ್ನು ಕಳೆದುಕೊಂಡರೇ?


ಏಸಾವನ ಗಂಡುಮಕ್ಕಳು ಯಾರೆಂದರೆ: ಏಲೀಫಜ್, ರೆಯೂವೇಲ್, ಯೆಯೂಷ್, ಯಳಾಮ್ ಮತ್ತು ಕೋರಹ.


ರೆಯೂವೇಲನ ಗಂಡುಮಕ್ಕಳು ಯಾರೆಂದರೆ: ನಹತ್, ಜೆರಹ, ಶಮ್ಮ ಮತ್ತು ಮಿಜ್ಜ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು