1 ಥೆಸಲೋನಿಕದವರಿಗೆ 3:1 - ಪರಿಶುದ್ದ ಬೈಬಲ್1 ನಾವು ನಿಮ್ಮ ಬಳಿಗೆ ಬರಲಾಗಲಿಲ್ಲ, ಆದರೆ ಇನ್ನೂ ಹೆಚ್ಚುಕಾಲ ಕಾಯಲು ಬಹಳ ಕಷ್ಟಕರವಾಗಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಆದುದರಿಂದ ನಾನು ಇನ್ನು ತಾಳಲಾರದೆ ಅಥೇನೆಯಲ್ಲಿ ಒಬ್ಬಂಟಿಗನಾಗಿಯೇ ಇರುವುದು ಒಳ್ಳೆಯದೆಂದು ಯೋಚಿಸಿ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ನಿಮ್ಮ ಅಗಲಿಕೆಯನ್ನು ಸಹಿಸಲಾಗದೆ ನಮ್ಮ ಸಹೋದರ ತಿಮೊಥೇಯನನ್ನು ನಿಮ್ಮ ಬಳಿಗೆ ಕಳುಹಿಸಿದೆವು. ನಾವು ಮಾತ್ರ ಅಥೆನ್ಸಿಯಲ್ಲಿ ಉಳಿಯುವುದೇ ಉಚಿತವೆಂದು ನಿರ್ಧರಿಸಿದೆವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಆದದರಿಂದ ಇನ್ನು ತಡೆಯಲಾರದೆ ನಾವು ಅಥೇನೆಯಲ್ಲಿ ಒಬ್ಬೊಂಟಿಗರಾಗಿಯೇ ಇರುವದು ಒಳ್ಳೇದೆಂದು ಯೋಚಿಸಿ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಆದ್ದರಿಂದ ನಿಮ್ಮ ಅಗಲಿಕೆಯನ್ನು ಸಹಿಸಲಾಗದೆ, ನಾವು ಅಥೇನೆಯಲ್ಲಿ ಒಬ್ಬಂಟಿಗರಾಗಿಯೇ ಇರುವುದು ಒಳ್ಳೆಯದೆಂದು ಯೋಚಿಸಿದೆವು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್1 ಆಕ್ರಿಕ್ ಅನಿ ಲೈ ಎಳ್ ಅಮ್ಕಾ ರಾಕುಕ್ ಕಸ್ಟ್ ಹೊವ್ಲಾ, ತೆಚೆಸಾಟ್ನಿ ಅಮಿ ಅಥೆನ್ಸ್ ಮನ್ತಲ್ಯಾ ಜಾಗ್ಯಾರ್ ರ್‍ಹಾವ್ಚೆ ಮನುನ್ ನಿರ್ದಾರ್ ಕರ್ಲಾಂವ್, ಅಧ್ಯಾಯವನ್ನು ನೋಡಿ |
ನಿಮ್ಮ ನಂಬಿಕೆಯ ಬಗ್ಗೆ ತಿಳಿದುಕೊಳ್ಳಬೇಕೆಂಬ ಕಾರಣದಿಂದಲೇ ನಾನು ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿದೆನು. ಇನ್ನೂ ಹೆಚ್ಚುಕಾಲ ಕಾಯಲು ಸಾಧ್ಯವಿಲ್ಲವೆನಿಸಿದ್ದರಿಂದಲೇ ನಾನು ಅವನನ್ನು ಕಳುಹಿಸಿದೆನು. ಜನರನ್ನು ಶೋಧನೆಗೆ ಒಳಪಡಿಸುವ ಸೈತಾನನು ನಿಮ್ಮನ್ನು ಈಗಾಗಲೇ ಶೋಧನೆಗಳಿಂದ ಸೋಲಿಸಿರಬಹುದೆಂಬ ಭಯ ನನಗಿತ್ತು. ಒಂದುವೇಳೆ, ಹಾಗೇನಾದರೂ ಆಗಿದ್ದರೆ ನಮ್ಮ ಪ್ರಯಾಸವೆಲ್ಲಾ ನಿರರ್ಥಕವಾಗುತ್ತಿತ್ತು.
ಒಮ್ಮೊಮ್ಮೆ ನನ್ನಷ್ಟಕ್ಕೆ ನಾನೇ ಹೇಳಿಕೊಳ್ಳುತ್ತೇನೆ, “ನಾನು ಯೆಹೋವನನ್ನೇ ಮರೆತುಬಿಡುತ್ತೇನೆ. ಆತನ ಹೆಸರಿನಲ್ಲಿ ಇನ್ನೇನೂ ಮಾತನಾಡುವುದಿಲ್ಲ” ಎಂದುಕೊಂಡರೆ ಆತನ ಸಂದೇಶವು ನನ್ನ ಅಂತರಾಳದಲ್ಲಿ ಉರಿಯುವ ಜ್ವಾಲೆಯಂತಾಗುತ್ತದೆ. ಅದು ಆಳಕ್ಕೆ ಇಳಿದು ನನ್ನ ಎಲುಬುಗಳನ್ನು ಸುಡುವಂತಾಗುತ್ತದೆ. ಯೆಹೋವನ ಸಂದೇಶವನ್ನು ನನ್ನ ಅಂತರಾಳದಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನ ಮಾಡಿ ನಾನು ದಣಿಯುತ್ತೇನೆ. ಕೊನೆಗೆ ಅದನ್ನು ನನ್ನೊಳಗೆ ಇಟ್ಟುಕೊಳ್ಳಲು ಅಸಾಧ್ಯವಾಗುತ್ತದೆ.