1 ಕೊರಿಂಥದವರಿಗೆ 3:4 - ಪರಿಶುದ್ದ ಬೈಬಲ್4 ನಿಮ್ಮಲ್ಲಿ ಒಬ್ಬನು, “ನಾನು ಪೌಲನನ್ನು ಹಿಂಬಾಲಿಸುತ್ತೇನೆ” ಎನ್ನುತ್ತಾನೆ. ಮತ್ತೊಬ್ಬನು “ನಾನು ಅಪೊಲ್ಲೋಸನನ್ನು ಹಿಂಬಾಲಿಸುತ್ತೇನೆ” ಎನ್ನುತ್ತಾನೆ. ನೀವು ಹೀಗೆ ವಾಗ್ವಾದ ಮಾಡುವಾಗ ಲೋಕದ ಜನರಂತೆಯೇ ವರ್ತಿಸುವವರಾಗಿದ್ದೀರಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಒಬ್ಬನು, “ನಾನು ಪೌಲನವನು” ಎಂದು, ಮತ್ತೊಬ್ಬನು, “ನಾನು ಅಪೊಲ್ಲೋಸನವನು” ಎಂದು ಹೇಳುತ್ತಿರುವಾಗ ನೀವು ಇನ್ನೂ ಕೇವಲ ಸಾಮಾನ್ಯ ಮನುಷ್ಯರೇ ಆಗಿದ್ದೀರಲ್ಲವೇ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಒಬ್ಬನು, ನಾನು ಪೌಲನ ಕಡೆಯವನು; ಇನ್ನೊಬ್ಬನು, ನಾನು ಅಪೊಲೋಸನ ಕಡೆಯವನು, ಎಂದು ನಿಮ್ಮೊಳಗೆ ಕಿತ್ತಾಡುವ ನೀವು ಕೇವಲ ನರಪ್ರಾಣಿಗಳಲ್ಲದೆ ಮತ್ತೇನು? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಒಬ್ಬನು - ನಾನು ಪೌಲನವನು ಎಂದು ಮತ್ತೊಬ್ಬನು - ನಾನು ಅಪೊಲ್ಲೋಸನವನು ಎಂದು ಹೇಳುತ್ತಿರುವಾಗ ನೀವು ಕೇವಲ ನರಪ್ರಾಣಿಗಳಾಗಿದ್ದೀರಲ್ಲವೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಒಬ್ಬನು, “ನಾನು ಪೌಲನವನು,” ಎಂದು ಮತ್ತೊಬ್ಬನು, “ನಾನು ಅಪೊಲ್ಲೋಸನವನು,” ಎಂದೂ ಹೇಳುತ್ತಿರುವಾಗ, ನೀವು ಕೇವಲ ಮಾನವರಂತೆ ಆಗಿದ್ದೀರಲ್ಲವೇ? ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್4 ತುಮ್ಚ್ಯಾತ್ಲೊ ಎಕ್ಲೊ ಮಿಯಾ ಪಾವ್ಲುಚೊ ಅನಿ ಎಕ್ಲೊ ಮಿಯಾ ಅಪೊಲ್ಲೊಚೊ ಮನ್ತ್ಯಾತ್ ಅಶೆ ರ್‍ಹಾತಾನಾ ತುಮಿ ಹ್ಯಾ ಜಗಾಚ್ಯಾ ಲೊಕಾ ಸಾರ್ಕೆ ಚಲುಲ್ಯಾಸಿ ಮನುನ್ ಹೊಲೆ ಕಾಯ್ ನಾ? ಅಧ್ಯಾಯವನ್ನು ನೋಡಿ |