1 ಕೊರಿಂಥದವರಿಗೆ 14:12 - ಪರಿಶುದ್ದ ಬೈಬಲ್12 ಇದು ನಿಮಗೂ ಅನ್ವಯಿಸುತ್ತದೆ. ನೀವು ಆತ್ಮಿಕ ವರಗಳನ್ನು ಬಹಳವಾಗಿ ಅಪೇಕ್ಷಿಸುತ್ತೀರಿ. ಆದ್ದರಿಂದ, ಸಭೆಯು ದೃಢವಾಗಿ ಬೆಳೆಯಲು ಸಹಾಯಕರವಾದ ವರಗಳನ್ನು ಹೊಂದಿಕೊಳ್ಳಲು ಹೆಚ್ಚಾಗಿ ಪ್ರಯತ್ನಿಸಿರಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಹಾಗೆಯೇ ನೀವು ಆತ್ಮೀಕವಾದ ವರಗಳಿಗಾಗಿ ಅತ್ಯಾಸಕ್ತಿಯುಳ್ಳವರಾಗಿರುವುದರಿಂದ ಸಭೆಗೆ ಹೆಚ್ಚಿನ ಅಭಿವೃದ್ಧಿ ಉಂಟಾಗುವ ಹಾಗೆ ತವಕಪಡಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಆದ್ದರಿಂದ ಪವಿತ್ರಾತ್ಮ ವರಗಳ ಮೇಲೆ ಆಸಕ್ತಿಯುಳ್ಳ ನೀವು, ಧರ್ಮಸಭೆಯನ್ನು ಅಭಿವೃದ್ಧಿಗೊಳಿಸಬಲ್ಲ ವರಗಳ ಮೇಲೆ ಆಸಕ್ತರಾಗಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಹಾಗೆಯೇ ನೀವೂ ಆತ್ಮಪ್ರೇರಿತವಾದ ನುಡಿಗಳನ್ನಾಡುವದಕ್ಕೆ ಅಪೇಕ್ಷಿಸುವವರಾಗಿರುವದರಿಂದ ಸಭೆಗೆ ಭಕ್ತಿವೃದ್ಧಿ ಉಂಟಾಗುವ ಹಾಗೆ ಅದಕ್ಕಿಂತಲೂ ಹೆಚ್ಚಾದದ್ದನ್ನು ಮಾಡುವದಕ್ಕೆ ಪ್ರಯತ್ನಿಸಿರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಅದರಂತೆಯೇ, ನೀವು ಸಹ ಆತ್ಮಿಕ ವರಗಳನ್ನು ಬಯಸುವುದರಿಂದ, ಸಭೆಗೆ ಭಕ್ತಿವೃದ್ಧಿ ಉಂಟುಮಾಡುವ ವರಗಳನ್ನೇ ಸಮೃದ್ಧವಾಗಿ ಪ್ರಯತ್ನಿಸಿರಿ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್12 ತಸೆಚ್ ತುಮಿಬಿ ಆತ್ಮಿಕ್ ವರಾ ಕಮ್ವುನ್ ಘೆವ್ಚೆ ಮನುನ್ ಹಾಸಿ. ತಸೆ ಮನುನ್ ದೆವಾಚ್ಯಾ ಲೊಕಾಂಚ್ಯಾ ವಾಡಾವಳಿಕ್ ಗರಜ್ ಪಡ್ತಲಿ ವರಾ ಜಾಸ್ತಿಚ್ಯಾ ಮಾಪಾನ್ ಜೊಡುನ್ ಘೆವ್ಕ್ ಕಸ್ರತ್ ಕರಾ. ಅಧ್ಯಾಯವನ್ನು ನೋಡಿ |
ವಿವಿಧ ಭಾಷೆಗಳಲ್ಲಿ ಮಾತಾಡುವ ವರವನ್ನು ನೀವೆಲ್ಲರೂ ಹೊಂದಿರಬೇಕೆಂದು ನನ್ನ ಅಪೇಕ್ಷೆಯಾಗಿದೆ. ಆದರೆ ನೀವು ಪ್ರವಾದಿಸಬೇಕೆಂದು ನಾನು ಇನ್ನೂ ಹೆಚ್ಚಾಗಿ ಅಪೇಕ್ಷಿಸುತ್ತೇನೆ. ಕೇವಲ ವಿವಿಧ ಭಾಷೆಗಳನ್ನು ಮಾತನಾಡುವವನಿಗಿಂತಲೂ ಪ್ರವಾದಿಸುವವನು ಹೆಚ್ಚು ಶ್ರೇಷ್ಠನಾಗಿದ್ದಾನೆ. ಆದರೆ ವಿವಿಧ ಭಾಷೆಗಳಲ್ಲಿ ಮಾತಾಡುವವನು ಆ ಭಾಷೆಗಳನ್ನು ಅನುವಾದಿಸಬಲ್ಲವನಾಗಿದ್ದರೆ, ಅವನು ಪ್ರವಾದಿಸುವವನಷ್ಟೇ ಶ್ರೇಷ್ಠನಾಗುತ್ತಾನೆ. ಆಗ ಅವನು ಹೇಳುವ ಸಂಗತಿಗಳ ಮೂಲಕ ಸಭೆಗೆ ಸಹಾಯವಾಗುವುದು.