1 ಕೊರಿಂಥದವರಿಗೆ 10:28 - ಪರಿಶುದ್ದ ಬೈಬಲ್28 ಆದರೆ ಒಬ್ಬನು ನಿಮಗೆ, “ಆ ಪದಾರ್ಥವು ವಿಗ್ರಹಗಳಿಗೆ ಅರ್ಪಿತವಾದದ್ದು” ಎಂದು ಹೇಳಿದರೆ, ನೀವು ಅದನ್ನು ತಿನ್ನಬೇಡಿ. ನಿಮಗೆ ಹೇಳಿದ ವ್ಯಕ್ತಿಯ ನಂಬಿಕೆಯನ್ನು ಹಾಳುಮಾಡಲು ನಿಮಗೆ ಇಷ್ಟವಿಲ್ಲದ್ದರಿಂದ ಮತ್ತು ಆ ಮಾಂಸವನ್ನು ತಿನ್ನುವುದು ತಪ್ಪೆಂದು ಜನರು ಭಾವಿಸಿಕೊಂಡಿರುವುದರಿಂದ ನೀವು ಅದನ್ನು ತಿನ್ನಬಾರದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201928 ಆದರೆ ಒಬ್ಬನು ನಿಮಗೆ “ಇದು ವಿಗ್ರಹಾಲಯದಲ್ಲಿ ಬಲಿಕೊಟ್ಟದ್ದು” ಎಂದು ಹೇಳಿದರೆ ಈ ಸಂಗತಿಯನ್ನು ತಿಳಿಸಿದವನ ನಿಮಿತ್ತವಾಗಿಯೂ ಮನಸ್ಸಾಕ್ಷಿಯ ನಿಮಿತ್ತವಾಗಿಯೂ ಅದನ್ನು ತಿನ್ನಬೇಡಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)28 ಆಗ ಯಾರಾದರೂ, “ಇದು ವಿಗ್ರಹಗಳಿಗೆ ಬಲಿಕೊಟ್ಟದ್ದು,” ಎಂದು ಹೇಳಿದರೆ, ಹಾಗೆ ತಿಳಿಸಿದವನ ಸಲುವಾಗಿ ಹಾಗೂ ಮನಸ್ಸಾಕ್ಷಿಯ ಸಲುವಾಗಿ ಅದನ್ನು ಊಟಮಾಡಬೇಡಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)28 ಆದರೆ ಒಬ್ಬನು ನಿಮಗೆ - ಇದು ವಿಗ್ರಹಾಲಯದಲ್ಲಿ ಬಲಿಕೊಟ್ಟದ್ದು ಎಂದು ಹೇಳಿದರೆ ಈ ಸಂಗತಿಯನ್ನು ತಿಳಿಸಿದವನ ನಿವಿುತ್ತವಾಗಿಯೂ ಮನಸ್ಸಿನಲ್ಲಿ ಸಂಶಯಕ್ಕೆ ಸ್ಥಳಕೊಡಬಾರದೆಂಬ ಕಾರಣದಿಂದಲೂ ತಿನ್ನಬೇಡಿರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ28 ಆದರೆ ಯಾರಾದರೂ ನಿಮಗೆ, “ಇದು ನೈವೇದ್ಯ ಮಾಡಿದ್ದು,” ಎಂದು ಹೇಳಿದರೆ, ತಿಳಿಸಿದ ವ್ಯಕ್ತಿಯ ನಿಮಿತ್ತವೂ ಆ ವ್ಯಕ್ತಿಯ ಮನಸ್ಸಾಕ್ಷಿಯ ನಿಮಿತ್ತವೂ ತಿನ್ನಬೇಡಿರಿ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್28 ಖರೆ ಹೆ ಖಾನ್ ಮುರ್ತಿಕ್ ಭೆಟ್ವಲ್ಲೆ ಮನುನ್ ಕೊನ್‍ಬಿ ತುಕಾ ಸಾಂಗ್ಲ್ಯಾರ್ ತೆ ತಿಯಾ ಖಾವ್‍ನಕೊ; ತುಕಾ ಸಾಂಗಲ್ಲ್ಯಾ ತ್ಯಾ ಮಾನ್ಸಾಸಾಟ್ನಿ ಅನಿ ತುಜ್ಯಾ ಭುತ್ತುರ್‍ಲ್ಯಾ ಮನಾತ್ಲ್ಯಾ ಸಂಶಯಾಕ್ ಅವಕಾಸ್ ದಿವ್ಚೆ ನ್ಹಯ್, ತಸೆ ಮನುನ್ ತಿಯಾ ತೆ ಖಾವ್ಚೆ ನ್ಹಯ್ ಅಧ್ಯಾಯವನ್ನು ನೋಡಿ |
ಆದರೆ ಎಲ್ಲಾ ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಕೆಲವು ಜನರು ಇಂದಿನವರೆಗೂ ವಿಗ್ರಹಗಳನ್ನು ಆರಾಧಿಸುವ ರೂಢಿಯಲ್ಲಿದ್ದಾರೆ. ಹೀಗಿರಲಾಗಿ, ಆ ಜನರು ಮಾಂಸವನ್ನು ತಿನ್ನುವಾಗ ಅದು ವಿಗ್ರಹಕ್ಕೆ ಅರ್ಪಿತವಾದದ್ದೆಂದು ಆಲೋಚಿಸುತ್ತಾರೆ. ಆದರೆ ಈ ಮಾಂಸವನ್ನು ತಿನ್ನುವುದು ತಪ್ಪಲ್ಲ ಎಂಬ ದೃಢನಂಬಿಕೆ ಅವರಲ್ಲಿಲ್ಲ. ಆದ್ದರಿಂದ, ಅವರು ಮಾಂಸವನ್ನು ತಿನ್ನುವಾಗ ತಮ್ಮನ್ನು ದೋಷಿಗಳೆಂದು ಭಾವಿಸಿಕೊಳ್ಳುತ್ತಾರೆ.
ನೀನು ತಿನ್ನುವ ಒಂದು ಆಹಾರಪದಾರ್ಥದಿಂದ ನಿನ್ನ ಸಹೋದರನ ನಂಬಿಕೆಗೆ ನೀನು ತೊಂದರೆಯನ್ನು ಮಾಡಿದರೆ, ನೀನು ಪ್ರೀತಿಯ ಮಾರ್ಗವನ್ನು ನಿಜವಾಗಿಯೂ ಅನುಸರಿಸುತ್ತಿಲ್ಲ. ಒಬ್ಬನು ಯಾವುದಾದರೂ ಆಹಾರಪದಾರ್ಥವನ್ನು ತಿನ್ನುವುದು ತಪ್ಪೆಂದು ಭಾವಿಸಿಕೊಂಡಿರುವಾಗ, ನೀನು ಆ ಪದಾರ್ಥವನ್ನು ತಿಂದರೆ ಅವನ ನಂಬಿಕೆ ಹಾಳಾಗುವುದು. ಆದ್ದರಿಂದ ನೀನು ಹಾಗೆ ಮಾಡಕೂಡದು. ಕ್ರಿಸ್ತನು ಆ ವ್ಯಕ್ತಿಗಾಗಿಯೂ ಸತ್ತನು.