Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 9:8 - ಪರಿಶುದ್ದ ಬೈಬಲ್‌

8 ಈ ಆಲಯವನ್ನು ನಾಶಗೊಳಿಸುತ್ತೇನೆ. ಇದನ್ನು ನೋಡುವ ಪ್ರತಿಯೊಬ್ಬರೂ ವಿಸ್ಮಿತರಾಗುವರು. ‘ಈ ದೇಶಕ್ಕೂ ಈ ಆಲಯಕ್ಕೂ ಇಂತಹ ಭೀಕರ ಕಾರ್ಯವನ್ನು ಯೆಹೋವನು ಏಕೆ ಮಾಡಿದನು?’ ಎಂದು ಜನರು ಕೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಉನ್ನತವಾದ ಈ ಮಂದಿರದ ಮಾರ್ಗವಾಗಿ ಹಾದುಹೋಗುವವರು ಅದನ್ನು ನೋಡಿ ವಿಸ್ಮಿತರಾಗಿ, ‘ಅಬ್ಬಬ್ಬಾ ಇದೇನು, ಯೆಹೋವನು ಈ ದೇಶವನ್ನು ಮತ್ತು ಈ ಆಲಯವನ್ನೂ ಹೀಗೇಕೆ ಮಾಡಿದನು?’ ಎಂದು ಕೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಈ ಮಹಾಮಂದಿರದ ಮಾರ್ಗವಾಗಿ ಹಾದುಹೋಗುವವರು ಅದನ್ನು ನೋಡಿ ಚಕಿತರಾಗಿ, ‘ಅಬ್ಬಬ್ಬಾ, ಇದೇನು! ಸರ್ವೇಶ್ವರ ನಾಡಿಗೂ ಈ ಗುಡಿಗೂ ಹೀಗೇಕೆ ಮಾಡಿದರು?’ ಎಂದು ಕೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಉನ್ನತವಾದ ಈ ಮಂದಿರದ ಮಾರ್ಗವಾಗಿ ಹಾದುಹೋಗುವವರು ಅದನ್ನು ನೋಡಿ ವಿಸ್ಮಿತರಾಗಿ - ಅಬ್ಬಬ್ಬಾ, ಇದೇನು! ಯೆಹೋವನು ಈ ದೇಶವನ್ನೂ ಈ ಆಲಯವನ್ನೂ ಹೀಗೇಕೆ ಮಾಡಿದನು ಎಂದು ಕೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಇದಲ್ಲದೆ ಉನ್ನತವಾಗಿರುವ ಈ ಆಲಯದ ಮಾರ್ಗವಾಗಿ ಹೋಗುವವರೆಲ್ಲರೂ ಅದಕ್ಕೆ ಆಶ್ಚರ್ಯಪಟ್ಟು, ‘ಯೆಹೋವ ದೇವರು ಈ ದೇಶಕ್ಕೂ, ಈ ಆಲಯಕ್ಕೂ ಹೀಗೆ ಏಕೆ ಮಾಡಿದರು?’ ಎಂದು ಕೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 9:8
22 ತಿಳಿವುಗಳ ಹೋಲಿಕೆ  

ಅತ್ಯಂತ ಪ್ರಸಿದ್ಧಿಹೊಂದಿದ ಈ ದೇವಾಲಯವನ್ನು ನೋಡುವ ಪ್ರತಿಯೊಬ್ಬನು, ‘ದೇವರು ಈ ದೇಶಕ್ಕೆ ಮತ್ತು ಈ ಆಲಯಕ್ಕೆ ಹೀಗೇಕೆ ಮಾಡಿದನು?’ ಎಂದು ಅಚ್ಚರಿಪಡುವಂತೆ ಮಾಡುವೆನು.


ಯೆಹೋಯಾಚೀನನು ಎಸೆಯಲ್ಪಟ್ಟ ಒಡೆದ ಮಡಕೆಯಂತಿದ್ದಾನೆ. ಅವನು ಯಾರಿಗೂ ಬೇಡವಾಗದ ಮಡಕೆಯಂತಿದ್ದಾನೆ. ಯೆಹೋಯಾಚೀನನು ಮತ್ತು ಅವನ ಮಕ್ಕಳು ಏಕೆ ಹೊರಗೆ ಎಸೆಯಲ್ಪಡುವರು? ಅವರು ಪರದೇಶಕ್ಕೆ ಏಕೆ ಒಯ್ಯಲ್ಪಡುವರು?


ನಾನು ಈ ನಗರವನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಜೆರುಸಲೇಮಿನಿಂದ ಹಾದುಹೋಗುವಾಗ ಜನರು ಸಿಳ್ಳುಹಾಕಿ ತಲೆಯಾಡಿಸಿ ಹೋಗುವರು. ನಗರವು ಹಾಳಾಗಿರುವುದನ್ನು ಕಂಡು ಅವರು ಬೆರಗಾಗುವರು.


“ನಮಗೂ ನಮ್ಮ ನಾಯಕರುಗಳಿಗೂ ನೀನು ಹೇಳಿದಂತೆಯೇ ಮಾಡಿರುವೆ. ನೀನು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿರುವೆ. ಜೆರುಸಲೇಮ್ ನಗರಕ್ಕೆ ಉಂಟಾದಷ್ಟು ಕೇಡು ಭೂಮಂಡಲದಲ್ಲಿ ಯಾವ ನಗರಕ್ಕೂ ಆಗಿಲ್ಲ.


ದೇವರು ಅವಳ ಮೇಲೆ ತನ್ನ ಕೋಪವನ್ನು ಪ್ರಕಟಿಸುವನು ಆದ್ದರಿಂದ ಅಲ್ಲಿ ಯಾರೂ ವಾಸಮಾಡಲಾರರು. ಬಾಬಿಲೋನ್ ನಗರವು ಸಂಪೂರ್ಣವಾಗಿ ನಿರ್ಜನವಾಗುವುದು. ಬಾಬಿಲೋನಿನಿಂದ ಹಾದುಹೋಗುವವರೆಲ್ಲ ಭಯಪಡುವರು. ಅದಕ್ಕೆ ಉಂಟಾದ ದುರ್ಗತಿಯನ್ನು ನೋಡಿ ಅವರು ತಮ್ಮ ತಲೆಯಾಡಿಸುವರು.


“ಎದೋಮನ್ನು ನಾಶಮಾಡಲಾಗುವುದು. ಹಾಳಾದ ನಗರಗಳನ್ನು ಕಂಡು ಜನರು ಬೆರಗಾಗುವರು. ನಾಶವಾದ ನಗರಗಳನ್ನು ಕಂಡು ಜನರು ಆಶ್ಚರ್ಯಚಕಿತರಾಗಿ ಸಿಳ್ಳುಹಾಕುವರು.


ನಮ್ಮ ಪವಿತ್ರ ಆಲಯವು ಬೆಂಕಿಯಿಂದ ಸುಡಲ್ಪಟ್ಟಿದೆ. ಆ ದೇವಾಲಯವು ನಮಗೆ ಅತ್ಯಂತ ಅಮೂಲ್ಯವಾದದ್ದಾಗಿದೆ. ನಮ್ಮ ಪೂರ್ವಿಕರು ನಿನ್ನನ್ನು ಅಲ್ಲಿ ಆರಾಧಿಸಿದರು. ನಾವು ಹೊಂದಿದಂಥ ಎಲ್ಲಾ ಒಳ್ಳೆಯವುಗಳು ಈಗ ನಾಶವಾದವು.


ನೀವು ಯಾವ ದೇಶಕ್ಕೆ ಕಳುಹಿಸಲ್ಪಡುವಿರೋ ಆ ದೇಶದವರು ನಿಮ್ಮ ದುರವಸ್ಥೆಯನ್ನು ನೋಡಿ ನಗುವರು; ಕೆಟ್ಟಮಾತುಗಳನ್ನಾಡುವರು.


ನೆಬೂಜರದಾನನು ದೇವಾಲಯವನ್ನೂ ರಾಜನ ಅರಮನೆಯನ್ನೂ ಜೆರುಸಲೇಮಿನಲ್ಲಿದ್ದ ಮನೆಗಳನ್ನೆಲ್ಲಾ ಸುಟ್ಟುಹಾಕಿದನು. ಅವನು ಮಹಾಸೌಧಗಳನ್ನು ನಾಶಗೊಳಿಸಿದನು.


ನೆಬೂಕದ್ನೆಚ್ಚರನು ಮತ್ತು ಅವನ ಸೈನಿಕರು ದೇವಾಲಯವನ್ನು ಸುಟ್ಟುಹಾಕಿದರು; ಜೆರುಸಲೇಮ್ ಪಟ್ಟಣದ ಪೌಳಿಗೋಡೆಯನ್ನು ಕೆಡವಿಹಾಕಿದರು; ಅರಸನ ಮತ್ತು ಅವನ ಪರಿವಾರದವರ ಮನೆಗಳನ್ನೆಲ್ಲಾ ಸುಟ್ಟುಹಾಕಿದರು. ಜೆರುಸಲೇಮಿನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನೆಲ್ಲಾ ದೋಚಿದರು ಮತ್ತು ಸುಟ್ಟುಹಾಕಿದರು;


ಯೆಹೂದದ ಜನರು ನಿನ್ನನ್ನು, ‘ಯೆರೆಮೀಯನೇ, ನಮ್ಮ ದೇವರಾದ ಯೆಹೋವನು ನಮಗೆ ಇಂಥಾ ಕೇಡನ್ನು ಏಕೆ ಮಾಡಿದನು’ ಎಂದು ಕೇಳಬಹುದು. ಆಗ ಅವರಿಗೆ ಹೀಗೆ ಉತ್ತರಕೊಡು: ‘ಯೆಹೂದದ ಜನರಾದ ನೀವು ಯೆಹೋವನನ್ನು ತೊರೆದಿದ್ದೀರಿ, ನಿಮ್ಮ ದೇಶದಲ್ಲಿ ನೀವು ಅನ್ಯರ ವಿಗ್ರಹಗಳ ಸೇವೆ ಮಾಡುತ್ತಿದ್ದೀರಿ. ಆದ್ದರಿಂದಲೇ ನೀವು ಪರದೇಶದಲ್ಲಿ ಪರದೇಶಿಯರ ಸೇವೆಯನ್ನು ಮಾಡುವಿರಿ.’”


“ಯೆರೆಮೀಯನೇ, ನೀನು ಈ ವಿಷಯವನ್ನು ಯೆಹೂದದ ಜನರಿಗೆ ಹೇಳಿದಾಗ ‘ಈ ಮಹಾವಿಪತ್ತು ನಮಗೆ ಸಂಭವಿಸಬೇಕೆಂದು ಯೆಹೋವನು ಏಕೆ ನಿರ್ಣಯಿಸಿದ್ದಾನೆ? ನಮ್ಮ ಅಪರಾಧವೇನು? ನಮ್ಮ ದೇವರಾದ ಯೆಹೋವನ ವಿರುದ್ಧವಾಗಿ ನಾವು ಮಾಡಿದ ಪಾಪವೇನು?’ ಎಂದು ಅವರು ಕೇಳುತ್ತಾರೆ.


ಆದ್ದರಿಂದ ಯೆಹೂದ್ಯರ ದೇಶವು ಬರಿದಾದ ಮರುಭೂಮಿಯಾಗುವುದು. ಜನರು ಇಲ್ಲಿಂದ ಹಾದುಹೋಗುವಾಗಲೆಲ್ಲಾ ಸಿಳ್ಳುಹಾಕಿ ತಲೆಯಾಡಿಸುವರು. ದೇಶವು ಹಾಳಾದುದನ್ನು ನೋಡಿ ಬೆರಗಾಗುವರು.


ಆದ್ದರಿಂದ ನಾನು ಉತ್ತರದ ಎಲ್ಲಾ ಜನಾಂಗಗಳನ್ನು ಕರೆಸುತ್ತೇನೆ.” ಇದು ಯೆಹೋವನ ಸಂದೇಶ. “ನಾನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನನ್ನು ಕೂಡಲೇ ಕರೆಸುವೆನು. ಅವನು ನನ್ನ ಸೇವಕ. ನಾನು ಆ ಜನರನ್ನು ಯೆಹೂದ ದೇಶದ ವಿರುದ್ಧವಾಗಿಯೂ ಯೆಹೂದ್ಯರ ವಿರುದ್ಧವಾಗಿಯೂ ತರುತ್ತೇನೆ. ನಾನು ನಿಮ್ಮ ಸುತ್ತಮುತ್ತಲಿನಲ್ಲಿದ್ದ ಜನಾಂಗಗಳ ವಿರುದ್ಧವಾಗಿಯೂ ಅವರನ್ನು ಕರೆತರುವೆನು. ನಾನು ಆ ದೇಶಗಳನ್ನೆಲ್ಲ ನಾಶಮಾಡುವೆನು. ನಾನು ಆ ಭೂಮಿಗಳನ್ನು ಶಾಶ್ವತವಾಗಿ ಬರಿದಾದ ಮರುಭೂಮಿಗಳನ್ನಾಗಿ ಮಾಡುವೆನು. ಜನರು ಆ ದೇಶಗಳನ್ನು ನೋಡಿ ಅವು ಹಾಳಾಗಿರುವುದನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು.


ನೀವು ವಿಗ್ರಹಗಳನ್ನು ಮಾಡಿ ನನ್ನನ್ನು ಏಕೆ ಸಿಟ್ಟಿಗೆಬ್ಬಿಸುವಿರಿ? ಈಗ ನೀವು ಈಜಿಪ್ಟಿನಲ್ಲಿ ವಾಸಮಾಡುತ್ತಿರುವಿರಿ. ಈಗ ಈಜಿಪ್ಟಿನ ಸುಳ್ಳುದೇವರುಗಳಿಗೆ ನೈವೇದ್ಯವನ್ನು ಅರ್ಪಿಸಿ ನನಗೆ ಕೋಪ ಬರುವಂತೆ ಮಾಡುತ್ತಿರುವಿರಿ. ನೀವೇ ನಿಮ್ಮನ್ನು ನಾಶಮಾಡಿಕೊಳ್ಳುವಿರಿ. ಅದು ನಿಮ್ಮ ತಪ್ಪೇ ಆಗುವುದು. ಬೇರೆ ಜನಾಂಗದವರು ನಿಂದಿಸುವಂತೆ ನಿಮ್ಮನ್ನು ನೀವು ಮಾಡಿಕೊಳ್ಳುತ್ತಿದ್ದೀರಿ. ಭೂಮಂಡಲದ ಎಲ್ಲಾ ಜನಾಂಗಗಳು ನಿಮ್ಮನ್ನು ತಮಾಷೆ ಮಾಡುವಂತಾಗುವುದು.


ನೆಬೂಜರದಾನನು ಯೆಹೋವನ ಆಲಯವನ್ನು ಸುಟ್ಟನು. ಅವನು ಜೆರುಸಲೇಮಿನಲ್ಲಿದ್ದ ಅರಮನೆಯನ್ನು ಮತ್ತು ಉಳಿದೆಲ್ಲ ಮನೆಗಳನ್ನು ಸುಟ್ಟುಬಿಟ್ಟನು. ಅವನು ಜೆರುಸಲೇಮಿನ ಎಲ್ಲಾ ಮುಖ್ಯ ಕಟ್ಟಡಗಳನ್ನು ಸುಟ್ಟುಹಾಕಿದನು.


ನಿಮ್ಮ ದೇಶವೆಲ್ಲಾ ನಿಷ್ಪ್ರಯೋಜಕವಾಗಿರುವುದು. ಅದರ ಮೇಲೆ ಉಪ್ಪೂ ಗಂಧಕವೂ ತುಂಬಿರುವುದು. ಅದರ ಮೇಲೆ ಯಾವ ಸಸಿಯೂ ಬೆಳೆಯಲಾರದು; ಕೂಳೆಯೂ ಬೆಳೆಯುವುದಿಲ್ಲ. ಸೊದೋಮ್, ಗೊಮೋರ, ಅದ್ಮಾ ಮತ್ತು ಚೆಬೋಯೀಮ್ ಎಂಬ ಪಟ್ಟಣಗಳು ಯೆಹೋವನ ಕೋಪದ ನಿಮಿತ್ತ ನಾಶವಾದಂತೆ ನಿಮ್ಮ ದೇಶವೂ ನಾಶವಾಗುವುದು.


ಯೆಹೂದದ ರಾಜರು ನನ್ನನ್ನು ತ್ಯಜಿಸಿದರು ಮತ್ತು ಇತರ ದೇವರುಗಳಿಗೆ ಧೂಪವನ್ನು ಸುಟ್ಟರು. ಅವರು ನನ್ನಲ್ಲಿ ಹೆಚ್ಚು ಕೋಪವನ್ನು ಉಂಟುಮಾಡಿದರು. ಅವರು ಅನೇಕ ವಿಗ್ರಹಗಳನ್ನು ನಿರ್ಮಿಸಿದರು. ಆದಕಾರಣವೇ ನಾನು ನನ್ನ ಕೋಪವನ್ನು ಈ ಸ್ಥಳದ ವಿರುದ್ಧ ತೋರ್ಪಡಿಸುತ್ತೇನೆ. ನನ್ನ ಕೋಪವು ಆರಿಹೋಗದ ಬೆಂಕಿಯಂತಿರುತ್ತದೆ!’


ಆದ್ದರಿಂದ ಯೆಹೋವನು ಯೆಹೂದದ ಮತ್ತು ಜೆರುಸಲೇಮಿನ ಜನರ ಮೇಲೆ ಬಹು ಕೋಪಗೊಂಡು ಅವರನ್ನು ಶಿಕ್ಷಿಸಿದನು. ಯೆಹೋವನು ಯೆಹೂದ ಮತ್ತು ಜೆರುಸಲೇಮಿನ ಜನರಿಗೆ ಮಾಡಿದ್ದ ಸಂಗತಿಗಳನ್ನು ನೋಡಿದ ಅನ್ಯರು ಗೇಲಿ ಮಾಡುತ್ತ ವೈರತ್ವದಿಂದ ತಲೆಯಾಡಿಸಿದರು. ಇವೆಲ್ಲಾ ಸತ್ಯವೆಂದು ನಿಮಗೆ ತಿಳಿದದೆ. ಇದನ್ನು ನಿಮ್ಮ ಸ್ವಂತ ಕಣ್ಣುಗಳಿಂದ ನೋಡಿದ್ದೀರಿ.


ಪಕ್ಕದಲ್ಲಿ ದಾರಿ ಹಿಡಿದುಹೋಗುವ ಜನರು ನಿನ್ನನ್ನು ನೋಡಿ ಅಪಹಾಸ್ಯದಿಂದ ಚಪ್ಪಾಳೆ ತಟ್ಟುತ್ತಾರೆ. ಜೆರುಸಲೇಮಿನ ಮಗಳ ಸ್ಥಿತಿಯನ್ನು ನೋಡಿ ಅವರು ಸಿಳ್ಳುಹಾಕುತ್ತಾರೆ ಮತ್ತು ತಲೆಯಾಡಿಸುತ್ತಾರೆ. “ಜನರಿಂದ ‘ಪರಿಪೂರ್ಣ ಸುಂದರ ನಗರ’ ‘ಸಮಸ್ತಲೋಕದ ಸಂತೋಷ’ ಎಂದು ಕರೆಸಿಕೊಂಡದ್ದು ಇದೇ ನಗರವೇ?” ಎಂದು ಅವರು ಕೇಳುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು