ರಾಜನಾದ ಸೊಲೊಮೋನನು ಇಪ್ಪತ್ತು ವರ್ಷಗಳ ತರುವಾಯ ಗಲಿಲಾಯದ ಇಪ್ಪತ್ತು ಪಟ್ಟಣಗಳನ್ನು ತೂರಿನ ರಾಜನಾದ ಹೀರಾಮನಿಗೆ ಬಿಟ್ಟುಕೊಟ್ಟನು. ಆಲಯವನ್ನು ಮತ್ತು ಅರಮನೆಯನ್ನು ನಿರ್ಮಿಸಲು ಹೀರಾಮನು ಸಹಾಯ ಮಾಡಿದ್ದರಿಂದ ಸೊಲೊಮೋನನು ಹೀರಾಮನಿಗೆ ಈ ಪಟ್ಟಣಗಳನ್ನು ಕೊಟ್ಟನು. ಸೊಲೊಮೋನನು ಅಪೇಕ್ಷಿಸಿದ ದೇವದಾರು ಮರಗಳನ್ನು, ತುರಾಯಿ ಮರಗಳನ್ನು ಮತ್ತು ಬಂಗಾರವನ್ನು ಹೀರಾಮನು ಕೊಟ್ಟಿದ್ದನು.