1 ಅರಸುಗಳು 8:25 - ಪರಿಶುದ್ದ ಬೈಬಲ್25 ಈಗಲಾದರೋ ಇಸ್ರೇಲಿನ ದೇವರಾದ ಯೆಹೋವನೇ, ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ನೀನು ಮಾಡಿದ ಇತರ ವಾಗ್ದಾನಗಳನ್ನು ಈಗ ನೆರವೇರಿಸು. ನೀನು ನನ್ನ ತಂದೆಗೆ, ‘ದಾವೀದನೇ, ನೀನು ನನ್ನನ್ನು ಅನುಸರಿಸಿದಂತೆ ನಿನ್ನ ಮಕ್ಕಳೂ ಎಚ್ಚರಿಕೆಯಿಂದ ನನ್ನನ್ನು ಅನುಸರಿಸಿದರೆ, ನಿನ್ನ ಕುಟುಂಬದಲ್ಲಿನ ಯಾವನಾದರೊಬ್ಬನು ಇಸ್ರೇಲಿನ ಜನರನ್ನು ಆಳುತ್ತಲೇ ಇರುವನು’ ಎಂದು ಹೇಳಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ಇಸ್ರಾಯೇಲ್ ದೇವರಾದ ಯೆಹೋವನೇ, ನೀನು ನನ್ನ ತಂದೆಯಾದ ದಾವೀದನಿಗೆ, ‘ನಿನ್ನ ಸಂತಾನದವರು ನಿನ್ನಂತೆ ಜಾಗರೂಕತೆಯಿಂದ ನನ್ನ ಮಾರ್ಗದಲ್ಲೇ ನಡೆದುಕೊಳ್ಳುವುದಾದರೆ, ಅವರು ತಪ್ಪದೆ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು’ ಎಂಬುದಾಗಿ ವಾಗ್ದಾನ ಮಾಡಿದಿಯಲ್ಲಾ ಅದನ್ನು ನೆರವೇರಿಸು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)25 ಇಸ್ರಯೇಲ್ ದೇವರಾದ ಸರ್ವೇಶ್ವರಾ, ನೀವು ನನ್ನ ತಂದೆ ದಾವೀದನಿಗೆ, ನಿನ್ನ ಸಂತಾನದವರು ನಿನ್ನಂತೆ ಜಾಗರೂಕತೆಯಿಂದ ನನ್ನ ಮಾರ್ಗದಲ್ಲೇ ನಡೆದುಕೊಳ್ಳುವುದಾದರೆ, ಅವರು ಇಸ್ರಯೇಲ್ ಸಿಂಹಾಸನದ ಮೇಲೆ ಕೂತುಕೊಳ್ಳುವುದು ತಪ್ಪದು; ಎಂಬುದಾಗಿ ವಾಗ್ದಾನಮಾಡಿದ್ದೀರಿ; ಅದನ್ನು ನೆರವೇರಿಸಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)25 ಇಸ್ರಾಯೇಲ್‍ದೇವರಾದ ಯೆಹೋವನೇ, ನೀನು ನನ್ನ ತಂದೆಯಾದ ದಾವೀದನಿಗೆ - ನಿನ್ನ ಸಂತಾನದವರು ನಿನ್ನಂತೆ ಜಾಗರೂಕತೆಯಿಂದ ನನ್ನ ಮಾರ್ಗದಲ್ಲೇ ನಡೆದುಕೊಳ್ಳುವದಾದರೆ ಅವರು ತಪ್ಪದೆ ಇಸ್ರಾಯೇಲ್‍ಸಿಂಹಾಸನದ ಮೇಲೆ ಕೂತುಕೊಳ್ಳುವಂತೆ ಮಾಡುವೆನು ಎಂಬದಾಗಿ ವಾಗ್ದಾನ ಮಾಡಿದಿಯಲ್ಲಾ; ಅದನ್ನು ನೆರವೇರಿಸು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 “ಆದಕಾರಣ, ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ‘ನಿನ್ನ ಸಂತಾನದವರು ನಿನ್ನಂತೆ ಜಾಗ್ರತೆಯಾಗಿದ್ದು, ನನ್ನ ಮಾರ್ಗದಲ್ಲೇ ನಡೆದುಕೊಳ್ಳುವದಾದರೆ, ಅವರು ತಪ್ಪದೆ ಇಸ್ರಾಯೇಲಿನ ಸಿಂಹಾಸನದ ಮೇಲೆ ನನ್ನ ಸಮ್ಮುಖದಲ್ಲಿ ಕುಳಿತುಕೊಳ್ಳುವರು,’ ಎಂದು ನೀವು ನನ್ನ ತಂದೆಯಾದ ನಿಮ್ಮ ಸೇವಕನಾದ ದಾವೀದನಿಗೆ ವಾಗ್ದಾನ ಮಾಡಿದ್ದನ್ನು ನೆರವೇರಿಸಿರಿ. ಅಧ್ಯಾಯವನ್ನು ನೋಡಿ |
ಸೊಲೊಮೋನನು ತನಗೆ ಯೆಹೋವನ ಮೇಲಿದ್ದ ಪ್ರೀತಿಯನ್ನು ತೋರ್ಪಡಿಸಿದನು. ಅವನ ತಂದೆಯಾದ ದಾವೀದನು ಅವನಿಗೆ ಮಾಡಬೇಕೆಂದು ಹೇಳಿದ್ದ ಎಲ್ಲ ಕಾರ್ಯಗಳನ್ನು ಮಾಡುವುದರ ಮೂಲಕ ವಿಧೇಯತೆಯನ್ನು ತೋರ್ಪಡಿಸಿದನು. ಆದರೆ ಸೊಲೊಮೋನನು ತನಗೆ ದಾವೀದನು ಹೇಳದೆ ಇದ್ದ ಕೆಲವು ಕಾರ್ಯಗಳನ್ನೂ ಮಾಡಿದನು. ಸೊಲೊಮೋನನು ಎತ್ತರವಾದ ಸ್ಥಳಗಳನ್ನು ಯಜ್ಞವನ್ನರ್ಪಿಸಲು ಮತ್ತು ಧೂಪಹಾಕಲು ಉಪಯೋಗಿಸುತ್ತಿದ್ದನು.