Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 7:30 - ಪರಿಶುದ್ದ ಬೈಬಲ್‌

30 ಪ್ರತಿಯೊಂದು ಬಂಡಿಗೂ ನಾಲ್ಕು ಹಿತ್ತಾಳೆಯ ಗಾಲಿಗಳು ಮತ್ತು ಅಚ್ಚುಗಳು ಇದ್ದವು. ಆ ದೊಡ್ಡ ಪಾತ್ರೆಯ ಮೂಲೆಗಳಲ್ಲಿ ಹಿತ್ತಾಳೆಯ ಆಧಾರ ಕಂಬಗಳಿದ್ದವು. ಈ ಕಂಬಗಳ ಹಿತ್ತಾಳೆಯ ಮೇಲ್ಭಾಗವು ಹೂವಿನಾಕಾರದಲ್ಲಿ ಕೆತ್ತಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಪ್ರತಿಯೊಂದು ಪೀಠಕ್ಕೆ ನಾಲ್ಕು ತಾಮ್ರದ ಗಾಲಿಗಳೂ ಅಚ್ಚುಗಳೂ ಇದ್ದವು. ಪ್ರತಿಯೊಂದು ನಿಲುವುಪಟ್ಟಿಯ ಮೇಲಣ ತುದಿಯಲ್ಲಿ ಎರಕ ಹೊಯ್ದ ತಾಮ್ರದ ಹಿಡಿಗಳಿದ್ದವು. ಅವು ಪೀಠದ ಮೇಲಣ ಗಂಗಾಳವನ್ನು ಹಿಡಿಯುತ್ತಿದ್ದವು. ಅವುಗಳ ಹೊರಮೈಗೆ ತೋರಣ ಚಿತ್ರಗಳಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಪ್ರತಿಯೊಂದು ಪೀಠಕ್ಕೆ ನಾಲ್ಕು ತಾಮ್ರದ ಗಾಲಿಗಳೂ ಅಚ್ಚುಗಳೂ ಇದ್ದವು. ಪ್ರತಿಯೊಂದು ನಿಲುವುಪಟ್ಟಿಯ ಮೇಲಿನ ತುದಿಯಲ್ಲಿ ಎರಕಹೊಯ್ದ ತಾಮ್ರದ ಹಿಡಿಗಳಿದ್ದವು; ಅವು ಪೀಠದ ಮೇಲಿನ ನೀರಿನ ಬಾನೆಯನ್ನು ಹಿಡಿಯುತ್ತಿದ್ದವು. ಅವುಗಳ ಹೊರ ಮೈಗೆ ತೋರಣಚಿತ್ರಗಳಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಪ್ರತಿಯೊಂದು ಪೀಠಕ್ಕೆ ನಾಲ್ಕು ತಾಮ್ರದ ಗಾಲಿಗಳೂ ಅಚ್ಚುಗಳೂ ಇದ್ದವು. ಪ್ರತಿಯೊಂದು ನಿಲುವುಪಟ್ಟಿಯ ಮೇಲಣ ತುದಿಯಲ್ಲಿ ಎರಕಹೊಯ್ದ ತಾಮ್ರದ ಹಿಡಿಗಳಿದ್ದವು; ಅವು ಪೀಠದ ಮೇಲಣ ಗಂಗಾಳವನ್ನು ಹಿಡಿಯುತ್ತಿದ್ದವು. ಅವುಗಳ ಹೊರಮೈಗೆ ತೋರಣಚಿತ್ರಗಳಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಒಂದೊಂದು ಪೀಠಕ್ಕೆ ನಾಲ್ಕು ಕಂಚಿನ ಗಾಲಿಗಳೂ, ಕಂಚಿನ ಅಚ್ಚುಗಳೂ ಇದ್ದವು. ಅದರ ನಾಲ್ಕು ಮೂಲೆಗಳಿಗೂ ಹೂಗಳ ತೋರಣಗಳ ಜೋಡಣೆಗಳಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 7:30
7 ತಿಳಿವುಗಳ ಹೋಲಿಕೆ  

ಅದು ಜೀವಿಗಳು ತಮ್ಮ ರೆಕ್ಕೆಗಳನ್ನು ಒಂದಕ್ಕೊಂದು ಬಡಿದಾಡುವ ಸಪ್ಪಳ ಮತ್ತು ಅವುಗಳ ಪಕ್ಕದಲ್ಲಿದ್ದ ಚಕ್ರಗಳ ಸಪ್ಪಳ.


ಅಂಕಣದ ಮತ್ತು ಚೌಕಟ್ಟಿನ ಮೇಲೆ ಹಿತ್ತಾಳೆಯ ಸಿಂಹಗಳು, ಹೋರಿಗಳು ಮತ್ತು ಕೆರೂಬಿಗಳಿದ್ದವು. ಸಿಂಹಗಳ, ಹೋರಿಗಳ ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಹೂವಿನಾಕಾರದಲ್ಲಿ ಹಿತ್ತಾಳೆಯ ಮೇಲೆ ಕೆತ್ತಿದ್ದನು.


ಈ ಪಾತ್ರೆಯ ಮೇಲೆ ಒಂದು ಚೌಕಟ್ಟಿತ್ತು. ಅದು ಪಾತ್ರೆಯ ಮೇಲೆ ಹದಿನೆಂಟು ಇಂಚು ಎತ್ತರವಾಗಿತ್ತು. ಆ ಪಾತ್ರೆಯ ಬಾಯಿಯು ಇಪ್ಪತ್ತೇಳು ಇಂಚು ವ್ಯಾಸದೊಂದಿಗೆ ವೃತ್ತಾಕಾರವಾಗಿತ್ತು. ಆ ಚೌಕಟ್ಟಿನ ಹಿತ್ತಾಳೆಯ ಮೇಲೆ ಚಿತ್ರ ವಿನ್ಯಾಸಗಳನ್ನು ಬಿಡಿಸಲಾಗಿತ್ತು. ಈ ಚೌಕಟ್ಟು ವೃತ್ತಾಕಾರವಾಗಿರದೆ ಚೌಕಾಕಾರವಾಗಿತ್ತು.


ಪ್ರತಿ ಬಂಡಿಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಆಧಾರ ಕಂಬಗಳಿದ್ದವು. ಅವುಗಳನ್ನು ಬಂಡಿಯೊಂದಿಗೆ ಅಖಂಡವಾಗಿ ನಿರ್ಮಿಸಿದ್ದರು.


ಆಗ ನಾನು ಅಲ್ಲಿ ನಾಲ್ಕು ಚಕ್ರಗಳಿರುವದನ್ನು ಕಂಡೆನು. ಪ್ರತಿಯೊಬ್ಬ ಕೆರೂಬಿದೂತನ ಬಳಿ ಒಂದು ಚಕ್ರವಿತ್ತು. ಆ ಚಕ್ರಗಳು ಹೊಳೆಯುವ ಹಳದಿ ರತ್ನದಂತೆ ಕಂಡವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು