1 ಅರಸುಗಳು 7:2 - ಪರಿಶುದ್ದ ಬೈಬಲ್2 ಅವನು “ಲೆಬನೋನಿನ ಅರಣ್ಯದ ಮನೆ” ಎಂಬ ಕಟ್ಟಡವನ್ನೂ ಕಟ್ಟಿಸಿದನು. ಅದರ ಉದ್ದ ನೂರೈವತ್ತು ಅಡಿಗಳು; ಅಗಲ ಎಪ್ಪತ್ತೈದು ಅಡಿಗಳು; ಎತ್ತರ ನಲವತ್ತೈದು ಅಡಿಗಳು. ಅದರಲ್ಲಿ ನಾಲ್ಕು ಸಾಲಿನ ದೇವದಾರು ಮರದ ಕಂಬಗಳಿದ್ದವು ಆ ಕಂಬಗಳ ಮೇಲೆ ದೇವದಾರು ಮರದ ಬೋದಿಗೆಗಳಿದ್ದವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಅವನು ಕಟ್ಟಿಸಿದ ಲೆಬನೋನಿನ ತೋಪು ಎನ್ನಿಸಿಕೊಳ್ಳುವ ಮಂದಿರವು ನೂರು ಮೊಳ ಉದ್ದ, ಐವತ್ತು ಮೊಳ ಅಗಲ ಮತ್ತು ಮೂವತ್ತು ಮೊಳ ಎತ್ತರವಾಗಿತ್ತು. ಅದರ ಮಾಳಿಗೆಗೆ ದೇವದಾರಿನ ಮೂರು ಸಾಲು ಕಂಬಗಳೂ, ಅವುಗಳ ಮೇಲೆ ಇಡಲ್ಪಟ್ಟ ದೇವದಾರಿನ ತೊಲೆಗಳೂ ಅದಕ್ಕೆ ಆಧಾರವಾಗಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ಅವನು ಕಟ್ಟಿಸಿದ ‘ಲೆಬನೋನಿನ ತೋಪು’ ಎನಿಸಿಕೊಳ್ಳುವ ಮಂದಿರ 44 ಮೀಟರ್ ಉದ್ದ, 22 ಮೀಟರ್ ಅಗಲ, 13:5 ಮೀಟರ್ ಎತ್ತರವಾಗಿತ್ತು. ಅದರ ಮಾಳಿಗೆಗೆ ದೇವದಾರಿನ ಮೂರು ಸಾಲು ಕಂಬಗಳು ಅವುಗಳ ಮೇಲೆ ಇಡಲಾದ ದೇವದಾರಿನ ತೊಲೆಗಳೂ ಆಧಾರವಾಗಿ ಇದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ವರುಷಗಳಲ್ಲಿ ಕಟ್ಟಿಸಿ ತೀರಿಸಿದನು. ಅವನು ಕಟ್ಟಿಸಿದ ಲೇಬನೋನಿನ ತೋಪು ಎನಿಸಿಕೊಳ್ಳುವ ಮಂದಿರವು ನೂರು ಮೊಳ ಉದ್ದ, ಐವತ್ತು ಮೊಳ ಅಗಲ, ಮೂವತ್ತು ಮೊಳ ಎತ್ತರವಾಗಿತ್ತು. ಅದರ ಮಾಳಿಗೆಗೆ ದೇವದಾರಿನ ಮೂರು ಸಾಲು ಕಂಬಗಳೂ ಅವುಗಳ ಮೇಲೆ ಇಡಲ್ಪಟ್ಟ ದೇವದಾರಿನ ತೊಲೆಗಳೂ ಆಧಾರವಾಗಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ಅವನು ಲೆಬನೋನಿನ ಅಡವಿಯ ಮನೆಯನ್ನು ಕಟ್ಟಿಸಿದನು. ಅದು 44 ಮೀಟರ್ ಉದ್ದ, 22 ಮೀಟರ್ ಅಗಲ, 13.5 ಮೀಟರ್ ಎತ್ತರವೂ ಆಗಿತ್ತು. ಅದು ನಾಲ್ಕು ಸಾಲು ದೇವದಾರು ಕಂಬಗಳ ಮೇಲೆ ಇತ್ತು. ದೇವದಾರು ತೊಲೆಗಳು ಕಂಬಗಳ ಮೇಲೆ ಇದ್ದವು. ಅಧ್ಯಾಯವನ್ನು ನೋಡಿ |