1 ಅರಸುಗಳು 22:28 - ಪರಿಶುದ್ದ ಬೈಬಲ್28 ಮೀಕಾಯೆಹು ಗಟ್ಟಿಯಾದ ಧ್ವನಿಯಲ್ಲಿ, “ನಾನು ಏನು ಹೇಳುತ್ತೇನೆಂಬುದನ್ನು ಜನರೆಲ್ಲರೂ ಕೇಳಿರಿ! ರಾಜನಾದ ಅಹಾಬನೇ, ನೀನು ಈ ಹೋರಾಟದಿಂದ ಜೀವಸಹಿತ ಮನೆಗೆ ಬಂದರೆ, ಯೆಹೋವನು ನನ್ನ ಮೂಲಕ ಮಾತನಾಡಿಲ್ಲ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201928 ಮೀಕಾಯೆಹುವು ಅರಸನಿಗೆ, “ನೀನು ಸುರಕ್ಷಿತವಾಗಿ ಬರುವುದಾದರೆ ನಾನು ನುಡಿದದ್ದು ಯೆಹೋವನ ಮಾತಲ್ಲವೆಂದು ತಿಳಿದುಕೋ” ಎಂದು ಹೇಳಿ “ಎಲ್ಲಾ ಜನರೇ, ಇದನ್ನು ಕೇಳಿರಿ” ಎಂದು ಕೂಗಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)28 ಮೀಕಾಯೆಹುವು ಅರಸನಿಗೆ, “ನೀನು ಸುರಕ್ಷಿತನಾಗಿ ಬರುವುದಾದರೆ ನಾನು ನುಡಿದದ್ದು ಸರ್ವೇಶ್ವರನ ಮಾತಲ್ಲವೆಂದು ತಿಳಿದುಕೋ,” ಎಂದು ಹೇಳಿ, “ಮಹಾಜನರೇ, ನನ್ನ ಮಾತನ್ನು ಗಮನದಲ್ಲಿಡಿ,” ಎಂದು ಕೂಗಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)28 ಮೀಕಾಯೆಹುವು ಅರಸನಿಗೆ - ನೀನು ಸುರಕ್ಷಿತನಾಗಿ ಬರುವದಾದರೆ ನಾನು ನುಡಿದದ್ದು ಯೆಹೋವನ ಮಾತಲ್ಲವೆಂದು ತಿಳಿದುಕೋ ಎಂದು ಹೇಳಿ - ಎಲ್ಲಾ ಜನರೇ, ಇದನ್ನು ಕೇಳಿರಿ ಎಂದು ಕೂಗಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ28 ಅದಕ್ಕೆ ಮೀಕಾಯನು, “ನೀನು ಸಮಾಧಾನದಿಂದ ನಿಜವಾಗಿ ಬಂದರೆ, ಯೆಹೋವ ದೇವರು ನನ್ನ ಮುಖಾಂತರ ಮಾತನಾಡಿಲ್ಲ, ಎಂದು ಹೇಳಿ; ಜನರೇ ನೀವೆಲ್ಲರೂ ನನ್ನ ಮಾತನ್ನು ಗಮನದಲ್ಲಿಡಿರಿ!” ಎಂದು ಕೂಗಿ ಹೇಳಿದನು. ಅಧ್ಯಾಯವನ್ನು ನೋಡಿ |
ಯೆಹೋವನು ತನ್ನ ಸೇವಕರನ್ನು ಜನರಿಗೆ ಸಂದೇಶ ತಿಳಿಸುವದಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದಾನೆ. ಆತನ ಸಂದೇಶಗಳು ಸತ್ಯವಾದವುಗಳಾಗಿವೆ. ಜನರು ಮಾಡಬೇಕಾದ ಕಾರ್ಯಗಳ ಬಗ್ಗೆ ಯೆಹೋವನು ಸಂದೇಶಕರನ್ನು ಕಳುಹಿಸುತ್ತಾನೆ. ಅವರ ಸಲಹೆಯು ಒಳ್ಳೆಯದೆಂದು ಯೆಹೋವನು ತೋರಿಸಿಕೊಡುತ್ತಾನೆ. ಯೆಹೋವನು ಜೆರುಸಲೇಮಿಗೆ, “ಜನರು ನಿನ್ನಲ್ಲಿ ಮತ್ತೆ ವಾಸಮಾಡುವರು” ಎಂತಲೂ ಯೆಹೂದದ ನಗರಗಳಿಗೆ, “ನೀವು ತಿರುಗಿ ಕಟ್ಟಲ್ಪಡುವಿರಿ” ಎಂತಲೂ ಕೆಡವಲ್ಪಟ್ಟ ನಗರಗಳಿಗೆ, “ನಾನು ತಿರುಗಿ ನಿಮ್ಮನ್ನು ನಗರಗಳನ್ನಾಗಿ ಮಾಡುತ್ತೇನೆ” ಎಂತಲೂ ಹೇಳುತ್ತಾನೆ.