ಬೆನ್ಹದದನು ಅವನಿಗೆ, “ಅಹಾಬನೇ, ನನ್ನ ತಂದೆಯು ನಿನ್ನ ತಂದೆಯಿಂದ ವಶಪಡಿಸಿಕೊಂಡಿರುವ ಪಟ್ಟಣಗಳನ್ನು ನಿನಗೇ ಬಿಟ್ಟುಬಿಡುತ್ತೇನೆ. ನನ್ನ ತಂದೆಯು ಸಮಾರ್ಯದಲ್ಲಿ ಮಾಡಿದಂತೆ ನೀನೂ ದಮಸ್ಕದಲ್ಲಿ ಅಂಗಡಿಗಳನ್ನು ಹಾಕಬಹುದು” ಎಂದನು. ಅಹಾಬನು, “ನೀನು ಇದಕ್ಕೆ ಒಪ್ಪಿಕೊಂಡರೆ, ನಾನು ನಿನ್ನನ್ನು ಸ್ವತಂತ್ರವಾಗಿ ಹೋಗಲು ಬಿಡುತ್ತೇನೆ” ಎಂದನು. ಆ ಇಬ್ಬರು ರಾಜರುಗಳು ಶಾಂತಿಸಂಧಾನವನ್ನು ಮಾಡಿಕೊಂಡರು. ರಾಜನಾದ ಅಹಾಬನು ಬೆನ್ಹದದನಿಗೆ ಸ್ವತಂತ್ರವನ್ನು ಕೊಟ್ಟು ಕಳುಹಿಸಿದನು.