Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 20:23 - ಪರಿಶುದ್ದ ಬೈಬಲ್‌

23 ರಾಜನಾದ ಬೆನ್ಹದದನ ಅಧಿಕಾರಿಗಳು ಅವನಿಗೆ, “ಇಸ್ರೇಲಿನ ದೇವರು ಬೆಟ್ಟಗಳ ದೇವರಾಗಿದ್ದಾನೆ. ನಾವು ಬೆಟ್ಟಪ್ರದೇಶದಲ್ಲಿ ಹೋರಾಟ ಮಾಡಿದೆವು. ಆದ್ದರಿಂದ ಇಸ್ರೇಲಿನ ಜನರು ಗೆದ್ದರು. ಅವರೊಡನೆ ಸಮತಟ್ಟಾದ ಪ್ರದೇಶದಲ್ಲಿ ಹೋರಾಟ ಮಾಡೋಣ. ಆಗ ನಾವು ಗೆಲ್ಲುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಅರಾಮ್ಯರ ಅರಸನ ಮಂತ್ರಿಗಳು ತಮ್ಮ ಒಡೆಯನಿಗೆ, “ಇಸ್ರಾಯೇಲ್ ದೇವರು ಬೆಟ್ಟಗಳ ದೇವರಾಗಿರುವುದರಿಂದ ಅವರು ನಮ್ಮನ್ನು ಸೋಲಿಸಿದರು. ನಾವು ಅವರೊಡನೆ ಬಯಲಿನಲ್ಲಿ ಯುದ್ಧಮಾಡುವುದಾದರೆ ಹೇಗೂ ಜಯಹೊಂದುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಸಿರಿಯಾದವರ ಅರಸನ ಮಂತ್ರಿಗಳು ತಮ್ಮ ಒಡೆಯನಿಗೆ, “ಇಸ್ರಯೇಲರ ದೇವರು ಬೆಟ್ಟಗಳ ದೇವರಾಗಿರುವುದರಿಂದ ಅವರು ನಮ್ಮನ್ನು ಸೋಲಿಸಿದರು; ನಾವು ಅವರೊಡನೆ ಬಯಲಿನಲ್ಲಿ ಯುದ್ಧಮಾಡುವುದಾದರೆ ಖಂಡಿತವಾಗಿ ಜಯಹೊಂದುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಅರಾಮ್ಯರ ಅರಸನ ಮಂತ್ರಿಗಳು ತಮ್ಮ ಒಡೆಯನಿಗೆ - ಇಸ್ರಾಯೇಲ್ಯರ ದೇವರು ಬೆಟ್ಟಗಳ ದೇವರಾಗಿರುವದರಿಂದ ಅವರು ನಮ್ಮನ್ನು ಸೊಲಿಸಿದರು; ನಾವು ಅವರೊಡನೆ ಬೈಲಿನಲ್ಲಿ ಯುದ್ಧಮಾಡುವದಾದರೆ ಹೇಗೂ ಜಯಹೊಂದುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಆದರೆ ಅರಾಮಿನ ಅರಸನ ಸೇವಕರು ಅವನಿಗೆ, “ಅವರ ದೇವರುಗಳು, ಪರ್ವತಗಳ ದೇವರುಗಳು, ಆದ್ದರಿಂದ ಅವರು ನಮ್ಮನ್ನು ಜಯಿಸಿದರು. ನಾವು ಅವರ ಸಂಗಡ ಸಮಭೂಮಿಯಲ್ಲಿ ಯುದ್ಧಮಾಡಿದರೆ, ನಿಶ್ಚಯವಾಗಿ ನಾವು ಅವರಿಗಿಂತ ಬಲಶಾಲಿಗಳಾಗಿರುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 20:23
13 ತಿಳಿವುಗಳ ಹೋಲಿಕೆ  

ಈ ಜನರು ಎತ್ತರವಾದ ಸ್ಥಳಗಳಲ್ಲಿ ಕಲ್ಲಿನ ಸ್ಮಾರಕಗಳನ್ನು, ಪವಿತ್ರ ಸ್ತಂಭಗಳನ್ನು ನಿರ್ಮಿಸಿದರು. ಅವರು ಅವುಗಳನ್ನು ಎತ್ತರವಾದ ಪ್ರತಿಯೊಂದು ಬೆಟ್ಟದ ಮೇಲೂ ಪ್ರತಿಯೊಂದು ಹಸಿರುಮರದ ಕೆಳಗಡೆಯೂ ನಿರ್ಮಿಸಿದರು.


“ನಾನೇ ಕರ್ತನು. ಯೆಹೋವನೆಂಬುದೇ ನನ್ನ ಹೆಸರು. ನನ್ನ ಮಹಿಮೆಯನ್ನು ನಾನು ಇತರರಿಗೆ ಕೊಡೆನು. ನನಗೆ ಸಲ್ಲತಕ್ಕ ಮಹಿಮೆಯನ್ನು ಸುಳ್ಳುದೇವರ ವಿಗ್ರಹಗಳಿಗೆ ಬಿಟ್ಟುಕೊಡೆನು.


ಆ ರಾಜ್ಯಗಳ ದೇವರುಗಳು ತಮ್ಮ ಜನರನ್ನು ರಕ್ಷಿಸಲಾಗಲಿಲ್ಲ. ನನ್ನ ಪೂರ್ವಿಕರು ಅವರನ್ನೆಲ್ಲ ನಾಶಗೊಳಿಸಿದರು. ಅವರು ಗೋಜಾನ್, ಖಾರಾನ್, ರೆಚೆಫ್ ಮತ್ತು ತೆಲಸ್ಸಾರ್‌ನ ಎದೆನಿನ ಜನರನ್ನು ನಾಶಗೊಳಿಸಿದರು!


ಇಸ್ರೇಲಿನ ರಾಜನ ಹತ್ತಿರಕ್ಕೆ ಬಂದ ದೇವಮನುಷ್ಯನ ಸಂದೇಶವು ಇಂತಿದೆ: “ಯೆಹೋವನು ಹೀಗೆಂದನು: ‘ಯೆಹೋವನಾದ ನನ್ನನ್ನು ಬೆಟ್ಟಗಳ ದೇವರೆಂದು ಅರಾಮ್ಯದ ಜನರು ಹೇಳಿದ್ದಾರೆ. ನಾನು ಕಣಿವೆಗಳ ದೇವರಲ್ಲವೆಂದು ಸಹ ಅವರು ಯೋಚಿಸಿಕೊಂಡಿದ್ದಾರೆ. ಆದ್ದರಿಂದ ಈ ಮಹಾಸೇನೆಯನ್ನು ನೀನು ಸೋಲಿಸುವಂತೆ ನಾನು ಅವಕಾಶ ಮಾಡುತ್ತೇನೆ. ನಾನೇ ಯೆಹೋವನೆಂಬುದು ಆಗ ನಿನಗೇ ತಿಳಿಯುತ್ತದೆ!’”


ಅಯ್ಯೋ, ಮಹಾಶಕ್ತಿಶಾಲಿಗಳಾದ ಈ ದೇವರುಗಳಿಂದ ನಮ್ಮನ್ನು ರಕ್ಷಿಸುವವರು ಯಾರು! ಈಜಿಪ್ಟಿನವರಿಗೆ ಕಾಯಿಲೆಗಳನ್ನು ಬರಮಾಡಿದ ದೇವರುಗಳು ಇವರೇ ಅಲ್ಲವೇ.


ನೀನು ಮಾಡಬೇಕಾದದ್ದೇನೆಂದರೆ, ಮೂವತ್ತೆರಡು ಮಂದಿ ರಾಜರು ಸೇನೆಯನ್ನು ಮುನ್ನಡೆಸುವುದು ಬೇಡ; ಅವರ ಸೇನೆಯನ್ನು ಸೇನಾಧಿಪತಿಗಳೇ ಮುನ್ನಡೆಸಲಿ.


ಅವನ ಸೇವಕರು ಅವನಿಗೆ, “ಇಸ್ರೇಲಿನ ರಾಜರುಗಳು ಕನಿಕರವುಳ್ಳವರೆಂದು ನಾವು ಕೇಳಿದ್ದೇವೆ. ನಾವು ಗೋಣಿತಟ್ಟುಗಳನ್ನು (ನಮ್ಮ ನಡುಗಳಿಗೆ) ಕಟ್ಟಿಕೊಂಡು, ಹಗ್ಗಗಳನ್ನು ನಮ್ಮ ತಲೆಗಳ ಮೇಲೆ ಹಾಕಿಕೊಂಡು ಇಸ್ರೇಲಿನ ರಾಜನ ಬಳಿಗೆ ಹೋಗೋಣ. ಅವನು ನಮ್ಮ ಜೀವವನ್ನು ಉಳಿಸಬಹುದು” ಎಂದು ಹೇಳಿದರು.


ಬೇರೆ ಯಾವ ದೇಶದ ದೇವರುಗಳು ನನ್ನ ಕೈಯಿಂದ ತಮ್ಮ ಜನರನ್ನು ತಪ್ಪಿಸಿ ಕಾಪಾಡಿದರು? ಹೀಗಿರಲು ಯೆಹೋವನು ಜೆರುಸಲೇಮನ್ನು ನನ್ನಿಂದ ರಕ್ಷಿಸುವನೋ? ಇಲ್ಲ.’”


ಯೆಹೋವನೇ, ನೀನೇ ನನ್ನ ಬಲವಾಗಿರುವೆ. ನನ್ನ ರಕ್ಷಕನಾಗಿರುವೆ. ಕಷ್ಟ ಬಂದಾಗ ಓಡಿಬಂದು ಆಶ್ರಯ ಪಡೆಯಲು ಸುರಕ್ಷಿತ ಸ್ಥಳವಾಗಿರುವೆ. ಜಗತ್ತಿನ ಎಲ್ಲಾ ಭಾಗಗಳ ಜನಾಂಗದ ಜನರು ನಿನ್ನಲ್ಲಿಗೆ ಬರುವರು. ಅವರು, “ನಮ್ಮ ಪೂರ್ವಿಕರು ಸುಳ್ಳುದೇವರುಗಳನ್ನಿಟ್ಟುಕೊಂಡಿದ್ದರು. ಅವರು ಆ ನಿರರ್ಥಕವಾದ ವಿಗ್ರಹಗಳನ್ನು ಪೂಜಿಸಿದರು. ಆದರೆ ಆ ವಿಗ್ರಹಗಳು ಅವರಿಗೆ ಕೊಂಚವೂ ಸಹಾಯ ಮಾಡಲಿಲ್ಲ” ಎಂದು ಹೇಳುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು