1 ಅರಸುಗಳು 2:28 - ಪರಿಶುದ್ದ ಬೈಬಲ್28 ಯೋವಾಬನು ಈ ಸಂಗತಿಯನ್ನು ಕೇಳಿ ಹೆದರಿದನು. (ಅವನು ಅಬ್ಷಾಲೋಮನಿಗೆ ಬೆಂಬಲ ನೀಡಿಲ್ಲದಿದ್ದರೂ ಅದೋನೀಯನಿಗೆ ಬೆಂಬಲ ನೀಡಿದ್ದನು.) ಯೋವಾಬನು ಯೆಹೋವನ ಗುಡಾರಕ್ಕೆ ಓಡಿಹೋಗಿ ಯಜ್ಞವೇದಿಕೆಯ ಕೊಂಬುಗಳನ್ನು ಹಿಡಿದುಕೊಂಡನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201928 ಈ ವರ್ತಮಾನವು ಯೋವಾಬನಿಗೆ ಮುಟ್ಟಿದ ಕೂಡಲೆ ಅವನು ಯೆಹೋವನ ಗುಡಾರಕ್ಕೆ ಓಡಿಹೋಗಿ ಯಜ್ಞವೇದಿಯ ಕೊಂಬುಗಳನ್ನು ಹಿಡಿದನು. ಅವನು ಅಬ್ಷಾಲೋಮನ ಪಕ್ಷವನ್ನು ಬೆಂಬಲಿಸದಿದ್ದರು ಅದೋನೀಯನ ಪಕ್ಷವನ್ನು ಬೆಂಬಲಿಸಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)28 ಈ ಸುದ್ದಿ ಯೋವಾಬನಿಗೆ ಮುಟ್ಟಿತು. ಅವನು ಕೂಡಲೆ ಸರ್ವೇಶ್ವರನ ಗುಡಾರಕ್ಕೆ ಓಡಿಹೋಗಿ ಬಲಿಪೀಠದ ಕೊಂಬುಗಳನ್ನು ಹಿಡಿದುಕೊಂಡನು. (ಅವನು ಅಬ್ಷಾಲೋಮನ ವಿರೋಧವಾಗಿದ್ದರೂ ಅದೋನೀಯನಿಗೆ ಪರವಾಗಿದ್ದನು.) ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)28 ಈ ವರ್ತಮಾನವು ಯೋವಾಬನಿಗೆ ಮುಟ್ಟಿದ ಕೂಡಲೆ ಅವನು ಯೆಹೋವನ ಗುಡಾರಕ್ಕೆ ಓಡಿಹೋಗಿ ಯಜ್ಞವೇದಿಯ ಕೊಂಬುಗಳನ್ನು ಹಿಡಿದನು. (ಅವನು ಅಬ್ಷಾಲೋಮನ ಪಕ್ಷವನ್ನು ಹಿಡಿಯದಿದ್ದರೂ ಅದೋನೀಯನ ಪಕ್ಷವನ್ನು ಹಿಡಿದಿದ್ದನು.) ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ28 ಆಗ ಈ ಸುದ್ದಿ ಯೋವಾಬನಿಗೆ ಬಂತು. ಏಕೆಂದರೆ ಯೋವಾಬನು ಅಬ್ಷಾಲೋಮನ ಹಿಂದೆ ಹೋಗದೆ ಇದ್ದರೂ, ಅದೋನೀಯನ ಹಿಂದೆ ಹೋದನು. ಆದ್ದರಿಂದ ಯೋವಾಬನು ಯೆಹೋವ ದೇವರ ಮಂದಿರಕ್ಕೆ ಓಡಿಹೋಗಿ ಬಲಿಪೀಠದ ಕೊಂಬುಗಳನ್ನು ಹಿಡಿದನು. ಅಧ್ಯಾಯವನ್ನು ನೋಡಿ |