ಇಸ್ರೇಲನು ಸಾಯುವ ಕಾಲ ಸಮೀಪಿಸಿತು. ಅವನಿಗೆ ತಾನು ಸಾಯುತ್ತೇನೆಂದು ತಿಳಿದು ಬಂದಾಗ, ತನ್ನ ಮಗನಾದ ಯೋಸೇಫನನ್ನು ಕರೆಯಿಸಿ, “ನೀನು ನನ್ನನ್ನು ಪ್ರೀತಿಸುವುದಾದರೆ, ನಿನ್ನ ಕೈಯನ್ನು ನನ್ನ ತೊಡೆಯ ಕೆಳಗಿಟ್ಟು ಪ್ರಮಾಣಮಾಡು. ನಾನು ಹೇಳಿದ್ದನ್ನು ನಡೆಸುವುದಾಗಿಯೂ ನನಗೆ ನಂಬಿಗಸ್ತನಾಗಿರುವುದಾಗಿಯೂ ಪ್ರಮಾಣ ಮಾಡು. ನಾನು ಸತ್ತಾಗ, ನನ್ನನ್ನು ಈಜಿಪ್ಟಿನಲ್ಲಿ ಸಮಾಧಿ ಮಾಡಬೇಡ.