1 ಅರಸುಗಳು 16:29 - ಪರಿಶುದ್ದ ಬೈಬಲ್29 ಆಸನು ಯೆಹೂದದ ರಾಜನಾಗಿದ್ದ ಮೂವತ್ತೆಂಟನೇ ವರ್ಷದಲ್ಲಿ ಒಮ್ರಿಯ ಮಗನಾದ ಅಹಾಬನು ಇಸ್ರೇಲಿನ ರಾಜನಾದನು. ಅಹಾಬನು ಇಸ್ರೇಲನ್ನು ಸಮಾರ್ಯ ಪಟ್ಟಣದಲ್ಲಿ ಇಪ್ಪತ್ತೆರಡು ವರ್ಷ ಆಳಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201929 ಯೆಹೂದ್ಯರ ಅರಸನಾದ ಆಸನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಒಮ್ರಿಯ ಮಗನಾದ ಅಹಾಬನು ಇಸ್ರಾಯೇಲರ ಅರಸನಾಗಿ ಸಮಾರ್ಯಪಟ್ಟಣದಲ್ಲಿ ಇಪ್ಪತ್ತೆರಡು ವರ್ಷ ಆಳ್ವಿಕೆ ಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)29 ಯೆಹೂದ್ಯರ ಅರಸ ಆಸನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಒಮ್ರಿಯ ಮಗ ಅಹಾಬನು ಇಸ್ರಯೇಲರ ಅರಸನಾದನು; ಸಮಾರಿಯ ಪಟ್ಟಣದಲ್ಲಿ ಇಪ್ಪತ್ತೆರಡು ವರ್ಷ ಆಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)29 ಯೆಹೂದ್ಯರ ಅರಸನಾದ ಆಸನ ಆಳಿಕೆಯ ಮೂವತ್ತೆಂಟನೆಯ ವರುಷದಲ್ಲಿ ಒಮ್ರಿಯ ಮಗನಾದ ಅಹಾಬನು ಇಸ್ರಾಯೇಲ್ಯರ ಅರಸನಾಗಿ ಸಮಾರ್ಯಪಟ್ಟಣದಲ್ಲಿ ಇಪ್ಪತ್ತೆರಡು ವರುಷ ಆಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ29 ಯೆಹೂದದ ಅರಸನಾದ ಆಸನ ಮೂವತ್ತೆಂಟನೆಯ ವರ್ಷದಲ್ಲಿ ಒಮ್ರಿಯ ಮಗ ಅಹಾಬನು ಇಸ್ರಾಯೇಲಿನ ಮೇಲೆ ಅರಸನಾಗಿ ಸಮಾರ್ಯದಲ್ಲಿ ಇಪ್ಪತ್ತೆರಡು ವರ್ಷ ಆಳಿದನು. ಅಧ್ಯಾಯವನ್ನು ನೋಡಿ |
ಯಾಕೆಂದರೆ ನೀವು ಒಮ್ರಿಯ ಆಜ್ಞೆಯನ್ನು ಪರಿಪಾಲಿಸಿದಿರಿ. ಅಹಾಬನ ಮನೆಯವರು ಮಾಡುತ್ತಿದ್ದ ದುಷ್ಕೃತ್ಯಗಳನ್ನು ನೀವು ಮಾಡುತ್ತೀರಿ. ನೀವು ಅವರ ಬೋಧನೆಯನ್ನು ಅನುಸರಿಸುತ್ತೀರಿ. ಆದ್ದರಿಂದ ನೀವು ನಾಶವಾಗುವಂತೆ ಮಾಡುವೆನು. ಕೆಡವಲ್ಪಟ್ಟ ನಿಮ್ಮ ನಗರವನ್ನು ನೋಡಿದ ಜನರು ಆಶ್ಚರ್ಯದಿಂದ ಸಿಳ್ಳುಹಾಕುವರು. ಆಗ ಬೇರೆ ಜನಾಂಗದವರು ನಿಮ್ಮ ಮೇಲೆ ಹೊರಿಸಿದ ಅವಮಾನವನ್ನು ನೀವು ಸಹಿಸಿಕೊಳ್ಳುವಿರಿ.”